Twitter Down: ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ತಾತ್ಕಾಲಿಕ ಸ್ಥಗಿತ; ಬಳಕೆದಾರರ ಆಕ್ರೋಶ
Twitter Outage in India: ಟ್ವಿಟರ್ ವೆಬ್‌ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಇದೀಗ ತಾತ್ಕಾಲಿಕವಾಗಿ ಡೌನ್ ಆಗಿದೆ ಎಂದು ಬಳಕೆದಾರರು ಟ್ವೀಟ್ ಮಾಡುತ್ತಿದ್ದಾರೆ.
ಟ್ವಿಟರ್ ವೆಬ್‌ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಇದೀಗ ತಾತ್ಕಾಲಿಕವಾಗಿ ಡೌನ್ ಆಗಿದೆ ಎಂದು ಬಳಕೆದಾರರು ಟ್ವೀಟ್ ಮಾಡುತ್ತಿದ್ದಾರೆ. ಸೈಟ್ ಡೌನ್ ಆಗಿದೆ ಎಂದು ಹೇಳುವವರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದೆ. ಟ್ವಿಟರ್ ಬಳಕೆದಾರರು ಡೆಸ್ಕ್ಟಾಪ್ ವರ್ಶನ್ನಲ್ಲಿ ಟ್ವಿಟರ್ ಬಳಕೆ ಮಾಡಲು ಸಮಸ್ಯೆ ಆಗುತ್ತಿದೆ ಎಂದು ಟ್ವಿಟ್ ಮಾಡುತ್ತಿದ್ದಾರೆ.
ಡೌನ್ ಡಿಟೆಕ್ಟರ್ ಪ್ರಕಾರ, ಸಾವಿರಾರು ಜನರಿಗೆ ಮಧ್ಯಾಹ್ನ 1 ಗಂಟೆಯ ನಂತರ ಟ್ವಿಟರ್ನಲ್ಲಿ ಸಮಸ್ಯೆಗಳು ಪ್ರಾರಂಭವಾಗಿದೆ. ಟ್ವಿಟರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ನಲ್ಲಿ ಏನನ್ನೂ ಅಪ್ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶೇಕಡಾ 48 ಬಳಕೆದಾರರು ವರದಿ ಮಾಡಿದ್ದಾರೆ
ಡೌನ್ ಡಿಟೆಕ್ಟರ್‌ನಲ್ಲಿ ಒಬ್ಬ ಬಳಕೆದಾರನು ಟ್ವಿಟರ್ ನಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ ಅಪ್ಡೇಟ್ ಮಾಡುವಾಗ ‘ಏನೋ ತಪ್ಪಾಗಿದೆ. ಮರುಲೋಡ್ ಮಾಡಲು ಪ್ರಯತ್ನಿಸಿ ಎಂದು ಬರುತ್ತದೆ ಎಂದು ಹೇಳಿದ್ದಾರೆ.
5:50 PM IST ವರೆಗೆ, 500 ಕ್ಕೂ ಹೆಚ್ಚು ಬಳಕೆದಾರರು ಟ್ವಿಟರ್ ಸ್ಥಗಿತವನ್ನು DownDetector.in ನಲ್ಲಿ ವರದಿ ಮಾಡಿದ್ದಾರೆ. ಜಾಗತಿಕವಾಗಿ, 50,000 ಕ್ಕೂ ಹೆಚ್ಚು ಬಳಕೆದಾರರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಡಲ್ಲಾಸ್ US ನಲ್ಲಿ ಪೀಡಿತ ಪ್ರದೇಶಗಳಲ್ಲಿ ಸೇರಿವೆ. ಸ್ಥಗಿತವು ಎಷ್ಟು ಕಾಲ ಉಳಿಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
DownDetector.com ಪ್ರಕಾರ, ಈ ಸಮಸ್ಯೆಗಳನ್ನು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿವೆ. ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ. ಹಲವಾರು ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಫೀಡ್ ಸರಿಯಾಗಿ ಲೋಡ್ ಆಗುತ್ತಿಲ್ಲ. ಈ ಟ್ವಿಟರ್ ಸ್ಥಗಿತಕ್ಕೆ ಕಾರಣವೇನು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಬಂದಿಲ್ಲ .
ಈ ಬಗ್ಗೆ ಟ್ವಿಟರ್ನಿಂದ ಅಧಿಕೃತವಾಗಿ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.
Published On - 6:10 pm, Thu, 14 July 22