Tecno Spark 10 5G: ₹12,999ಕ್ಕೆ ದೊರೆಯುತ್ತಿದೆ ಟೆಕ್ನೋ 5G ಸ್ಮಾರ್ಟ್​​ಫೋನ್, ಏನಿದು ಆಫರ್?

ಟೆಕ್ನೋ ಕಂಪನಿ ಭಾರತದಲ್ಲಿ ಕಡಿಮೆ ದರಕ್ಕೆ ಅಧಿಕ ಫೀಚರ್ ಇರುವ ಫೋನ್​ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲು ಪಡೆಯಲು ಮುಂದಾಗಿದೆ. ಹಲವು ಕಂಪನಿಗಳ ಪ್ರಬಲ ಪೈಪೋಟಿ ನಡುವೆಯೂ ಟೆಕ್ನೋ ಅತಿ ಕಡಿಮೆ ದರಕ್ಕೆ 5G ಸ್ಮಾರ್ಟ್​​ಫೋನ್ ಒದಗಿಸುತ್ತಿದೆ. ಹೊಸ ಫೋನ ಭಾರತದಲ್ಲಿ ಬಿಡುಗಡೆಯಾಗಿದೆ. ಅದರ ವೈಶಿಷ್ಟ್ಯಗಳು ಇಲ್ಲಿವೆ.

Tecno Spark 10 5G: ₹12,999ಕ್ಕೆ ದೊರೆಯುತ್ತಿದೆ ಟೆಕ್ನೋ 5G ಸ್ಮಾರ್ಟ್​​ಫೋನ್, ಏನಿದು ಆಫರ್?
ಟೆಕ್ನೋ ಸ್ಪಾರ್ಕ್ 10 5G
Follow us
ಕಿರಣ್​ ಐಜಿ
|

Updated on:Mar 29, 2023 | 4:52 PM

ಭಾರತದಲ್ಲಿ 5G ಯುಗ ಆರಂಭವಾದ ಬೆನ್ನಲ್ಲೇ ಒಂದರ ಹಿಂದೆ ಮತ್ತೊಂದರಂತೆ ಹೊಸ ಹೊಸ 5G ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಹೊಸ 5G ಫೋನ್​ಗಳ ಬಿಡುಗಡೆಯ ಜತೆಗೇ ದರದಲ್ಲಿ ಕೂಡ ಪೈಪೋಟಿ ಆರಂಭವಾಗಿದೆ. ಟೆಕ್ನೋ ಕಂಪನಿ, ಸ್ಪಾರ್ಕ್ ಸ್ಮಾರ್ಟ್​ಫೋನ್ ಸರಣಿಯಲ್ಲಿ ಹೊಸದಾಗಿ ಟೆಕ್ನೋ ಸ್ಪಾರ್ಕ್ 10 5G (Tecno Spark 10 5G) ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದೆ. ನೂತನ ಫೋನ್ ₹12,999ಕ್ಕೆ ಲಭ್ಯವಾಗುತ್ತಿದೆ. ದುಬಾರಿ ಯುಗದಲ್ಲಿ ಕಡಿಮೆ ಬಜೆಟ್​ಗೆ 5G ಫೋನ್ ನೀಡುವ ಮೂಲಕ ಟೆಕ್ನೋ ಹೊಸ ಸ್ಪರ್ಧೆ ಆರಂಭಿಸಿದೆ.

ಟೆಕ್ನೋ ಸ್ಪಾರ್ಕ್ 10 5G ವೈಶಿಷ್ಟ್ಯಗಳು

ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಟೆಕ್ನೋ ಬಿಡುಗಡೆ ಮಾಡಿದೆ ಹೊಸ ಟೆಕ್ನೋ ಸ್ಪಾರ್ಕ್ 10 5G ಸ್ಮಾರ್ಟ್​ಫೋನ್. 5G ನೆಟ್​ವರ್ಕ್ ವಿಸ್ತರಣೆ ಮತ್ತು ಹೊಸ ಸಾಧ್ಯತೆಗಳು ಹೆಚ್ಚುತ್ತಿರುವಂತೆಯೇ ನೂತನ ಸ್ಮಾರ್ಟ್​ಫೋನ್ ಕಡಿಮೆ ದರಕ್ಕೆ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಟೆಕ್ನೋ ಸ್ಪಾರ್ಕ್ 10 5G ಸ್ಮಾರ್ಟ್​ಫೋನ್ 6.6 ಇಂಚಿನ HD+ ಡಿಸ್​ಪ್ಲೇ ಹೊಂದಿದೆ. ಅಲ್ಲದೆ, ಟೆಕ್ನೋ 5G ಫೋನ್​ನಲ್ಲಿ MediaTek Dimensity 6020 SoCp ಪ್ರೊಸೆಸರ್ ಇದ್ದು, 950MHz ARm Mali-G57 ಗ್ರಾಫಿಕ್ಸ್ ಬೆಂಬಲ ಹೊಂದಿದೆ.

ಟೆಕ್ನೋ ಸ್ಪಾರ್ಕ್ 10 5G ಕ್ಯಾಮೆರಾ ಎಷ್ಟಿದೆ?

ಹೊಸ ಟೆಕ್ನೋ ಸ್ಪಾರ್ಕ್ 10 5G ಸ್ಮಾರ್ಟ್​ಫೋನ್​ನಲ್ಲಿ 50 ಮೆಗಾಪಿಕ್ಸೆಲ್ ಹಿಂಬದಿ ಮುಖ್ಯ ಕ್ಯಾಮೆರಾ ಇದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಟೆಕ್ನೋ ಸ್ಪಾರ್ಕ್ 10 5G ಫೋನ್​ನಲ್ಲಿ 5,000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಇದ್ದು, ಗರಿಷ್ಠ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. Android 13 ಆಧಾರಿತ HiOS 12.6 ಕಾರ್ಯಾಚರಣೆ ವ್ಯವಸ್ಥೆಯ ಬೆಂಬಲವಿದೆ.

ಟೆಕ್ನೋ ಸ್ಪಾರ್ಕ್ 10 5G ಬೆಲೆ ಮತ್ತು ಲಭ್ಯತೆ

ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಟೆಕ್ನೋ ಸ್ಪಾರ್ಕ್ 10 5G ಸ್ಮಾರ್ಟ್​ಫೋನ್​ 4GB RAM ಮತ್ತು 64GB ಸ್ಟೋರೇಜ್ ಮಾದರಿಗೆ ₹12,999 ದರವಿದೆ. ಮೆಟಾ ಬ್ಲ್ಯಾಕ್, ಮೆಟಾ ಬ್ಲೂ ಮತ್ತು ಮೆಟಾ ವೈಟ್ ಬಣ್ಣಗಳಲ್ಲಿ ಹೊಸ ಫೋನ್ ದೊರೆಯಲಿದ್ದು, ಏಪ್ರಿಲ್ 7ರಿಂದ ದೇಶದ ಎಲ್ಲ ಪ್ರಮುಖ ರಿಟೇಲ್ ಮಳಿಗೆಯಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Wed, 29 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್