WhatsApp: ವಾಟ್ಸ್​ಆ್ಯಪ್​​​ನಿಂದ ಬೆರಗುಗೊಳಿಸುವ ಫೀಚರ್: ಸ್ಟೇಟಸ್​​ ಹಾಕುವಾಗ ಬರುತ್ತದೆ ಹೊಸ ಆಯ್ಕೆ

| Updated By: Vinay Bhat

Updated on: Jul 15, 2022 | 12:41 PM

ಸದ್ಯ ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ನಿಮಗೆ ಫೋಟೋಸ್, ಜಿಫ್ ಫೈಲ್, ವಿಡಿಯೋ ಮತ್ತು ಟೆಕ್ಸ್ಟ್​​ಗಳನ್ನು ಹಾಕಲು ಅನುಮತಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಇವುಗಳ ಜೊತೆಗೆ ವಾಯ್ಸ್ ಮೆಸೇಜ್ ಅನ್ನು ಕೂಡ ಸ್ಟೇಟಸ್ ಹಾಕಬಹುದು.

WhatsApp: ವಾಟ್ಸ್​ಆ್ಯಪ್​​​ನಿಂದ ಬೆರಗುಗೊಳಿಸುವ ಫೀಚರ್: ಸ್ಟೇಟಸ್​​ ಹಾಕುವಾಗ ಬರುತ್ತದೆ ಹೊಸ ಆಯ್ಕೆ
WhatsApp
Follow us on

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್​ (WhatsApp) ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಅಥವಾ ಈಗಾಗಲೇ ಇರುವ ಕೆಲ ಫೀಚರ್​ಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಸಾಲು ಸಾಲು ಅಪ್ಡೇಟ್​ಗಳು ಈ ಮೆಸೇಜಿಂಗ್ ಅಪ್ಲಿಕೇಶನ್​ನಲ್ಲಿ ಇನ್ನೂ ಬರುತ್ತಿದೆ. ಕೆಲವು ಪರೀಕ್ಷಾ ಹಂತದಲ್ಲಿದೆ. ತಿಂಗಳ ಹಿಂದೆ ಪರಿಚಯಿಸಿದ್ದ ಮೆಸೇಜ್ ರಿಯಾಕ್ಷನ್ಸ್ (Message Reactions) ಫೀಚರ್​​ಗೆ ಎರಡು ದಿನಗಳ ಹಿಂದೆಯಷ್ಟೆ ಇನ್ನೊಂದಿಷ್ಟು ಎಮೋಜಿಗಳನ್ನು ಸೇರಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಬೆರಗುಗೊಳಿಸುವ ಫೀಚರ್ ಅನ್ನು ಬಳಕೆದಾರರಿಗೆ ನೀಡಲು ವಾಟ್ಸ್​ಆ್ಯಪ್ ಮುಂದಾಗಿದೆ. ಅದುವೇ ಸ್ಟೇಟಸ್​ನಲ್ಲಿ (WhatsApp Status) ವಾಯ್ಸ್ ಮೆಸೇಜ್ ಅನ್ನು ಹಾಕುವ ಆಯ್ಕೆ.

ಹೌದು, ಸದ್ಯ ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ನಿಮಗೆ ಫೋಟೋಸ್, ಜಿಫ್ ಫೈಲ್, ವಿಡಿಯೋ ಮತ್ತು ಟೆಕ್ಸ್ಟ್​​ಗಳನ್ನು ಹಾಕಲು ಅನುಮತಿಯಿದೆ. ಇನ್ನು ಕೆಲವೇ ದಿನಗಳಲ್ಲಿ ಇವುಗಳ ಜೊತೆಗೆ ವಾಯ್ಸ್ ಮೆಸೇಜ್ ಅನ್ನು ಕೂಡ ಸ್ಟೇಟಸ್ ಹಾಕಬಹುದು. WABetaInfo ದಲ್ಲಿ ಈ ಬಗ್ಗೆ ವರದಿಯಾಗಿದ್ದು ಸದ್ಯದಲ್ಲೇ ನೂತನ ಅಪ್ಡೇಟ್​ನಲ್ಲಿ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆಯಂತೆ. ಚಾಟ್ ಬಾಕ್ಸ್​ನಲ್ಲಿ ನಿಮಗೆ ವಾಯ್ಸ್ ಮೆಸೇಜ್ ರೆಕಾರ್ಡ್ ಮಾಡಲು ಯಾವರೀತಿ ಆಯ್ಕೆ ಇದೆಯೋ ಅದೇರೀತಿ ಸ್ಟೇಟಸ್​ನಲ್ಲೂ ಕಾಣಲಿದೆಯಂತೆ. ಇದರ ಜೊತೆಗೆ ಆಡಿಯೋ ಫೈಲ್​ಗಳನ್ನು ಸ್ಟೇಟಸ್​ಗೆ ಹಂಚಿಕೊಳ್ಳುವ ಆಯ್ಕೆ ಬರಲಿದೆ ಎಂಬ ಮಾತುಕೂಡ ಹರಿದಾಡುತ್ತಿದೆ.

ಎಮೋಜಿ ರಿಯಾಕ್ಷನ್ ಫೀಚರ್:

ಇದನ್ನೂ ಓದಿ
Bill Gates: ಬಿಲ್ ಗೇಟ್ಸ್ ಶಾಕಿಂಗ್ ಹೇಳಿಕೆ: ನನಗೆ ಯಾವ ಸಂಪತ್ತು ಬೇಡ, ವಿಶ್ವ ಶ್ರೀಮಂತರ ಪಟ್ಟಿಯಿಂದ ಹೊರಗುಳಿಯುತ್ತೇನೆ
ಭಾರತದಲ್ಲಿ ಭರ್ಜರಿ ಮಾರಾಟ ಆಗುತ್ತಿದೆ ರಿಯಲ್‌ ಮಿ GT ನಿಯೋ 3 ಥಾರ್‌ ಆಂಡ್‌ ಥಂಡರ್‌ ಎಡಿಷನ್‌
Twitter Down: ಮೈಕ್ರೋಬ್ಲಾಗಿಂಗ್​ ಸೈಟ್​ ಟ್ವಿಟರ್​ ತಾತ್ಕಾಲಿಕ ಸ್ಥಗಿತ; ಬಳಕೆದಾರರ ಆಕ್ರೋಶ
Infinix Note 12 Pro 5G: 108MP ಕ್ಯಾಮೆರಾದ ಇನ್ಫಿನಿಕ್ಸ್​ ನೋಟ್ 12 ಪ್ರೊ ಫೋನ್ ಹೇಗಿದೆ?: ಖರೀದಿಸಬಹುದೇ?

ವಾಟ್ಸ್​ಆ್ಯಪ್​ನಲ್ಲಿರವ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್​ಗೆ ಮತ್ತಷ್ಟು ಆಯ್ಕೆಗಳು ಸೇರಿದೆ. ಅಂದರೆ ಲೈಕ್ ಥಂಬ್, ಹಾರ್ಟ್, ಹಾಹಾ, ವಾವ್ಹ್, ಕ್ರೈ ಮತ್ತು ಕೈ ಮುಗಿಯುವ ಆರು ಎಮೋಜಿಗಳ ಜೊತೆಗೆ ಇನ್ನೊಂದಷ್ಟು ಎಮೋಜಿಗಳು ಸೇರ್ಪಡೆಯಾಗಿದೆ. ಈ ಬಗ್ಗೆ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ಆಯ್ಕೆ ಎಲ್ಲರಿಗೂ ಸಿಗುತ್ತಿಲ್ಲ. ಆಯ್ದ ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಇನ್ನೆರಡು ದಿನಗಳ ಒಳಗೆ ಅನೇಕ ಮೆಸೇಜ್ ರಿಯಾಕ್ಷನ್ ಫೀಚರ್​ಗಳಿರುವ ಆಯ್ಕೆ ಎಲ್ಲರಿಗೂ ಸಿಗಲಿದೆ.

ವಾಟ್ಸ್​ಆ್ಯಪ್​ ಪರಿಚಯಿಸಿರುವ ಈ ಆಯ್ಕೆ ಟೆಲಿಗ್ರಾಂಗೆ ನೇರವಾಗಿ ಸೆಡ್ಡೆಹೊಡಯಲಿದೆ. ಸದ್ಯಕ್ಕೆ ಟೆಲಿಗ್ರಾಂನಲ್ಲಿ 17 ಎಮೋಜಿ ರಿಯಾಕ್ಷನ್​ಗಳು ಲಭ್ಯವಿದೆ. ಇನ್ನು ಅನೇಕ ಎಮೋಜಿ ಬೇಕಾದಲ್ಲಿ ಟೆಲಿಗ್ರಾಂ ಪ್ರೀಮಿಯಂ ಉಪಯೋಗಿಸಬೇಕು. ಇದಕ್ಕೆ ನೀವು ಹಣಕೊಡಬೇಕಾಗಿದೆ. ಹೀಗಿರುವಾಗ ವಾಟ್ಸ್​ಆ್ಯಪ್​ ಉಚಿತವಾಗಿ ಇನ್ನೂ ಕೆಲ ವಿಶೇಷ ಎಮೋಜಿ ರಿಯಾಕ್ಷನ್ಸ್ ನೀಡಿದ್ದು ಟೆಲಿಗ್ರಾಂಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.