Youtube Down: ಯುಟ್ಯೂಬ್​ನಲ್ಲಿ ಸರಿಯಾಗಿ ಪ್ಲೇ ಆಗದ ವಿಡಿಯೊಗಳು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ತೋಡಿಕೊಂಡ ಬಳಕೆದಾರರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 17, 2022 | 11:22 AM

‘ವಿಡಿಯೊಗಳು ಸರಿಯಾಗಿ ಪ್ಲೇ ಆಗುತ್ತಿಲ್ಲ’ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Youtube Down: ಯುಟ್ಯೂಬ್​ನಲ್ಲಿ ಸರಿಯಾಗಿ ಪ್ಲೇ ಆಗದ ವಿಡಿಯೊಗಳು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ತೋಡಿಕೊಂಡ ಬಳಕೆದಾರರು
ಪ್ರಾತಿನಿಧಿಕ ಚಿತ್ರ
Follow us on

ಜನಪ್ರಿಯ ವಿಡಿಯೊ ವೇದಿಕೆ ಯುಟ್ಯೂಬ್​ನ ಆ್ಯಪ್ ಮತ್ತು ವೆಬ್​ಸೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ‘ವಿಡಿಯೊಗಳು ಸರಿಯಾಗಿ ಪ್ಲೇ ಆಗುತ್ತಿಲ್ಲ’ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ಹುಡುಕು ಪದ (Keyword) ನಮೂದಿಸಿದಾಗ ಯುಟ್ಯೂಬ್ ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊಗೆದು ಕೊಡುತ್ತದೆ. ಇದು ಯುಟ್ಯೂಬ್​ ಕಾರ್ಯನಿರ್ವಹಣೆಯ ಮೂಲ ವೈಖರಿ. ಆದರೆ ಈ ಕೆಲಸವೂ ಇದೀಗ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ಈ ಕ್ಷಣಕ್ಕೆ ಸಮಸ್ಯೆ ಎಷ್ಟರಮಟ್ಟಿಗೆ ಗಂಭೀರವಾದುದು ಎಂದು ಸ್ಪಷ್ಟಪಟ್ಟಿಲ್ಲ. ಅಮೆರಿಕ ಬಳಕೆದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆ ವರದಿ ಮಾಡಿದ್ದಾರೆ. ಆ್ಯಪ್ ಮತ್ತು ವೆಬ್​ಸೇವೆಗಳಲ್ಲಿ ಸಮಸ್ಯೆಯುಂಟಾದಾಗ ದಾಖಲಿಸುವ ಡೌನ್​ಡಿಟೆಕ್ಟರ್ ಜಾಲತಾಣವು ಯುಟ್ಯೂಬ್​ನಲ್ಲಿ ಸಮಸ್ಯೆಯಾಗಿರುವುದನ್ನು ವರದಿ ಮಾಡಿದೆ. ಇಂದು ಮುಂಜಾನೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯುಟ್ಯೂಬ್​ನಲ್ಲಿ ಸಮಸ್ಯೆಯಾಗಿರುವುದನ್ನು ಹೇಳಿಕೊಂಡಿದ್ದಾರೆ. ಈವರೆಗೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಎಂದು ಡೌನ್​ಡಿಟೆಕ್ಟರ್ ತಿಳಿಸಿದೆ.

ಡೌನ್​ಡಿಟೆಕ್ಟರ್​ನ ಅಧಿಕೃತ ಟ್ವಿಟರ್ ಅಕೌಂಟ್​ ಈ ಕುರಿತು ಟ್ವೀಟ್ ಮಾಡಿದ್ದು, ‘ಜಗತ್ತಿನ ಹಲವೆಡೆ ಯುಟ್ಯೂಬ್ ಬಳಕೆ ಪ್ರಮಾಣ ಏಕಾಏಕಿ ಕಡಿಮೆಯಾಗಿದೆ’ ಎಂದು ಹೇಳಿದೆ.

Published On - 11:22 am, Wed, 17 August 22