AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi 12 Series: ಸ್ಮಾರ್ಟ್​ಫೋನ್ ಮಾರುಕಟ್ಟೆಯೇ ತಲ್ಲಣ: ಶವೋಮಿ 12 ಸರಣಿ ಡಿಸೆಂಬರ್ 28ಕ್ಕೆ ಬಿಡುಗಡೆ: ಇದರಲ್ಲಿ ಅಂಥದ್ದೇನಿದೆ?

Xiaomi 12 and Xiaomi 12 Pro: ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್​ಫೋನ್ ಹೊಸ ವರ್ಷ (New Year 2022) ಮತ್ತು ಕ್ರಿಸ್ಮಸ್ ಪ್ರಯುಕ್ತ ಇದೇ ಡಿಸೆಂಬರ್ 28 ರಂದು ಜಾಗತೀಕವಾಗಿ ಅನಾವರಣಗೊಳ್ಳಲಿದೆ.

Xiaomi 12 Series: ಸ್ಮಾರ್ಟ್​ಫೋನ್ ಮಾರುಕಟ್ಟೆಯೇ ತಲ್ಲಣ: ಶವೋಮಿ 12 ಸರಣಿ ಡಿಸೆಂಬರ್ 28ಕ್ಕೆ ಬಿಡುಗಡೆ: ಇದರಲ್ಲಿ ಅಂಥದ್ದೇನಿದೆ?
Xiaomi 12 and Xiaomi 12 Pro
TV9 Web
| Updated By: Vinay Bhat|

Updated on: Dec 23, 2021 | 3:35 PM

Share

ಶವೋಮಿ (Xiaomi) ಕಂಪನಿ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಎದ್ದು ನಿಂತು ತನ್ನದೇ ಆದ ವಿಶೇಷ ಸ್ಥಾನ ಸಂಪಾದಿಸಿದೆ. ಸ್ಮಾರ್ಟ್​ಫೋನ್ (Smartphone), ಸ್ಮಾರ್ಟ್​ ಚಾವ್, ಸ್ಮಾರ್ಟ್​ ಟಿವಿ (Smart TV), ಪವರ್ ಬ್ಯಾಂಕ್ ಮೂಲಕ ಗ್ರಾಹಕರಿಗೆ ಹತ್ತಿರವಾಗಿದ್ದ ಕಂಪನಿ ಇದೀಗ ತನ್ನದೇ ರೀತಿಯಲ್ಲಿ ಮಾರುಕಟ್ಟೆಯನ್ನು ಆಳುತ್ತಿದೆ. ಅಲ್ಲದೆ ಒಂದು ಹೆಜ್ಜೆ ಮುಂದಿಟ್ಟಿರುವ ಶವೋಮಿ ಕಾರು ಉತ್ಪಾದನೆಯತ್ತ ಕೂಡ ಕಣ್ಣುಹಾಯಿಸಿದೆ. ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಶವೋಮಿ ಈಗ ತನ್ನ ಬಹುನಿರೀಕ್ಷಿತ ಶವೋಮಿ 12 ಸರಣಿ (Xiaomi 12 Series) ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಶವೋಮಿ 12 (Xiaomi 12) ಮತ್ತು ಶವೋಮಿ 12 ಪ್ರೊ (Xiaomi 12 Pro) ಸ್ಮಾರ್ಟ್​ಫೋನ್ ಹೊಸ ವರ್ಷ (New Year 2022) ಮತ್ತು ಕ್ರಿಸ್ಮಸ್ ಪ್ರಯುಕ್ತ ಇದೇ ಡಿಸೆಂಬರ್ 28 ರಂದು ಜಾಗತೀಕವಾಗಿ ಅನಾವರಣಗೊಳ್ಳಲಿದೆ.

ಸದ್ಯಕ್ಕೆ ಡಿಸೆಂಬರ್ 28 ರಂದು ಚೀನಾದಲ್ಲಿ ಅಧಿಕೃತವಾಗಿ ಈ ಫೋನ್ ಬಿಡುಗಡೆ ಆಗಲಿದೆ. ಈ ಬಗ್ಗೆ ಶವೋಮಿ ಸಂಸ್ಥೆಯೇ ಸ್ವತಃ ಈ ಎರಡೂ ಫೋನ್‌ಗಳ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ. ಶವೋಮಿ 12 ಕಾಂಪ್ಯಾಕ್ಟ್‌ ರಚನೆಯನ್ನು ಹೊಂದಿದ್ದು, ಶವೋಮಿ 12 ಪ್ರೊ ದೊಡ್ಡ ಸ್ಕ್ರೀನ್ ರಚನೆ ಹೊಂದಿರುವ ಅಂಶ ಟೀಸರ್ ಚಿತ್ರದಲ್ಲಿದೆ. WHY LAB ಪ್ರಕಾರ, ಶವೋಮಿ ಕಂಪನಿ Xiaomi 12 ಮತ್ತು XIaomi 12 Pro Snapdragon 8 Gen 1 ನಿಂದ ಚಾಲಿತವಾಗುವ ಸಾಧ್ಯತೆಯಿದೆ ಎಂದಿದೆ. ಶವೋಮಿ 12 ಮತ್ತು ಶವೋಮಿ 12 ಪ್ರೊ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮುಂಭಾಗವನ್ನು ಮಾತ್ರ ತೋರಿಸುತ್ತದೆ. ಇದರ ಪವರ್ ಬಟನ್ ಮತ್ತು ಬಲ ಭಾಗದಲ್ಲಿ ವಾಲ್ಯೂಮ್ ರಾಕರ್ ಇದೆ.

ಅಂತೆಯೆ ಶವೋಮಿ 12 ಫೋನ್ 6.2 ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇ ಅನ್ನು ಹೊಂದಿದೆ ಎಂದು ಸೂಚಿಸಲಾಗಿದೆ. ಇನ್ನು ಶವೋಮಿ 12 ಪ್ರೊ ಮಾಡೆಲ್‌ ಫೋನ್ ಡಿಸ್‌ಪ್ಲೇ ದೊಡ್ಡದಾಗಿದ್ದು, ಎಡ ಭಾಗದಲ್ಲಿ ಯಾವುದೇ ಬಟನ್ ಆಯ್ಕೆ ಕಾಣಿಸಿಲ್ಲ. ಈ ಫೋನ್ ಮಾದರಿಯು 6.9 ಇಂಚಿನ QHD + AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ನಿರೀಕ್ಷೆಗಳಿವೆ. ಇದರೊಂದಿಗೆ ಈ ಫೋನ್‌ಗಳ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎನ್ನಲಾಗಿದೆ.

ಶವೋಮಿ 12 Pro 3C ಪ್ರಮಾಣೀಕರಣ ಸೈಟ್​ನಲ್ಲಿ ಕಾಣಿಸಿಕೊಂಡಿದೆ. ಈ ಸಾಧನವು 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಎಂದು ಸೂಚಿಸುತ್ತದೆ. ಅಂದರೆ, ಈ ಫೋನ್ ಅನ್ನು 10 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಇನ್ನು ಈ ಎರಡೂ ಫೋನ್‌ಗಳು ಒಂದೇ ರೀತಿಯ ಫ್ರೇಮ್‌ಗಳು ರಚನೆ ಮತ್ತು ಬಟನ್ ಪ್ಲೇಸ್‌ಮೆಂಟ್‌ಗಳನ್ನು ಒಳಗೊಂಡಿವೆ. ಶವೋಮಿ 12 ಮತ್ತು ಶವೋಮಿ 12 ಪ್ರೊ ಕೇಂದ್ರೀಯವಾಗಿ ಇರಿಸಲಾದ ಹೋಲ್ ಪಂಚ್ ಕಟೌಟ್ ಅನ್ನು ಹೊಂದಿವೆ. 12 ಫೋನ್ ಡ್ಯುಯಲ್ LED ಫ್ಲ್ಯಾಷ್‌ ನೊಂದಿಗೆ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಅದೇ ರೀತಿ ಶವೋಮಿ 12 ಪ್ರೊ ಫೋನ್ ಹಿಂಭಾಗದಲ್ಲಿ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಬಗ್ಗೆ ಮಾಹಿತಿ ಇಲ್ಲ.

Infinix Note 11: 33W ವೇಗದ ಚಾರ್ಜಿಂಗ್, 50MP ಕ್ಯಾಮೆರಾ: ಮೊದಲ ಸೇಲ್ ಕಾಣುತ್ತಿದೆ ಇನ್ಫಿನಿಕ್ಸ್‌ ನೋಟ್‌ 11

Asus ROG Phone 5 Ultimate: ರಿಲೀಸ್ ಆದ 9 ತಿಂಗಳ ಬಳಿಕ ಭಾರತದಲ್ಲಿ ಡಿ 26 ರಂದು ಸೇಲ್ ಕಾಣಲಿದೆ ಆಸುಸ್ ROG ಫೋನ್ 5 ಅಲ್ಟಿಮೇಟ್

(Xiaomi 12 series Xiaomi 12 and Xiaomi 12 Pro launching on December 28 and its confirmed it will be made official)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ