ವಾಟ್ಸಾಪ್​ನಲ್ಲಿ ಇಂಟರ್ನೆಟ್ ಇಲ್ಲದೆಯೂ ಫೋಟೋ, ವಿಡಿಯೋ ಷೇರ್ ಮಾಡಬಹುದು; ಬರಲಿದೆ ಹೊಸ ಫೀಚರ್

Whatsapp file sharing without internet: ವಾಟ್ಸಾಪ್ ಹೊಸ ಫೀಚರ್​ವೊಂದನ್ನು ಪರೀಕ್ಷಿಸುತ್ತಿದೆ. ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್​ನಲ್ಲಿ ಫೋಟೋ, ವಿಡಿಯೋ ಇತ್ಯಾದಿ ಫೈಲ್ ಶೇರಿಂಗ್ ಮಾಡಲು ಅವಕಾಶ ಕೊಡುವ ಫೀಚರ್ ಇದು. ಬೀಟಾ ಆವೃತ್ತಿಯಲ್ಲಿ ಇದು ಪರೀಕ್ಷಿಸಲಾಗುತ್ತಿದ್ದು, ಶೀಘ್ರದಲ್ಲಿ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ನಿಯರ್​ಬೈ ಡಿವೈಸ್, ಕ್ವಿಕ್ ಶೇರಿಂಗ್ ಇತ್ಯಾದಿ ಫೀಚರ್ ರೀತಿಯಲ್ಲಿ ಇದು ಇರಬಹುದು.

ವಾಟ್ಸಾಪ್​ನಲ್ಲಿ ಇಂಟರ್ನೆಟ್ ಇಲ್ಲದೆಯೂ ಫೋಟೋ, ವಿಡಿಯೋ ಷೇರ್ ಮಾಡಬಹುದು; ಬರಲಿದೆ ಹೊಸ ಫೀಚರ್
WhatsApp
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 24, 2024 | 6:20 PM

ವಾಟ್ಸಾಪ್​ನಲ್ಲಿ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಗಾಗ್ಗೆ ಅಪ್​ಡೇಟ್​ಗಳಾಗುತ್ತಿರುತ್ತವೆ. ಇತ್ತೀಚೆಗೆ ವಾಟ್ಸಾಪ್​ನಲ್ಲಿ 2ಜಿಬಿವರೆಗೂ ಫೈಲ್​ಗಳನ್ನು ಕಳುಹಿಸುವ ಅವಕಾಶ ಕೊಡಲಾಗಿದೆ. ಈಗ ಇಂಟರ್ನೆಟ್ ಇಲ್ಲದೆಯೂ ಫೈಲ್ ಕಳುಹಿಸುವ (whatsapp file sharing) ಒಂದು ಅವಕಾಶವನ್ನು ವಾಟ್ಸಾಪ್ ನೀಡಲು ಮುಂದಾಗಿದೆ. ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಆಫ್​ಲೈನ್​ನಲ್ಲಿ ಫೋಟೋ, ವಿಡಿಯೋ ಮತ್ತಿತರ ಫೈಲ್​ಗಳನ್ನು ಹಂಚಿಕೊಳ್ಳಬಹುದು. ಆದರೆ, ಸಮೀಪದ ಮೊಬೈಲ್​ಗಳಿಗೆ ಮಾತ್ರ ಫೈಲ್ ಶೇರಿಂಗ್ ಸಾಧ್ಯವಾಗುತ್ತದೆ. ಬ್ಲೂಟೂಥ್ ಸಹಾಯದಿಂದ ಫೈಲ್​ಗಳನ್ನು ಹಂಚಿಕೊಳ್ಳುವ ಒಂದು ಸಾಧ್ಯತೆಯನ್ನು ವಾಟ್ಸಾಪ್ ನೀಡಬಹುದು.

ವರದಿ ಪ್ರಕಾರ ಈ ಫೀಚರ್ ಅನ್ನು ವಾಟ್ಸಾಪ್ ತನ್ನ ಬೀಟಾ ವರ್ಷನ್​ನಲ್ಲಿ ಪರೀಕ್ಷಿಸುತ್ತಿದೆ. ಈ ಫೀಚರ್ ಬಳಸಬೇಕಾದರೆ ನಿಮ್ಮ ಫೋನ್​ನ ಪೋಟೋ ಗ್ಯಾಲರಿ ತೆರೆಯಲು ಮತ್ತು ಲೊಕೇಶನ್ ಪಡೆಯಲು ಅನುಮತಿಸಬೇಕಾಗುತ್ತದೆ. ಸಮೀಪದ ಸಾಧನಗಳಿಗೂ ಅನುಮತಿಸಬೇಕಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಆ್ಯಪ್​ಗಳು ಇಂಥ ಪರ್ಮಿಷನ್​ಗಳನ್ನು ಕೇಳುತ್ತವೆ. ಈ ಆ್ಯಪ್​ಗಳ ಎಲ್ಲಾ ಫೀಚರ್ ಕೆಲಸ ಮಾಡಬೇಕಾದರೆ ಈ ಅನುಮತಿಗಳನ್ನು ನೀಡುವುದು ಅನಿವಾರ್ಯ ಕೂಡ ಆಗಿರುತ್ತದೆ.

ಇದನ್ನೂ ಓದಿ: EPF Transfer: ಹಳೆ ಪಿಎಫ್ ಖಾತೆ ಹಣ ಹೊಸ ಅಕೌಂಟ್ ಟ್ರಾನ್ಸ್​ಫರ್​ಗೆ ಎಷ್ಟು ದಿನ ಬೇಕು?

ವಾಟ್ಸಾಪ್ ಈ ಆಫ್​ಲೈನ್ ಫೈಲ್ ಶೇರಿಂಗ್ ಫೀಚರ್ ಅನ್ನು ಪರೀಕ್ಷಿಸುತ್ತಿದ್ದು ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದು ಗೊತ್ತಾಗಿಲ್ಲ. ಶೀಘ್ರದಲ್ಲೇ ಇದು ಶುರುವಾಗಬಹುದು ಎನ್ನಲಾಗಿದೆ. ಒಂದು ವೇಳೆ ನೀವು ಫೈಲ್ ಶೇರಿಂಗ್ ಫೀಚರ್ ಬೇಡವೆಂದರೆ ಯಾವಾಗ ಬೇಕಾದರೂ ಅದನ್ನು ಮ್ಯಾನುಯಲ್ ಆಗಿ ಡಿಸೇಬಲ್ ಮಾಡಬಹುದು.

ಇತ್ತೀಚೆಗೆ ವಾಟ್ಸಾಪ್ ಇನ್ನೂ ಕೆಲ ಫೀಚರ್​ಗಳನ್ನು ಪರಿಚಯಿಸಿದೆ. ಅದರ ಯುಐ ಇಂಟರ್​ಫೇಸ್​ನಲ್ಲೂ ಒಂದಷ್ಟು ಬದಲಾವಣೆ ಮಾಡಲಾಗಿದೆ. ‘ಅಪ್​ಡೇಟ್ಸ್’ ಎನ್ನುವ ಹೊಸ ಟ್ಯಾಬ್ ತಂದಿದ್ದು ಅದರಲ್ಲಿ ವಿವಿಧ ವಾಟ್ಸಾಪ್ ಚಾನಲ್​ಗಳನ್ನು ನೋಡಬಹುದು. ಸ್ಟೇಟಸ್​ಗಳನ್ನೂ ಅಲ್ಲಿಯೇ ವೀಕ್ಷಿಸಬಹುದು. ಇನ್ನು. ಮೇಲ್ಭಾಗದಲ್ಲಿದ್ದ ಚ್ಯಾಟ್ಸ್, ಅಪ್​ಡೇಟ್ಸ್, ಕಮ್ಯೂನಿಟೀಸ್ ಇತ್ಯಾದಿ ಟ್ಯಾಬ್​ಗಳನ್ನು ಕೆಳಗೆ ತರಲಾಗಿದೆ.

ಇದನ್ನೂ ಓದಿ: EPF Transfer: ಹಳೆ ಪಿಎಫ್ ಖಾತೆ ಹಣ ಹೊಸ ಅಕೌಂಟ್ ಟ್ರಾನ್ಸ್​ಫರ್​ಗೆ ಎಷ್ಟು ದಿನ ಬೇಕು?

ಈ ಮಧ್ಯೆ ಇನ್ನೂ ಒಂದು ಹೊಸ ಫೀಚರ್ ಅನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ರೀಸೆಂಟ್ಲಿ ಆನ್ಲೈನ್ ಎಂಬ ಈ ಫೀಚರ್​ನಲ್ಲಿ ಪ್ರಸಕ್ತ ಆನ್​ಲೈನ್​ನಲ್ಲಿ ಇರುವ ಅಥವಾ ಇತ್ತೀಚೆಗೆ ಆನ್ಲೈನ್​ನಲ್ಲಿ ಇದ್ದ ನಿಮ್ಮ ಕಾಂಟ್ಯಾಕ್ಟ್​​ಗಳ ಪಟ್ಟಿ ಕಾಣುತ್ತದೆ. ಇದು ವಾಟ್ಸಾಪ್ ಕರೆ ಮಾಡುವವರಿಗೆ ಅನುಕೂಲವಾಗಬಹುದು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ