ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ ಶವೋಮಿ (Xiaomi) ತನ್ನ ಬ್ರ್ಯಾಂಡ್ನಡಿಯಲ್ಲಿ ಶವೋಮಿ 12 ಸರಣಿಯನ್ನು ಅನಾವರಣ ಮಾಡಿ ಧೂಳೆಬ್ಬಿಸಿತ್ತು. ಭಾರತದಲ್ಲೂ ಈ ಸ್ಮಾರ್ಟ್‌ಫೋನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸರಣಿಯ ಮುಂದುವರೆಗ ಭಾಗವಾಗಿ ಶವೋಮಿ 13 ಸರಣಿ (Xiaomi 13 Series) ಮಾರುಕಟ್ಟೆಗೆ ಅಪ್ಪಳಿಸಿದೆ. ಈ ನೂತನ ಸರಣಿಯಲ್ಲಿ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್ಫೋನ್ಗಳು ಇದೆ. ಹುಬ್ಬೇರಿಸುವಂತಹ ಫೀಚರ್ಗಳು ಇದರಲ್ಲಿ ಅಡಕವಾಗಿದ್ದು ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಈ ಫೋನ್ಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಶವೋಮಿ 13 ಸ್ಮಾರ್ಟ್‌ಫೋನ್ 2400*1080 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.36 ಇಂಚಿನ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೆಟ್, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ. ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 4nm ಪ್ರೊಸೆಸರ್ ನೀಡಲಾಗಿದ್ದು MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಅನಾವರಣಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ನ ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ನ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 8K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇರುವುದು ವಿಶೇಷ. ಇವುಗಳ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
Whatsapp New Feature: ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಶೆಡ್ಯುಲ್ ಫೀಚರ್: ಬಳಕೆದಾರರು ಫುಲ್ ಖುಷ್
4500mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ. ಅಂತೆಯೆ 50W ವಯರ್ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತಿದೆ. ಶವೋಮಿ 13 ಆರಂಭಿಕ ಬೆಲೆ 999 Euros, ಅಂದರೆ ಭಾರತದಲ್ಲಿ 87,585 ರೂ. ಎನ್ನಬಹುದು.
ಶವೋಮಿ 13 ಸ್ಮಾರ್ಟ್ಫಫೋನ್ 3200*1440 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.73 ಇಂಚಿನ ಫುಲ್ HD+ E6 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೆಟ್, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ. ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 4nm ಪ್ರೊಸೆಸರ್ ನೀಡಲಾಗಿದ್ದು MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಅನಾವರಣಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX989 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ನ ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ ಕೂಡ 50 ಮೆಗಾಪಿಕ್ಸೆಲ್ನ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 8K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇರುವುದು ವಿಶೇಷ. ಇವುಗಳ ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
4820mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 120W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ. ಅಂತೆಯೆ 50W ವಯರ್ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತಿದೆ. ಶವೋಮಿ 13 ಪ್ರೊ ಆರಂಭಿಕ ಬೆಲೆ 1,299 Euros, ಅಂದರೆ ಭಾರತದಲ್ಲಿ 1,13,890 ರೂ. ಎನ್ನಬಹುದು.
Tech Tips: ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ಗೆ ಹಾಕಿದಾಗ ಬಿಸಿಯಾಗುತ್ತಾ?: ನಿರ್ಲಕ್ಷಿಸದಿರಿ
ಶವೋಮಿ 13 ಫೋನ್ 6.55 ಇಂಚಿನ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೆಟ್, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ. ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 1 ಪ್ರೊಸೆಸರ್ ನೀಡಲಾಗಿದ್ದು MIUI 13 ಆಧಾರಿತ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್‌ಫೋನ್ ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಅನಾವರಣಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 4500mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತಿದೆ. ಶವೋಮಿ 13 ಪ್ರೊ ಆರಂಭಿಕ ಬೆಲೆ 499 Euros ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ