Tech Tips: ಮೊಬೈಲ್ ನಂಬರ್ ಹಾಕದೇ ವಾಟ್ಸ್ಆ್ಯಪ್ ಉಪಯೋಗಿಸುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
WhatsApp Without Phone Number: ಸಾಮಾನ್ಯವಾಗಿ ವಾಟ್ಸ್ಆ್ಯಪ್ ಖಾತೆ ತೆರೆಯಬೇಕಾದರೆ ಮೊಬೈಲ್ ನಂಬರ್ ಬೇಕು. ಇದು ಕಡ್ಡಾಯ. ಇಲ್ಲವಾದಲ್ಲಿ ಅಕೌಂಟ್ ಕ್ರಿಯೆಟ್ ಆಗುವುದಿಲ್ಲ. ಆದರೆ, ಮೊಬೈಲ್ ನಂಬರ್ ಇಲ್ಲದೆಯೂ ವಾಟ್ಸ್ಆ್ಯಪ್ ಉಪಯೋಗಿಸುವ ಟ್ರಿಕ್ ಒಂದಿದೆ ಎಂದರೆ ನಂಬುತ್ತೀರಾ?.
ವಾಟ್ಸ್ಆ್ಯಪ್ (WhatsApp) ಇಂದು ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಆಗಿಬಿಟ್ಟಿದೆ. ಭಾರತದಲ್ಲೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಈ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ಅನ್ನು ಕಿರಿಯರಿಂದ ಹಿಡಿದು ಹಿರಿಯರ ವರೆಗೆ ಉಪಯೋಗಿಸುತ್ತಿದ್ದಾರೆ. ಚಾಟ್ ಮಾಡಲು, ಫೋಟೋ, ವಿಡಿಯೋ ಕಳುಹಿಸಲು ಮಾತ್ರವಲ್ಲದೆ ಈಗ ವಾಟ್ಸ್ಆ್ಯಪ್ನಲ್ಲಿ ಉಚಿತವಾಗಿ ಕರೆ ಮಾಡಲು ಕೂಡ ಹೆಚ್ಚಿನವರರು ಬಳಕೆ ಮಾಡುತ್ತಾರೆ. ಕಂಪನಿ ಕೂಡ ತನ್ನ ಬಳಕೆದಾರರನ್ನು ನಿರಾಸೆ ಮಾಡದೆ ತಿಂಗಳಿಗೆ ಒಂದೊಂದು ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ಸಾಮಾನ್ಯವಾಗಿ ವಾಟ್ಸ್ಆ್ಯಪ್ ಖಾತೆ ತೆರೆಯಬೇಕಾದರೆ ಮೊಬೈಲ್ ನಂಬರ್ (Mobile Number) ಬೇಕು. ಇದು ಕಡ್ಡಾಯ. ಇಲ್ಲವಾದಲ್ಲಿ ಅಕೌಂಟ್ ಕ್ರಿಯೆಟ್ ಆಗುವುದಿಲ್ಲ. ಆದರೆ, ಮೊಬೈಲ್ ನಂಬರ್ ಇಲ್ಲದೆಯೂ ವಾಟ್ಸ್ಆ್ಯಪ್ ಉಪಯೋಗಿಸುವ ಟ್ರಿಕ್ (Tricks) ಒಂದಿದೆ ಎಂದರೆ ನಂಬುತ್ತೀರಾ?.
ಇಂದು ವಾಟ್ಸ್ಆ್ಯಪ್ ಉಪಯೋಗಿಸಬೇಕು ಎಂದು ಅನೇಕ ಜನರಿಗೆ ಇರುತ್ತದೆ. ಆದರೆ ಇದರಲ್ಲಿ ತಮ್ಮ ಫೋನ್ ಸಂಖ್ಯೆಗಳು ಕಾಣಿಸಿಕೊಳ್ಳುವುದರಿಂದ ಖಾತೆ ತೆರೆಯಲು ಹಿಂಜರಿಯುತ್ತಾರೆ. ಕೆಲವರು ನಿಮ್ಮನ್ನ ಯಾವುದೋ ವಾಟ್ಸ್ಆ್ಯಪ್ ಗ್ರೂಪ್ಗೆ ಆ್ಯಡ್ ಮಾಡಿದರೆ ಅದರಲ್ಲಿರುವ ಇತರೆ ಸದಸ್ಯರು ಮೆಸೇಜ್ ಮಾಡಿ ತೊಂದರೆ ಕೊಡುತ್ತಾರೆ. ಹೀಗಾಗಿ ಕೆಲವರು ವಾಟ್ಸ್ಆ್ಯಪ್ ಖಾತೆಯನ್ನೇ ತೆರೆದಿರುವುದಿಲ್ಲ. ಇಂಥವರು ಈಗ ಬೇಸರ ಪಡಬೇಕಿಲ್ಲ. ಯಾಕೆಂದರೆ ವಾಟ್ಸ್ಆ್ಯಪ್ನಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕದೇ ಉಪಯೋಗಿಸಬಹುದು. ಇದಕ್ಕೆ ಒಂದು ಟ್ರಿಕ್ ಇದೆ.
Tech Tips: ನೀವು ನಿಮ್ಮ ಮೊಬೈಲ್ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತಿದ್ದರೆ ಇಂದೇ ನಿಲ್ಲಿಸಿ: ಯಾಕೆ ಗೊತ್ತೇ?
ಯಾವುದೇ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯಬೇಕಾದರೆ ಫೋನ್ ನಂಬರ್ ಬೇಕೇ ಬೇಕು. ಆದರೆ, ಅದು ನೀವು ಉಪಯೋಗಿಸುತ್ತಿರುವ ಮೊಬೈಲ್ ನಂಬರ್ ಆಗಿರಬೇಕು ಎಂದಿಲ್ಲ. ವಾಟ್ಸ್ಆ್ಯಪ್ನಲ್ಲಿ ಕೆಲ ಜನರು ನಿಮಗೆ ತೊಂದರೆ ಕೊಡುತ್ತಿದ್ದರೆ ನಿಮ್ಮ ಹಳೆಯ ಸಂಖ್ಯೆಯನ್ನು ತೆಗೆದುಹಾಕಿ. ಯಾಕೆಂದರೆ ನಿಮ್ಮ ಮೊಬೈಲ್ ನಂಬರ್ ಅನ್ನು ಹೈಡ್ ಮಾಡುವ ಯಾವುದೇ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಿಲ್ಲ. ಹೀಗಿರುವಾಗ ನೀವು ನಿಮ್ಮ ಮೊಬೈಲ್ ನಂಬರ್ ನೀಡದೆ ವಾಟ್ಸ್ಆ್ಯಪ್ ಖಾತೆ ತೆರೆಯಲು ನಿಮ್ಮ ಲ್ಯಾಂಡ್‌ಲೈನ್ ನಂಬರ್ ನೀಡಬಹುದು. ಹೌದು, ನೀವು ಸ್ಥಿರ ದೂರವಾಣಿ ಸಂಖ್ಯೆಗಳೊಂದಿಗೆ ವಾಟ್ಸ್ಆ್ಯಪ್ ಅಕೌಂಟ್ ತೆರೆಯುವ ಅವಕಾಶವಿದೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ವಿವರ.
- ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಪ್ಲೇಸ್ಟೋರ್ ಓಪನರ್ ಮಾಡಿ ವಾಟ್ಸ್ಆ್ಯಪ್ ಡೌನ್‌ಲೋಡ್ ಮಾಡಿ.
- ಐಫೋನ್ ಬಳಕೆದಾರರು ಆ್ಯಪ್ ಸ್ಟೋರ್ನಿಂದ ವಾಟ್ಸ್ಆ್ಯಪ್ ಅಪ್ಲಿಕೇಶನ್ ಡೌನ್ಲೋಡಿ ಮಾಡಿ ತೆರೆಯಿರಿ.
- ನಂಬರ್ ನಮೋದಿಸಬೇಕಾಗಿರುವ ಜಾಗದಲ್ಲಿ ನಿಮ್ಮ ಲ್ಯಾಂಡ್‌ಲೈನ್ ಸಂಖ್ಯೆಯನ್ನು ಹಾಕಿರಿ ಹಾಗೂ ‘Next’ ಆಯ್ಕೆ ಒತ್ತರಿ.
- ಈಗ ವಾಟ್ಸ್ಆ್ಯಪ್ ನೀವು ನಮೋದಿಸಿರುವ ನಂಬರ್ ಸರಿಯಾಗಿದೆಯೇ ಅಥವಾ ಇಲ್ಲವೇ ಎಂದು ಕೇಳುತ್ತದೆ. ಸಂಖ್ಯೆಯನ್ನು ಪರಿಶೀಲಿಸಿ ಮತ್ತು ನಂತರ ‘ಸರಿ’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನೀವು ನಮೋದಿಸಿರುವ ಸಂಖ್ಯೆಗೆ ವಾಟ್ಸ್ಆ್ಯಪ್ ವೆರಿಫಿಕೇಷನ್ ಕೋಡ್ ಕಳುಹಿಸುತ್ತದೆ.
- ನಿಮ್ಮದು ಲ್ಯಾಂಡ್‌ಲೈನ್ ಫೋನ್ ಆಗಿದ್ದರಿಂದ ಮೆಸೇಜ್ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
- ವಾಟ್ಸ್ಆ್ಯಪ್ನಲ್ಲಿ ನಿಮಗೆ ಕಾಣಿಸುವ ಕಾಲ್ ಆಯ್ಕೆಯನ್ನು ಬಳಸಿ ಕೋಡ್ ಪಡೆಯಬೇಕು.
- ಇದಕ್ಕಾಗಿ ನೀವು ಸುಮಾರು 90 ಸೆಕೆಂಡುಗಳ ಕಾಲ ಕಾಯಬೇಕಾಗುತ್ತದೆ.
- 90 ಸೆಕೆಂಡ್ ನಂತರ ಕಾಲ್ ಮಿ ಆಯ್ಕೆಯನ್ನು ಟ್ಯಾಪ್ ಮಾಡಿ.
- ಲ್ಯಾಂಡ್ಲೈನ್ಗೆ ಕರೆ ಬಂದಾಗ ಸ್ವೀಕರಿಸಿ ಅಲ್ಲಿ ತಿಳಿಸಿದ ಕೋಡ್ ಅನ್ನು ವಾಟ್ಸ್ಆ್ಯಪ್ನಲ್ಲಿ ನಮೋದಿಸಿ ಮುಂದುವರೆಯಿರಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Thu, 30 March 23