Year Ender 2024: ಈ ವರ್ಷದ ಭಾರತದಲ್ಲಿ ಬಿಡುಗಡೆಯಾದ ಟಾಪ್ 5 ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಯಾವುದು ಗೊತ್ತೇ?
ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಈ ವರ್ಷ, ಕಡಿಮೆ ಬಜೆಟ್, ಮಧ್ಯಮ ಶ್ರೇಣಿ, ದುಬಾರಿ ಶ್ರೇಣಿಯ ವಿಭಾಗಗಳಲ್ಲಿ ಅನೇಕ ಉತ್ತಮ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ನೀವು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಹೋದರೆ, ಹಲವಾರು ಸ್ಮಾರ್ಟ್‌ಫೋನ್‌ಗಳು ಈ ವಿಭಾಗಕ್ಕೆ ಪ್ರವೇಶಿಸಿವೆ. 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ 5 ಅದ್ಭುತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
2024 ರ ವರ್ಷವು ತಂತ್ರಜ್ಞಾನ ಕ್ಷೇತ್ರಕ್ಕೆ ಬಹಳ ವಿಶೇಷವಾಗಿತ್ತು. ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯಿಂದ ಈ ವರ್ಷ ಟೆಲಿಕಾಂ ವಲಯ ಸಾಕಷ್ಟು ಅಭಿವೃದ್ದಿ ಕಂಡುಬಂದಿದೆ. ಮುಖ್ಯವಾಗಿ ದುಬಾರಿ ಫೋನುಗಳತ್ತ ಜನರು ಒಲವು ತೋರಿಸುತ್ತಿದ್ದಾರೆ. 2024 ವರ್ಷವು ಸ್ಮಾರ್ಟ್‌ಫೋನ್ ಪ್ರಿಯರಿಗೆ ಬಹಳ ರೋಮಾಂಚಕಾರಿ ವರ್ಷವಾಗಿತ್ತು. ಈ ವರ್ಷ, ಕಡಿಮೆ ಬಜೆಟ್, ಮಧ್ಯಮ ಶ್ರೇಣಿ, ದುಬಾರಿ ಶ್ರೇಣಿಯ ವಿಭಾಗಗಳಲ್ಲಿ ಅನೇಕ ಉತ್ತಮ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.
ನೀವು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಹೋದರೆ, ಹಲವಾರು ಸ್ಮಾರ್ಟ್‌ಫೋನ್‌ಗಳು ಈ ವಿಭಾಗಕ್ಕೆ ಪ್ರವೇಶಿಸಿವೆ. 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ 5 ಅದ್ಭುತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
ಐಫೋನ್ 16 ಪ್ರೊ ಮ್ಯಾಕ್ಸ್:
ಆ್ಯಪಲ್ ಕಂಪನಿಯ ಇತ್ತೀಚಿನ ಐಫೋನ್ 16 ಸರಣಿಯ ಉನ್ನತ ರೂಪಾಂತ ಐಫೋನ್ 16 ಪ್ರೊ ಮ್ಯಾಕ್ಸ್ ಆಗಿದೆ. ಪ್ರಸ್ತುತ, ಇದು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಫೋನ್ ಆಗಿದೆ. 256GB ಸ್ಟೋರೇಜ್ ಹೊಂದಿರುವ ಅದರ ಮಾದರಿಯನ್ನು ನೀವು ಖರೀದಿಸಿದರೆ, 1,44,900 ರೂ. ನೀಡಬೇಕು. ಇದರ ಕಾರ್ಯಕ್ಷಮತೆಗಾಗಿ ಇತ್ತೀಚಿನ A18 ಪ್ರೊ ಚಿಪ್‌ಸೆಟ್ ಅನ್ನು ನೀಡಲಾಗಿದೆ. ಈ ಫೋನ್ 6.90 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 48+12+48 MP ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ:
ಕ್ಯಾಮೆರಾ ಪ್ರಿಯರಿಗಾಗಿ ಈ ಫೋನನ್ನು ರಿಲೀಸ್ ಮಾಡಲಾಯಿತು. ನೀವು ದೊಡ್ಡ ಗಾತ್ರದ ಸ್ಮಾರ್ಟ್‌ಫೋನ್ ಅನ್ನು ಬಯಸಿದರೆ ಈ ಫೋನ್‌ನ ಮೊರೆ ಹೋಗಬಹುದು. ಈ ಸ್ಮಾರ್ಟ್‌ಫೋನ್ 6.80 ಇಂಚಿನ ಡಿಸ್‌ಪ್ಲೇ ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ ಖರೀದಿಸಲು, ನೀವು ಕನಿಷ್ಟ 1,29,999 ರೂ. ಪಾವತಿಸಬೇಕು. ಇದರ ಹಿಂಭಾಗದಲ್ಲಿ ನೀವು 200MP + 12MP + 50MP + 10MP ನ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಮುಂಭಾಗದಲ್ಲಿ ನಿಮಗೆ 12 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ ನೀವು 5000mAh ಬ್ಯಾಟರಿಯನ್ನು ಪಡೆಯುತ್ತೀರಿ.
ಗೂಗಲ್ ಪಿಕ್ಸೆಲ್ 9 ಪ್ರೊ XL:
ಇದರ ಬೆಲೆ 1,24,999 ರೂಪಾಯಿ ಆಗಿದೆ. ಕಂಪನಿಯು ಇತ್ತೀಚಿನ ಪಿಕ್ಸೆಲ್ 9 ಸರಣಿಯೊಂದಿಗೆ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ 6.80 ಇಂಚಿನ ಶಕ್ತಿಶಾಲಿ ಡಿಸ್‌ಪ್ಲೇ ನೀಡಲಾಗಿದೆ. ಹೆಚ್ಚಿನ ವೇಗದ ಕಾರ್ಯಕ್ಷಮತೆಗಾಗಿ ಇದನ್ನು ಗೂಗಲ್ ಟೆನ್ಸರ್ ಜಿ4 ಚಿಪ್‌ನೊಂದಿಗೆ ಒದಗಿಸಲಾಗಿದೆ. ಇದರಲ್ಲಿ ನೀವು ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 42 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಬಳಸುತ್ತಿರುವವರಿಗೆ ಶಾಕ್: ಜನವರಿ 1 ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್ ಬಂದ್
ವಿವೋ X200 ಪ್ರೊ:
ಈ ಫೋನನ್ನು ಕಂಪನಿಯು ಅಕ್ಟೋಬರ್ 2024 ರಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ IP69 ರೇಟಿಂಗ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 6.78 ಇಂಚಿನ LTPO AMOLED ಪರದೆಯನ್ನು ಹೊಂದಿದೆ. ಇದರಲ್ಲಿ ನಿಮಗೆ ಮೀಡಿಯಾಟೆಕ್ನ ಡೈಮೆನ್ಸಿಟಿ 9400 ಚಿಪ್‌ಸೆಟ್ ನೀಡಲಾಗಿದೆ. ಛಾಯಾಗ್ರಹಣಕ್ಕಾಗಿ, 200MP + 50MP + 50MP ಸಂವೇದಕವನ್ನು ಹೊಂದಿರುವ ಟ್ರಿಪಲ್ ಕ್ಯಾಮೆರಾ ಲಭ್ಯವಿದೆ. ಇದು ಲೇಸರ್ ಆಟೋಫೋಕಸ್ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿ 6000mAh ಆಗಿದೆ.
ಐಕ್ಯೂ 13 5G:
ಈ ಫೋನ್ ಇತ್ತೀಚೆಗಷ್ಟೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು 6.82 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಕಂಪನಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅನ್ನು 3nm ತಂತ್ರಜ್ಞಾನದೊಂದಿಗೆ ನೀಡಿದೆ. 1TB ಸಂಗ್ರಹಣೆ ಮತ್ತು 16GB RAM ಇದೆ. ನೀವು ಹಿಂಭಾಗದಲ್ಲಿ 50+50+50 ಮೆಗಾಪಿಕ್ಸೆಲ್‌ಗಳ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ