Mark movie
ಮಾರ್ಕ್ – Mark Movie
ಕಿಚ್ಚ ಸುದೀಪ್ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ‘ಮಾರ್ಕ್’. ಈ ಚಿತ್ರ 2025ರ ಡಿಸೆಂಬರ್ 25ರಂದು ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಸುದೀಪ್ ಅವರು ಮಾಸ್ ಮಸಾಲಾ ಅವತಾರಳ ತಾಳುವ ನಿರೀಕ್ಷೆ ಇದೆ. ಇದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಕನ್ನಡದ ಜೊತೆಗೆ ಮಲಯಾಳಂ, ತೆಲುಗು ತಮಿಳಿನಲ್ಲೂ ರಿಲೀಸ್ ಆಗಲಿದೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯ ಅವರು ‘ಮಾರ್ಕ್’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬಿ ಅಜನೀಶ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಮೊದಲು ಸಿನಿಮಾಗೆ ‘ಕೆ 47’ ಎಂದು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿತ್ತು. ಸುದೀಪ್ ಬರ್ತ್ಡೇ ಪ್ರಯುಕ್ತ ಸಿನಿಮಾದ ಟೈಟಲ್ ರಿವೀಲ್ ಆಯಿತು. ಈ ಚಿತ್ರಕ್ಕೆ ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿದೆ. ಕೇವಲ 7 ತಿಂಗಳಲ್ಲಿ ಸಿನಿಮಾ ಸಿದ್ಧವಾಗಲಿದೆ ಅನ್ನೋದು ವಿಶೇಷ.
‘ಮಾರ್ಕ್’ಗೆ ಸಂಕಷ್ಟ; ಟೈಟಲ್ ವಿಚಾರದಲ್ಲಿ ಭುಗಿಲೆದ್ದ ವಿವಾದ
ಕಿಚ್ಚ ಸುದೀಪ್ ಅವರ 47ನೇ ಚಿತ್ರವಾದ 'ಮಾರ್ಕ್' ಸಿನಿಮಾದ ಹೆಸರಿನಲ್ಲಿ ವಿವಾದ ಉದ್ಭವಿಸಿದೆ. KRG ಸ್ಟುಡಿಯೋ ಮತ್ತು ಗೌರವ್ ಫಿಲ್ಮ್ಸ್ ಎರಡೂ ಸಂಸ್ಥೆಗಳು ಈ ಹೆಸರನ್ನು ನೋಂದಾಯಿಸಿರುವುದು ವಿವಾದಕ್ಕೆ ಕಾರಣ. ಸುದೀಪ್ ಚಿತ್ರದ ಶೂಟಿಂಗ್ 60% ಪೂರ್ಣಗೊಂಡಿದ್ದು, ಡಿಸೆಂಬರ್ 25ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.
- Rajesh Duggumane
- Updated on: Sep 5, 2025
- 2:35 pm
24 ಗಂಟೆಯಲ್ಲಿ ‘ಮಾರ್ಕ್’ ಟೀಸರ್ ಹವಾ: ಸುದೀಪ್ ಅಭಿಮಾನಿಗಳು ಖುಷ್
‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರಿಗೆ ಅಜಯ್ ಮಾರ್ಕಂಡೆ ಎಂಬ ಪಾತ್ರವಿದೆ. ಸುದೀಪ್ ಬರ್ತ್ಡೇ ಸಂಭ್ರಮ ಹೆಚ್ಚಿಸಲು ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಆಯಿತು. 24 ಗಂಟೆಗಳಲ್ಲಿ 9.3 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ವಿಜಯ್ ಕಾರ್ತಿಕೇಯ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
- Madan Kumar
- Updated on: Sep 5, 2025
- 3:36 pm
ಸುದೀಪ್ 47ನೇ ಸಿನಿಮಾ ಹೆಸರು ‘ಮಾರ್ಕ್’: ಸಖತ್ ಮಾಸ್ ಆಗಿದೆ ಟೈಟಲ್ ಟೀಸರ್
ನಟ ಕಿಚ್ಚ ಸುದೀಪ್ ಅವರು ತಮ್ಮ 47ನೇ ಸಿನಿಮಾದ ಕೆಲಸಗಳನ್ನು ಪಟಪಟನೆ ಮುಗಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಏನು ಎಂಬುದನ್ನು ಚಿತ್ರತಂಡ ಈಗ ಬಹಿರಂಗಪಡಿಸಿದೆ. ‘ಮಾರ್ಕ್’ ಎಂದು ಹೆಸರು ಇಡಲಾಗಿದೆ. ಇದನ್ನು ತಿಳಿಸಲು ರಗಡ್ ಆದಂತಹ ಟೀಸರ್ ಅನಾವರಣ ಮಾಡಲಾಗಿದೆ. ಚಿತ್ರದ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
- Madan Kumar
- Updated on: Sep 5, 2025
- 2:33 pm