Nobel Prize
Nobel Prize – ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಆದರೆ ಅವರ ಈ ಆವಿಷ್ಕಾರವು ಅವರಿಗೆ ಟೀಕೆಯಷ್ಟೇ ಖ್ಯಾತಿಯನ್ನೂ ತಂದುಕೊಟ್ಟಿತು. ನಂತರ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆಯನ್ನು ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು. ಈ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.
Nobel Prize 2025: ನೊಬೆಲ್ ಪ್ರಶಸ್ತಿ ಎಂದರೇನು? ಯಾವ್ಯಾವ ವರ್ಗಗಳಲ್ಲಿ ನೀಡಲಾಗುತ್ತೆ, ವಿಜೇತರ ಪಟ್ಟಿ ಇಲ್ಲಿದೆ
Nobel Prize 2025 Winners List: ಈ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆ ಶುರುವಾಗಿದೆ. ಅಕ್ಟೋಬರ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಪ್ರತಿಯೊಬ್ಬ ವಿಜ್ಞಾನಿ, ಬರಹಗಾರ ಮತ್ತು ಸಮಾಜ ಸೇವಕರು ಕನಸು ಕಾಣುವ ಪ್ರಶಸ್ತಿಯತ್ತ ಪ್ರಪಂಚದ ಗಮನ ತಿರುಗುತ್ತದೆ. ನಾವು ಮಾತನಾಡುತ್ತಿರುವುದು ನೊಬೆಲ್ ಪ್ರಶಸ್ತಿ(Nobel Prize) ಬಗ್ಗೆ. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 6ರಿಂದ ಆರಂಭವಾಗಿದ್ದು ಅಕ್ಟೋಬರ್ 13ರವರೆಗೆ ಮುಂದುವರೆಯುತ್ತದೆ. ವೈದ್ಯಕೀಯ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರದಲ್ಲಿ ಸಾಧನೆ ಮಾಡಿರುವ ವಿಶ್ವದ ಅತ್ಯಂತ ವಿಶಿಷ್ಟ ವ್ಯಕ್ತಿಗಳಿಗೆ ಈ ಗೌರವ ಸಲ್ಲುತ್ತದೆ.
- Nayana Rajeev
- Updated on: Oct 10, 2025
- 2:47 pm
Nobel Prize 2025 Winners: ವೈದ್ಯಕೀಯ ಕ್ಷೇತ್ರದಲ್ಲಿನ ಮಾನವೀಯ ಕೆಲಸಕ್ಕೆ ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಣೆ
2025ರ ನೊಬೆಲ್ ಪ್ರಶಸ್ತಿಗಳನ್ನು ಇಂದಿನಿಂದ ಘೋಷಿಸಲಾಗುತ್ತಿದೆ. ಶರೀರಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ಮೂವರು ವ್ಯಕ್ತಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಮೆಡಿಸಿನ್ ಕ್ಷೇತ್ರದ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಮೇರಿ ಇ. ಬ್ರಂಕೊ, ಫ್ರೆಡ್ ರಾಮ್ಸ್‌ಡೆಲ್ ಮತ್ತು ಶಿಮೋಲ್ ಸಕಾಗುಜ್ಜಿ ಅವರಿಗೆ ಘೋಷಿಸಲಾಗಿದೆ. ರೋಗನಿರೋಧಕ ಸಹಿಷ್ಣುತೆಗೆ ಸಂಬಂಧಿಸಿದ ಅವರ ಸಂಶೋಧನೆಗಳಿಗಾಗಿ ಈ ಮೂವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುವುದು.
- Sushma Chakre
- Updated on: Oct 7, 2025
- 10:05 am