ಭಾರತದ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆ ಸಾಕಷ್ಟು ವಿಸ್ತಾರಗೊಂಡಿದೆ. ಹಲವು ಕಂಪನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ತಿಂಗಳು ಅನೇಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ ಕೆಲವು ಯಶಸ್ಸು ಕಂಡರೆ ಇನ್ನೂ ಕೆಲ ಫೋನ್ಗಳು ಫೇಲ್ ಆದವು. ಅದರಂತೆ ಮುಂದಿನ ಏಪ್ರಿಲ್ (April) ತಿಂಗಳಲ್ಲೂ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ. ಫೋನ್ ಪ್ರಿಯರು ಕೂಡ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದು ಉತ್ತಮ ಮೊಬೈಲ್ಗಾಗಿ (Mobile) ಕಾಯುತ್ತಿದ್ದಾರೆ. ಹಾಗಾದ್ರೆ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
ಶವೋಮಿ 13: ಶವೋಮಿ ಕಂಪನಿಯ ಬಹುನಿರೀಕ್ಷಿತ ಶವೋಮಿ 13 ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, 8GB RAM ನೊಂದಿಗೆ ಬರುತ್ತದೆ. 120Hz ರಿಫ್ರೆಶ್ ದರದೊಂದಿಗೆ 6.36-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ಇದು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯಿಂದ ಕೂಡಿದೆ. 50MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32MP ಕ್ಯಾಮೆರಾ ಅಳವಡಿಸಲಾಗಿದೆ. ಬಲಿಷ್ಠವಾದ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ನೀಡಲಾಗಿದೆ.
Moto G13: 50 MP ಭರ್ಜರಿ ಕ್ಯಾಮೆರಾ, 5,000mAh ಬ್ಯಾಟರಿಯ ಮೋಟೊ ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 12 4G: ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ರೆಡ್ಮಿ ನೋಟ್ 12 5G ರೀತಿಯಲ್ಲೇ ಇದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 4 Gen 1 ಪ್ರೊಸೆಸರ್ ಬದಲಿಗೆ, ಇದು ಸ್ನಾಪ್ಡ್ರಾಗನ್ 685 ಪ್ರೊಸೆಸರ್ ಅಳವಡಿಸಲಾಗಿದೆ. ವರದಿಗಳ ಪ್ರಕಾರ, ಇದು ರೆಡ್ಮಿ ನೋಟ್ 12 5G ಯಲ್ಲಿ ಕಂಡುಬರುವ 50MP ಪ್ರಾಥಮಿಕ ಕ್ಯಾಮೆರಾದ ಬದಲಿಗೆ 48MP ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆಯಂತೆ.
ರೆಡ್ಮಿ 12C: ರೆಡ್ಮಿ 12C ಸ್ಮಾರ್ಟ್‌ಫೋನ್ 6.71-ಇಂಚಿನ HD+ ಡಿಸ್ ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಹಿಲಿಯೊ G85 SoC ನಿಂದ ಚಾಲಿತವಾಗಿದೆ. 50MP ಪ್ರಾಥಮಿಕ ಕ್ಯಾಮೆರಾ ಇರುವ ಸಾಧ್ಯತೆ ಇದೆ. 10W ವೇಗದ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿ ಇರಲಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರಲಿದೆಯಂತೆ.
ಒಪ್ಪೋ ರೆನೋ 9: ಮುಂದಿನ ತಿಂಗಳು ಬಿಡುಗಡೆ ಆಗಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳ ಪೈಕಿ ಒಪ್ಪೋ ರೆನೋ 9 ಕೂಡ ಒಂದು. ಇದು 1080×2400 ರೆಸಲ್ಯೂಶನ್ ಮತ್ತು 120Hz ನ ರಿಫ್ರೆಶ್ ದರದ 6.7-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ವರದಿಗಳ ಪ್ರಕಾರ, ಇದು 8GB RAM ನೊಂದಿಗೆ ಜೋಡಿಸಲಾದ ಸ್ನಾಪ್ಡ್ರಾಗನ್ 778G ಪ್ರೊಸೆಸರ್ನಿಂದ ಚಾಲಿತವಾಗಿದೆ. ಹಿಂಭಾಗದಲ್ಲಿ 64MP ಪ್ರಾಥಮಿಕ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿಲಾಗಿದೆ. ಬ್ಯಾಟರಿಯು 4500mAh ನಿಂದ ಕೂಡಿರಲಿದೆ. ಇದಕ್ಕೆ ತಕ್ಕಂತೆ SuperVOOC ಚಾರ್ಜಿಂಗ್ ನೀಡಲಾಗುತ್ತಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ