- Kannada News Photo gallery Kichcha Sudeep starrer Mark movie teaser gets 9 million views in 24 hours
24 ಗಂಟೆಯಲ್ಲಿ ‘ಮಾರ್ಕ್’ ಟೀಸರ್ ಹವಾ: ಸುದೀಪ್ ಅಭಿಮಾನಿಗಳು ಖುಷ್
‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರಿಗೆ ಅಜಯ್ ಮಾರ್ಕಂಡೆ ಎಂಬ ಪಾತ್ರವಿದೆ. ಸುದೀಪ್ ಬರ್ತ್ಡೇ ಸಂಭ್ರಮ ಹೆಚ್ಚಿಸಲು ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಆಯಿತು. 24 ಗಂಟೆಗಳಲ್ಲಿ 9.3 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ವಿಜಯ್ ಕಾರ್ತಿಕೇಯ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
Updated on:Sep 05, 2025 | 3:36 PM

ನಟ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಸಖತ್ ಸುದ್ದಿ ಆಗುತ್ತಿದೆ. ಕಿಚ್ಚನ ಹುಟ್ಟುಹಬ್ಬಕ್ಕೆ ಟೈಟಲ್ ಟೀಸರ್ ರಿಲೀಸ್ ಮಾಡಲಾಗಿತ್ತು. ಎಲ್ಲೆಡೆ ಈ ಟೈಟಲ್ ಟೀಸರ್ ದಾಖಲೆ ಬರೆದಿದೆ.

ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ. ಟೀಸರ್ನಲ್ಲಿ ಈ ವಿಷಯ ಬಹಿರಂಗ ಆಗಿದೆ. ಚಿತ್ರದಲ್ಲಿ ಸುದೀಪ್ ಗೆಟಪ್ ಹೇಗಿರಲಿದೆ ಎಂಬುದು ಗೊತ್ತಾಗಿದೆ.

24 ಗಂಟೆಯಲ್ಲಿ ‘ಮಾರ್ಕ್’ ಟೈಟಲ್ ಟೀಸರ್ ಯೂಟ್ಯೂಬ್ನಲ್ಲಿ 5.01 ಮಿಲಿಯನ್ ವೀವ್ಸ್ ಕಂಡಿದೆ. ಇನ್ಸ್ಟಾಗ್ರಾಮ್ನಲ್ಲಿ 4.3 ಮಿಲಿಯನ್ ಆಗಿದೆ. ಎರಡೂ ಸೇರಿ 9.3 ಮಿಲಿಯನ್ ವೀವ್ಸ್ ಆಗಿದೆ. ಇದು ದಾಖಲೆ.

ಈ ಸಿನಿಮಾವನ್ನು ‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ನಿರ್ಮಿಸುತ್ತಿವೆ. ಇದೇ ವರ್ಷ ಡಿಸೆಂಬರ್ 25ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

‘ಮ್ಯಾಕ್ಸ್’ ಖ್ಯಾತಿಯ ವಿಜಯ್ ಕಾರ್ತಿಕೇಯ ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್ನಲ್ಲಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.
Published On - 5:05 pm, Wed, 3 September 25




