Code of Conduct: ನೀತಿ ಸಂಹಿತೆ ಉಲ್ಲಂಘನೆ ಕಂಡರೆ cVIGIL App​​ ಮೂಲಕ ದೂರು ಸಲ್ಲಿಸಿ; ಆ್ಯಪ್ ಬಳಸುವುದು ಹೇಗೆ?

cVIGIL App: ಒಂದು ವೇಳೆ ಪಕ್ಷಗಳು/ವ್ಯಕ್ತಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಅವುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ನಾಗರಿಕರು cVIGIL  ಆ್ಯಪ್ ಬಳಸಿ ದೂರುಸಲ್ಲಿಸಬಹುದು

Code of Conduct: ನೀತಿ ಸಂಹಿತೆ ಉಲ್ಲಂಘನೆ ಕಂಡರೆ cVIGIL App​​ ಮೂಲಕ ದೂರು ಸಲ್ಲಿಸಿ; ಆ್ಯಪ್ ಬಳಸುವುದು ಹೇಗೆ?
ಸಿವಿಜಿಲ್ ಆ್ಯಪ್
Follow us
| Updated By: Digi Tech Desk

Updated on:Mar 30, 2023 | 11:31 AM

ಭಾರತೀಯ ಚುನಾವಣಾ ಆಯೋಗ (ECI) ಬುಧವಾರ (ಮಾರ್ಚ್ 29) ಕರ್ನಾಟಕ ಚುನಾವಣೆ 2023ರ(Karnataka Elections 2023) ದಿನಾಂಕಗಳನ್ನು ಪ್ರಕಟಿಸಿದೆ.ಕರ್ನಾಟಕ ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಘೋಷಣೆಯೊಂದಿಗೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (model code of conduct)ಜಾರಿಯಾಗಿದೆ. ಅದೇ ವೇಳೆ ನಾಗರಿಕರಿಂದ ಅನುಕೂಲಕರ ಮತಗಳನ್ನು ಸೆಳೆಯಲು ಯಾವುದೇ ನಗದು, ಉಚಿತ ಅಥವಾ ಯಾವುದನ್ನೂ ನೀಡದಂತೆ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ.

ಒಂದು ವೇಳೆ ಪಕ್ಷಗಳು/ವ್ಯಕ್ತಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಅವುಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ನಾಗರಿಕರು cVIGIL  ಆ್ಯಪ್ ಬಳಸಿ ದೂರುಸಲ್ಲಿಸಬಹುದು. ಇದರಲ್ಲಿ ವಿಡಿಯೊಗಳನ್ನು ಶೂಟ್ ಮಾಡಬಹುದು ಅಥವಾ ಕೃತ್ಯದ ಫೋಟೋಗಳನ್ನು ಸೆರೆಹಿಡಿಯಬಹುದು. ಇದಾದ ನಂತರ ತಕ್ಷಣವೇ ಅವುಗಳನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬಹುದು. ಈ ರೀತಿಯಾಗಿ, ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇದು ನಿರ್ಣಾಯಕ ಸಾಕ್ಷ್ಯವನ್ನು ನೀಡುತ್ತದೆ.

ಇದನ್ನೂ ಓದಿ: Siddaramaiah: ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘಿಸಿದರೇ ಸಿದ್ದರಾಮಯ್ಯ?

cVIGIL ಅಪ್ಲಿಕೇಶನ್‌ ಬಳಸುವುದು ಹೇಗೆ?

  1. cVIGIL ಅಪ್ಲಿಕೇಶನ್‌ ಬಳಸಿ, ಜನರು ಮತಗಳನ್ನು ಗಳಿಸಲು ಕ್ಷೇತ್ರದ ನಾಗರಿಕರಿಗೆ ಅಭ್ಯರ್ಥಿ ಅಥವಾ ಅವರ ಅನುಯಾಯಿಗಳು ಹಣ ಅಥವಾ ಉಡುಗೊರೆಗಳನ್ನು ಹಸ್ತಾಂತರಿಸುವ ಚಿತ್ರವನ್ನು ತೆಗೆದುಕೊಳ್ಳಬಹುದು.
  2. ಫೋಟೋ/ವೀಡಿಯೊ ಜೊತೆಗೆ, ಅಪ್ಲಿಕೇಶನ್ ರೇಖಾಂಶಗಳು ಮತ್ತು ಸ್ಪಾಟ್ ಅಕ್ಷಾಂಶಗಳೊಂದಿಗೆ ನಿಖರವಾದ ಜಿಯೊ ಲೊಕೇಶನ್ ಕೂಡಾ ಸಹ ಸೆರೆಹಿಡಿಯುತ್ತದೆ.
  3. ನಾಗರಿಕರು ಅಪ್ಲಿಕೇಶನ್‌ನಲ್ಲಿ ದೂರಿನ ಜೊತೆಗೆ ಮಲ್ಟಿಮೀಡಿಯಾ ವಿಷಯವನ್ನು ಅಪ್‌ಲೋಡ್ ಮಾಡಿದ ನಂತರ ಸಂಹಿತೆ ಉಲ್ಲಂಘಿಸುವವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಫ್ಲೈಯಿಂಗ್ ಸ್ಕ್ವಾಡ್ ನಿಖರವಾದ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ.
  4. ಹೆಚ್ಚಿನ ಸಂದರ್ಭಗಳಲ್ಲಿ, ಸರಿಯಾದ ಮಾಹಿತಿಯನ್ನು ನೀಡಿದರೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಸಮಯಕ್ಕೆ ಸ್ಥಳಕ್ಕೆ ತಲುಪಬಹುದು. ಸಾಕ್ಷ್ಯಗಳೊಂದಿಗೆ (ಲೆಕ್ಕವಿಲ್ಲದ ಉಡುಗೊರೆಗಳು / ನಗದು) ಅಪರಾಧಿಗಳನ್ನು ಸೆರೆ ಹಿಡಿದು ಶಿಕ್ಷೆಗೊಳಪಡಿಸಬಹುದು.
  5. cVIGIL ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ಎಂಸಿಸಿ ಉಲ್ಲಂಘನೆ ಪ್ರಕರಣದ ಸ್ಥಿತಿಯನ್ನು ಸಹ ಟ್ರ್ಯಾಕ್ ಮಾಡಬಹುದು ಬಳಕೆದಾರರು ಇತರೆ ದೂರುಗಳಿಗಾಗಿ ರಾಷ್ಟ್ರೀಯ ಸಂಪರ್ಕ ಕೇಂದ್ರಕ್ಕೆ 1800111950 ಅಥವಾ ರಾಜ್ಯ ಸಂಪರ್ಕ ಕೇಂದ್ರಕ್ಕೆ 1950ಕ್ಕೆ ಕರೆ ಮಾಡಬಹುದು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Wed, 29 March 23

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?