Mi 11T: ಶವೋಮಿಯ ಎಂಐ 11ಟಿ ಸ್ಮಾರ್ಟ್​ಫೋನ್ ಬಗ್ಗೆ ಮಾಹಿತಿ ಸೋರಿಕೆ: ಇದರಲ್ಲಿದೆ ಸಾಕಷ್ಟು ಹೊಸತನ

| Updated By: Vinay Bhat

Updated on: Aug 16, 2021 | 2:22 PM

ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಎಂಐ 11T ಸ್ಮಾರ್ಟ್​ಫೋನ್ ಸೋನಿ IMX355 ವೈಡ್ ಲೆನ್ಸ್ ಇರುವ 64 ಮೆಗಾಫಿಕ್ಸೆಕಲ್​ನ ಕ್ಯಾಮೆರಾದೊಂದಿಗೆ ಬರಲಿದೆ. ಮೂಲಗಳ ಪ್ರಕಾರ ಇದು ಮೀಡಿಯಾ ಟೆಕ್ 1200 ಡೈಮನ್ಸಿಟಿ ಪ್ರೊಸೆಸರ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Mi 11T: ಶವೋಮಿಯ ಎಂಐ 11ಟಿ ಸ್ಮಾರ್ಟ್​ಫೋನ್ ಬಗ್ಗೆ ಮಾಹಿತಿ ಸೋರಿಕೆ: ಇದರಲ್ಲಿದೆ ಸಾಕಷ್ಟು ಹೊಸತನ
Xiaomi Mi 11T
Follow us on

ಶವೋಮಿ ಕಂಪೆನಿ ತನ್ನ ಸಬ್​ಬ್ರ್ಯಾಂಡ್ ಎಂಐ ಅಡಿಯಲ್ಲಿ ಕಳೆದ ವರ್ಷ ಎಂಐ 10 ಸರಣಿಯನ್ನು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು. ಇದರ ಬೆನ್ನಲ್ಲೆ ಈ ವರ್ಷ ಎಂಐ 11 ಸರಣಿಯಲ್ಲಿ 11X ಮತ್ತು 11X ಪ್ರೊ ಫೋನನ್ನು ರಿಲೀಸ್ ಮಾಡಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸದ್ಯ ಇದರ ಮುಂದುವರೆದ ಭಾಗವಾಗಿ ಎಂಐ 11ಟಿ ಸ್ಮಾರ್ಟ್​ಫೋನನ್ನು ಲಾಂಚ್ ಮಾಡಲು ತಯಾರು ಮಾಡಿದೆ. ಆದರೆ, ಬಿಡುಗಡೆಗೂ ಮುನ್ನವೇ ಈ ಫೋನಿನ ಕೆಲವು ಮಾಹಿತಿ ಸೋರಿಕೆ ಆಗಿದೆ.

ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಎಂಐ 11T ಸ್ಮಾರ್ಟ್​ಫೋನ್ 120Hz ರಿಫ್ರೆಶ್ ರೇಟ್ ಹೊಂದಿದೆಯಂತೆ. ಈ ಹಿಂದಿನ ಎಂಐ 11X ಮತ್ತು 11X ಪ್ರೊ ಕ್ವಾಲ್ಕಂ ಸ್ನಾಪ್​ಡ್ರಾಗನ್ ಪ್ರೊಸೆಸರ್​ನಿಂದ ಆವೃತ್ತವಾಗಿತ್ತು. ಆದರೆ, ಈ ಫೋನಿಗೆ ಮೀಡಿಯಾ ಟೆಕ್ ಚಿಪ್ ಸೆಟ್ ಅಳವಡಿಸಲಾಗಿದೆಯಂತೆ.

ಇನ್ನೂ ಸೋನಿ IMX355 ವೈಡ್ ಲೆನ್ಸ್ ಇರುವ 64 ಮೆಗಾಫಿಕ್ಸೆಕಲ್​ನ ಕ್ಯಾಮೆರಾದೊಂದಿಗೆ ಬರಲಿದೆ. ಮೂಲಗಳ ಪ್ರಕಾರ ಇದು ಮೀಡಿಯಾ ಟೆಕ್ 1200 ಡೈಮನ್ಸಿಟಿ ಪ್ರೊಸೆಸರ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಇತ್ತೀಚೆಗೆ ಬಿಡುಗಡೆ ಆದ ಪೋಕೋ ಎಫ್​3 ಜಿಟಿ ಸ್ಮಾರ್ಟ್​ಫೋನಿನಲ್ಲೂ ಇದೇ ಚಿಪ್​ಸೆಟ್ ನೀಡಲಾಗಿತ್ತು.

ಈ ಹಿಂದೆ ಬಿಡುಗಡೆ ಆದ ಎಂಐ 11 ಸ್ಮಾರ್ಟ್‌ಫೋನ್‌ 6.81-ಇಂಚಿನ 2K WQHD ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿತ್ತು. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌  ಜೊತೆಗೆ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. 4,600mAh ಸಾಮರ್ಥ್ಯದ ಬ್ಯಾಟರಿ ಸೆಟಪ್‌ ನೀಡಲಾಗಿತ್ತು. ಇದು ಮಿ ಟರ್ಬೊಚಾರ್ಜ್ 55W ವೈರ್ಡ್ ಮತ್ತು 50W ವಾಯರ್‌ ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 10W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಬೆಂಬಲವೂ ಇದೆ.

ನಿಮ್ಮ ಸ್ಮಾರ್ಟ್​ಫೋನ್ ಡಿಸ್​ ಪ್ಲೇಯಲ್ಲಿ ಎರಡೆರಡು ಆ್ಯಪ್ ಬಳಸಿ: ಮಾಡಬೇಕಾದ್ದು ಇಷ್ಟೆ!

ಆಗಸ್ಟ್​ನಲ್ಲಿ ಖರೀದಿಸಬಹುದಾದ 5 ಬೆಸ್ಟ್ ಬಜೆಟ್ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

(Xiaomi Mi 11T specifications leak phone tipped to come with 120Hz display)