Moto G13: 50 MP ಭರ್ಜರಿ ಕ್ಯಾಮೆರಾ, 5,000mAh ಬ್ಯಾಟರಿಯ ಮೋಟೊ ಸ್ಮಾರ್ಟ್​ಫೋನ್

ಮೋಟೊರೊಲಾ, ಭಾರತದ ಮಾರುಕಟ್ಟೆಗೆ ಜಿ ಸರಣಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ನೂತನ ಫೋನ್​ನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ, ಬಜೆಟ್ ದರ ಮತ್ತು 5,000mAh ಬ್ಯಾಟರಿ ವಿಶೇಷವಾಗಿದೆ. ಮೋಟೊರೊಲಾ ಲೆನೊವೊ ತೆಕ್ಕೆಗೆ ಹೋದ ಬಳಿಕ, ಹಲವು ಮಾದರಿಗಳನ್ನು ಭಾರತದಲ್ಲಿನ ಆ್ಯಂಡ್ರಾಯ್ಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Moto G13: 50 MP ಭರ್ಜರಿ ಕ್ಯಾಮೆರಾ, 5,000mAh ಬ್ಯಾಟರಿಯ ಮೋಟೊ ಸ್ಮಾರ್ಟ್​ಫೋನ್
Moto G13 ಸ್ಮಾರ್ಟ್​ಫೋನ್
Follow us
|

Updated on: Mar 29, 2023 | 6:46 PM

ಲೆನೊವೊ ಒಡೆತನದ ಮೋಟೊರೊಲಾ ಕಂಪನಿ, ಭಾರತದ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಹೆಚ್ಚಿನ ಬಳಕೆದಾರರು ಬಯಸುವ ಗರಿಷ್ಠ ಬ್ಯಾಟರಿ ಮತ್ತು ಹೆಚ್ಚಿನ ಕ್ಯಾಮೆರಾ ವೈಶಿಷ್ಟ್ಯವನ್ನು ಮೋಟೊ ಹೊಸ Moto G13 ಸ್ಮಾರ್ಟ್​ಫೋನ್ ಹೊಂದಿದೆ. ನೂತನ ಫೋನ್, ಬಜೆಟ್ ಸ್ಮಾರ್ಟ್​ಫೋನ್ ವಿಭಾಗದಲ್ಲಿ ಬಿಡುಗಡೆಯಾಗಿದ್ದು, ಆಕರ್ಷಕ ಪ್ರೀಮಿಯಂ ವಿನ್ಯಾಸ ಹೊಂದಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಮೋಟೊರೊಲಾ ಹೊಸ Moto G13

ಮೋಟೊರೊಲಾ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಹೊಸ Moto G13 ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ನಲ್ಲಿ 6.5 ಇಂಚಿನ HD+ LCD ಡಿಸ್​ಪ್ಲೇ ಇದೆ. MediaTek Helio G85 SoC ಪ್ರೊಸೆಸರ್ Arm Mali-G52 MC2 GPU ಬೆಂಬಲ ಹೊಂದಿದೆ. ಜತೆಗೆ, ಭಾರತದ ಮಾರುಕಟ್ಟೆಗೆ ಅನುಗುಣವಾಗಿ ಬಜೆಟ್ ದರದಲ್ಲಿ ನೂತನ ಸ್ಮಾರ್ಟ್​ಫೋನ್ ಅನ್ನು ಮೋಟೊ ಪರಿಚಯಿಸಿದೆ.

ಹೊಸ Moto G13 ವೈಶಿಷ್ಟ್ಯಗಳು

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮೆರಾವನ್ನು ಹೊಸ Moto G13 ಸ್ಮಾರ್ಟ್​ಫೋನ್ ಹೊಂದಿದೆ. ಅಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಜತೆಗೆ 5,000mAh ಬ್ಯಾಟರಿ ಹಾಗೂ 10W c ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಮೋಟೊ ಹೊಸ Moto G13 ಸ್ಮಾರ್ಟ್​ಫೋನ್​ನಲ್ಲಿದೆ Android 13 ಕಾರ್ಯಾಚರಣೆ ವ್ಯವಸ್ಥೆ ಇದೆ.

ಮೋಟೊರೊಲಾ Moto G13 ಬೆಲೆ ಮತ್ತು ಲಭ್ಯತೆ

ನೂತನ Moto G13 ಸ್ಮಾರ್ಟ್​ಫೋನ್ 4GB RAM ಮತ್ತು 64GB ಮಾದರಿಗೆ ₹9,999 ದರವಿದೆ. ಏಪ್ರಿಲ್ 5ರಿಂದ ರಿಟೇಲ್ ಸ್ಟೋರ್ ಹಾಗೂ ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಾಗುತ್ತದೆ. ಲ್ಯಾವೆಂಡರ್ ಬ್ಲೂ ಮತ್ತು ಮ್ಯಾಟ್ ಚಾರ್​ಕೋಲ್ ಬಣ್ಣದಲ್ಲಿ ಹೊಸ ಮೋಟೊ ಫೋನ್ ದೊರೆಯುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್