ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ಶವೋಮಿ ತನ್ನ ಸಬ್ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಸದ್ದಿಲ್ಲದೆ ಹೊಸ ಫೋನನ್ನು ಪರಿಚಯಿಸಿದೆ. ಇಂದು ನೈಜೀರಿಯಾ ಮಾರುಕಟ್ಟೆಗೆ ರೆಡ್ಮಿ 13C (Redmi 13C) ಫೋನ್ ಲಗ್ಗೆಯಿಟ್ಟಿದೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಬರುವ ಸಾಧ್ಯತೆ ಇದೆ. ರೆಡ್ಮಿ 13 ಸರಣಿಯ ಈ ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕ, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ರೆಡ್ಮಿ 13C ಸ್ಮಾರ್ಟ್ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 4GB RAM + 128GB ಸ್ಟೋರೇಜ್ ಮಾಡೆಲ್‌ಗೆ ನೈಜೀರಿಯಾದಲ್ಲಿ NGN 98,100 (ಸುಮಾರು ರೂ. 10,100). 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ NGN 108,100 (ಸುಮಾರು ರೂ. 11,000), 8GB RAM + 256GB ಆಯ್ಕೆಯು NGN 121,100 (ಸುಮಾರು ರೂ. 12,500) ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಕ್ಲೋವರ್ ಗ್ರೀನ್ ಶೇಡ್‌ಗಳಲ್ಲಿ ಲಭ್ಯವಿರುತ್ತದೆ.
ವಾಟ್ಸ್ಆ್ಯಪ್, ಯೂಟ್ಯೂಬ್ ಇರುವ 2,599 ರೂ. ಬೆಲೆಯ ಜಿಯೋ ಪ್ರೈಮಾ 4G ಫೋನ್ ಖರೀದಿಗೆ ಲಭ್ಯ
ರೆಡ್ಮಿ 13C ಯ ಹಿಂದಿನ ವರ್ಷನ್ ರೆಡ್ಮಿ 12C ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 8,999 ರೂ. ಇದೆ.
ರೆಡ್ಮಿ 13C ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ (1,080×2,460 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 9nm ಮೀಡಿಯಾಟೆಕ್ ಹಿಲಿಯೊ G99 SoC ಯಿಂದ 8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ 13C ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಎರಡು 2-ಮೆಗಾಪಿಕ್ಸೆಲ್ ಶೂಟರ್‌ಗಳ ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ರೆಡ್ಮಿ ಫೋನ್ 5,000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ