
Flipkart
ಫ್ಲಿಪ್‌ಕಾರ್ಟ್ ಭಾರತದ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿದ್ದು ಅದು ಆನ್‌ಲೈನ್ ಶಾಪಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಇದನ್ನು 2007 ರಲ್ಲಿ ಸ್ಥಾಪಿಸಲಾಯಿತು ಮತ್ತು ಅಂದಿನಿಂದ ಭಾರತದಲ್ಲಿ ಇ-ಕಾಮರ್ಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಗ್ಯಾಜೆಟ್‌ಗಳು, ಫ್ಯಾಶನ್ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ಆಭರಣಗಳು, ಪುಸ್ತಕಗಳು, ಮನೆಯ ಸಾಮಗ್ರಿ, ದಿನಸಿಗಳು, ಔಷಧಗಳು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಬೈಕ್‌ಗಳು-ಸ್ಕೂಟರ್‌ಗಳು ಮತ್ತು ಇನ್ನೂ ಅನೇಕ ಉತ್ಪನ್ನಗಳನ್ನು ಖರೀದಿಸಲು ಅನುಮತಿಸುತ್ತದೆ. ವಿವಿಧ ಬ್ರಾಂಡ್‌ಗಳ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡುವ ಆನ್‌ಲೈನ್ ವೇದಿಕೆಯಾಗಿದೆ. ಗ್ರಾಹಕರು ತಮ್ಮ ಇಚ್ಛೆಗೆ ತಕ್ಕಂತೆ ವಿವಿಧ ರೀತಿಯ ವಸ್ತುಗಳನ್ನು ಇಲ್ಲಿಂದ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ, ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟುಗಳು ಮತ್ತು ಇಎಂಐಗಳಂತಹ ವಿವಿಧ ಪಾವತಿ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದು.
iPhone 16 Price Cut: ಫ್ಲಿಪ್‌ಕಾರ್ಟ್‌ನಲ್ಲಿ ದಾಖಲೆಯ ಇಳಿಕೆ ಕಂಡ ಐಫೋನ್ 16 ಬೆಲೆ: ಎಷ್ಟು ನೋಡಿ
iPhone 16 Flipkart Offer: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಪಲ್ ಐಫೋನ್ 16 ಅನ್ನು ರೂ. 79,900 ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಫ್ಲಿಪ್‌ಕಾರ್ಟ್ ಪ್ರಸ್ತುತ ಈ ಫೋನನ್ನು ರೂ. 9,901 ನೇರ ಬೆಲೆ ಕಡಿತದೊಂದಿಗೆ ನೀಡುತ್ತಿದೆ. ಪಟ್ಟಿ ಮಾಡಲಾದ ಬೆಲೆ ರೂ. 69,999 ಆಗಿದೆ. ಇದರ ಮೇಲೆ, ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿ ರೂ. 5,000 ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
- Vinay Bhat
- Updated on: Apr 10, 2025
- 3:47 pm
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್15 ಸೇಲ್; 50,000 ರೂ ಡಿಸ್ಕೌಂಟ್ ಪಡೆಯುವ ಅವಕಾಶ
Flipkart mega saving days sales: ಫ್ಲಿಪ್ಕಾರ್ಟ್ನ ಮೆಗಾ ಸೇವಿಂಗ್ ಡೇಸ್ ಸೇಲ್ಸ್ ಆಫರ್ ಎಪ್ರಿಲ್ 15ರವರೆಗೂ ಇದೆ. ಇದರಲ್ಲಿ ಬಹಳಷ್ಟು ಫೋನ್, ಗೃಹೋಪಯೋಗಿ ಉಪಕರಣಗಳಿಗೆ ಭರ್ಜರಿ ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್ ಇದೆ. ಐಫೋನ್15 ಮೂಲ ಬೆಲೆ 80,000 ರೂ ಸಮೀಪ ಇದೆ. ಇದು 65,900 ರೂಗೆ ಡಿಸ್ಕೌಂಟ್ ಬೆಲೆಯಲ್ಲಿ ಸಿಗುತ್ತಿದೆ. ಫ್ಲಿಪ್‌ಕಾರ್ಟ್ ಸೇವಿಂಗ್ ಡೇಸ್ನ ಎಕ್ಸ್ಚೇಂಜ್ ಆಫರ್ ಅನ್ನು ಪರಿಗಣಿಸಿದರೆ ಐಫೋನ್15 ಮೇಲೆ 50,000 ರೂವರೆಗೆ ಡಿಸ್ಕೌಂಟ್ ಪಡೆಯಲು ಅವಕಾಶ ಇದೆ.
- Vijaya Sarathy SN
- Updated on: Apr 14, 2024
- 2:24 pm
ವೀಕೆಂಡ್ ರಜೆಗಳಿಲ್ಲ, ದಿನಕ್ಕೆ 15 ಗಂಟೆ ಕೆಲಸ; ವರ್ಕ್ ಫ್ರಂ ಕೇಳಲೇಬೇಡಿ: ಇದು ನವಿ ಕಂಪನಿ ಬಾಸ್ ಕಥೆ
Sachin Bansal Work culture: ಫ್ಲಿಪ್ಕಾರ್ಟ್ನ ಸಹ-ಸಂಸ್ಥಾಪಕರಾಗಿದ್ದ ಸಚಿನ್ ಬನ್ಸಾಲ್ ವಾರಕ್ಕೆ 80-100 ಗಂಟೆ ಕೆಲಸ ಮಾಡುತ್ತಾರಂತೆ. ವಾರಾಂತ್ಯದ ದಿನಗಳಲ್ಲೂ ಕಚೇರಿಗೆ ಬಂದು ಅವರು ಕೆಲಸ ಮಾಡುತ್ತಾರೆ. ನವಿ ಎಂಬ ಫಿನ್ಟೆಕ್ ಕಂಪನಿಯನ್ನು ಮುನ್ನಡೆಸುತ್ತಿರುವ ಅವರು ದಿನಕ್ಕೆ 12ರಿಂದ 15 ಗಂಟೆ ಕೆಲಸ ಮಾಡುತ್ತಾರೆ. ಆದರೆ, ತಾನು ವೀಕಾಫ್ ಇಲ್ಲದೇ ಇಷ್ಟು ಹೊತ್ತು ಕೆಲಸ ಮಾಡುತ್ತಿದ್ದರೂ ಬೇರೆ ಸಹೋದ್ಯೋಗಿಗಳಿಂದ ಅದನ್ನೇ ನಿರೀಕ್ಷಿಸುವುದಿಲ್ಲ ಎಂದು ಬನ್ಸಾಲ್ ಸ್ಪಷ್ಪಪಡಿಸುತ್ತಾರೆ.
- Vijaya Sarathy SN
- Updated on: Apr 3, 2024
- 12:14 pm
ಬೆಲೆ ಕೇವಲ 6,999 ರೂ.: ಭಾರತದಲ್ಲಿ ಹೊಸ ಪೋಕೋ C61 ಸ್ಮಾರ್ಟ್ಫೋನ್ ಮಾರಾಟ ಆರಂಭ
POCO C61 Sale: ಹೊಸ ಪೋಕೋ C61 ಅನ್ನು ಭಾರತದಲ್ಲಿ ಬಜೆಟ್ ಬೆಲೆಯಲ್ಲಿ ಎರಡು ಸ್ಟೋರೇಜ್ ಮೂಲಕ ಅನಾವರಣಗೊಳಿಸಲಾಗಿದೆ. ಇದರ ಬೆಲೆ 4GB + 64GB ವೇರಿಯಂಟ್‌ಗೆ 6,999 ರೂ. ಇದೆ. ಅಂತೆಯೆ 6GB+128GB ವೇರಿಯಂಟ್‌ಗೆ 7,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಇದೀಗ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದೆ.
- Vinay Bhat
- Updated on: Mar 29, 2024
- 3:07 pm
Flipkart UPI: ಫ್ಲಿಪ್ಕಾರ್ಟ್ನಿಂದ ಯುಪಿಐ ಹ್ಯಾಂಡಲ್ ಆರಂಭ
ಫ್ಲಿಪ್‌ಕಾರ್ಟ್ ಯುಪಿಐ ವೆಚ್ಚರಹಿತ ಪರಿಹಾರಗಳನ್ನು ಮತ್ತು ತಡೆರಹಿತ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ. ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಫ್ಲಿಪ್‌ಕಾರ್ಟ್ ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿ ವಹಿವಾಟುಗಳನ್ನು ನಡೆಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
- Vinay Bhat
- Updated on: Mar 3, 2024
- 1:27 pm