Apple iPhone 11: ಇಂದು ಮಾತ್ರ: ಫ್ಲಿಪ್​ಕಾರ್ಟ್ ನವರಾತ್ರಿ ಸೇಲ್​ನಲ್ಲಿ ಐಫೋನನ್ನು ಕೇವಲ 9,999 ರೂ. ಗೆ ಖರೀದಿಸಿ

Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ನಡೆಯುತ್ತಿರುವ ಎಲೆಕ್ಟ್ರಾನಿಕ್ಸ್ ಸೇಲ್ ಇಂದು ಕೊನೆಯ ದಿನವಾಗಿದೆ. ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಈ ಮೇಳದಲ್ಲಿ ಐಫೋನ್ 11 (Apple iPhone 11) ಅನ್ನು ನೀವು ಕೇವಲ 9,999 ರೂ. ಗೆ ಖರೀದಿಸಬಹುದು.

Apple iPhone 11: ಇಂದು ಮಾತ್ರ: ಫ್ಲಿಪ್​ಕಾರ್ಟ್ ನವರಾತ್ರಿ ಸೇಲ್​ನಲ್ಲಿ ಐಫೋನನ್ನು ಕೇವಲ 9,999 ರೂ. ಗೆ ಖರೀದಿಸಿ
Apple iPhone 11
Follow us
|

Updated on: Mar 30, 2023 | 10:57 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ನಡೆಯುತ್ತಿರುವ ಎಲೆಕ್ಟ್ರಾನಿಕ್ಸ್ ಸೇಲ್​ಗೆ (Flipkart Electronics sale) ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಈ ಸೇಲ್​ನ ಕೊನೆಯ ದಿನವಾಗಿದ್ದು ಐಫೋನ್, ಮೋಟೋರೊಲಾ, ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಸೇರಿದಂತೆ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಕಾಣುತ್ತಿದೆ. ಮುಖ್ಯವಾಗಿ 5G ಬೆಂಬಲ ಪಡೆದುಕೊಂಡಿರುವ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇದರ ಜೊತೆಗೆ ಎಕ್ಸ್​ಚೇಂಜ್ ಆಫರ್, ಬ್ಯಾಂಕ್ ಆಫರ್ ಕೂಡ ನೀಡಲಾಗಿದೆ. ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ಈ ಮೇಳದಲ್ಲಿ ಐಫೋನ್ 11 (Apple iPhone 11) ಅನ್ನು ನೀವು ಕೇವಲ 9,999 ರೂ. ಗೆ ಖರೀದಿಸಬಹುದು.

2019 ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಫೋನ್ 11 ಇಂದಿನ ವರೆಗೆ ಸೇಲ್ ಆದ ಅತಿ ಹೆಚ್ಚು ಫೋನುಗಳ ಪೈಕಿ  ಒಂದಾಗಿದೆ. ನಿಮ್ಮಲ್ಲಿ ಕಡಿಮೆ ಹಣವಿದ್ದು ಐಫೋನ್ ಖರೀದಿಸಬೇಕು ಎಂದಿದ್ದರೆ ಇದೊಂದು ಉತ್ತಮ ಆಫರ್ ಆಗಿದೆ. ಫ್ಲಿಪ್​ಕಾರ್ಟ್​ನಲ್ಲಿ ಐಫೋನ್ 11 ಮೇಲೆ 5,901 ರೂ. ಕಡಿಮೆ ಮಾಡಲಾಗಿದೆ. ಇದೀಗ 37,999 ರೂ. ಗೆ ಸೇಲ್ ಆಗುತ್ತಿದೆ. ಖರೀದಿದಾರರು ಬ್ಯಾಂಕ್ ಆಫ್ ಬರೋಡಾ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್​ಗಳ ಕ್ರೆಡಿಟ್ ಕಾರ್ಡ್, ಇಎಂಐ ವಹಿವಾಟುಗಳಲ್ಲಿ 5,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್‌ಗಳಲ್ಲಿ 1,000 ರೂ. ವರೆಗೆ ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಮೂಲಕ 36,999 ರೂ. ಗೆ ಫೋನ್ ನಿಮ್ಮದಾಗಿಸಬಹುದು.

Tech Tips: ನೀವು ನಿಮ್ಮ ಮೊಬೈಲ್​ನಲ್ಲಿ ‘ಈ’ ವಿಡಿಯೋಗಳನ್ನು ನೋಡುತ್ತಿದ್ದರೆ ಇಂದೇ ನಿಲ್ಲಿಸಿ: ಯಾಕೆ ಗೊತ್ತೇ?

ಇದನ್ನೂ ಓದಿ
Image
Seat Belt Safety: ಪ್ರತೀ ಬಾರಿ ಸೀಟ್ ಬೆಲ್ಟ್ ಧರಿಸಿ, ನಿಮ್ಮ ಜೀವ ಕಾಪಾಡಿ
Image
Code of Conduct: ನೀತಿ ಸಂಹಿತೆ ಉಲ್ಲಂಘನೆ ಕಂಡರೆ cVIGIL App​​ ಮೂಲಕ ದೂರು ಸಲ್ಲಿಸಿ; ಆ್ಯಪ್ ಬಳಸುವುದು ಹೇಗೆ?
Image
Moto G13: 50 MP ಭರ್ಜರಿ ಕ್ಯಾಮೆರಾ, 5,000mAh ಬ್ಯಾಟರಿಯ ಮೋಟೊ ಸ್ಮಾರ್ಟ್​ಫೋನ್
Image
Tecno Spark 10 5G: ₹12,999ಕ್ಕೆ ದೊರೆಯುತ್ತಿದೆ ಟೆಕ್ನೋ 5G ಸ್ಮಾರ್ಟ್​​ಫೋನ್, ಏನಿದು ಆಫರ್?

ಇದಲ್ಲದೇ, ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಎಕ್ಸ್​ಚೇಂಜ್ ಆಫರ್ ಮೂಲಕ 27,000 ರೂ. ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಹೀಗಾಗಿ ನೀವು ಭರ್ಜರಿ ರಿಯಾಯಿತಿಯ ನಂತರ ಫ್ಲಿಪ್‌ಕಾರ್ಟ್‌ನಿಂದ ಐಫೋನ್ 11 ಅನ್ನು ಕೇವಲ 9,999 ರೂ. ಗೆ ಖರೀದಿಸಬಹುದು. ಐಫೋನ್ 11 ಇಲ್ಲಿಯವರೆಗಿನ ಅತ್ಯಂತ ಜನಪ್ರಿಯ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಐಫೊನ್ 14 ಸರಣಿಯ ಪ್ರಾರಂಭದ ನಂತರ ಇದರ ಉತ್ಪಾದರೆ ನಿಲ್ಲಿಸಲಾಯಿತಾದರೂ ಈಗಲಲೂ ಭರ್ಜರಿ ಬೇಡಿಕೆ ಇದೆ. ಆ್ಯಪಲ್ ಐಫೋನ್ 11 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ ಪ್ಲೇಯನ್ನು ಒಳಗೊಂಡಿದೆ. ಇದು A13 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಹಿಂಭಾಗದಲ್ಲಿ ಡ್ಯುಯಲ್ 12MP ಮತ್ತು ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಇದರ ಜೊತೆಗೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಐಫೋನ್ 13 ಅನ್ನು ನೀವು ಕೇವಲ 61,999 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು. ಇದು 128GB ಸ್ಟೋರೇಜ್ ರೂಪಾಂತರವಾಗಿದೆ. ಆ್ಯಪಲ್​ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಫೋನ್ ಬೆಲೆ 69,900 ರೂ. ಆಗಿದೆ. ಇದರಲ್ಲಿರುವ ಬಹುತೇಕ ಫೀಚರ್ ಹೊಸ ಐಫೋನ್ 14 ರೀತಿಯಲ್ಲೇ ಇದೆ. ಇನ್ನು ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್‌ಗಳ ಮೇಲೆ 2,000 ರೂಪಾಯಿಗಳ ರಿಯಾಯಿತಿಯ ಕೊಡುಗೆಯೂ ಇದೆ. ಈ ಮೂಲಕ ಐಫೋನ್ 13 ಅನ್ನು ನೀವು 59,999 ರೂ. ಗೆ ಪಡೆದುಕೊಳ್ಳಬಹುದು.

ಇತ್ತೀಚಿಗಷ್ಟೆ ಬಿಡುಗಡೆಯಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಫೋನ್ ಕೂಡ ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ. ಇದನ್ನು ನೀವು 79,999 ರೂಪಾಯಿಗಳಿಗೆ ಖರೀದಿಸಬಹುದು. HDFC ಬ್ಯಾಂಕ್ ಕಾರ್ಡ್ ಬಳಸಿದರೆ 74,999 ರೂಪಾಯಿಗಳಿಗೆ ಸಿಗಲಿದೆ. ಈ ಆಫರ್ 256GB ಸ್ಟೋರೇಜ್ ಮಾದರಿಗೆ ಇದೆ. ಇದೊಂದು ಉತ್ತಮವಾದ ಆಂಡ್ರಾಯ್ಡ್ ಫೋನ್ ಆಗಿದ್ದು ಕ್ಯಾಮೆರಾ ಅದ್ಭುತವಾಗಿದೆ. ಜೊತೆಗೆ ಬಲಿಷ್ಠ ಪ್ರೊಸೆಸರ್, ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಆಯ್ಕೆ ಕೂಡ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?