ಥೈಲ್ಯಾಂಡ್ (Thailand) ನ 102 ವರ್ಷದ ವೃದ್ಧ ಓಟಗಾರ 27 ಸೆಕೆಂಡ್ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸವಾಂಗ್ ಜನಪ್ರಮ್ (Sawang Janpram) ಎನ್ನುವ ವೃದ್ಧ ಈ ಸಾಧನೆ ಮಾಡಿದ್ದಾರೆ. ಇವರನ್ನು ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಓಟಗಾರ ಎಂತಲೇ ಹೇಳುತ್ತಾರೆ. ಕಳೆದ ವಾರಾಂತ್ಯದಲ್ಲಿ ಥೈಲ್ಯಾಂಡ್‌ನ ನೈಋತ್ಯ ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನ 26 ನೇ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಸವಾಂಗ್ ತಮ್ಮ 100-105 ವರ್ಷಗಳ ಅವಧಿಯಲ್ಲಿ, ಓಟದ ಎಲ್ಲಾ ವಿಭಾಗಗಳಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಎಂದು ವರದಿ ತಿಳಿಸಿದೆ.
Sawang Janpram, 102, broke the Thai 100m record – for centenarians – at the annual Thailand Master Athletes Championships https://t.co/GZcaQGrAoR pic.twitter.com/OxqGLiXySI
— Reuters (@Reuters) March 3, 2022
102ನೇ ವರ್ಷದಲ್ಲಿಯೂ ಕುಗ್ಗದ ಆತ್ಮವಿಶ್ವಾಸ, ಧೈರ್ಯವನ್ನು ಕಂಡು ಜಗತ್ತಿನಾದ್ಯಂತ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಈ ಹಿಂದೆ ಉಸೇನ್ ಬೋಲ್ಟ್ 100 ಮೀ ಓಟವನ್ನು 9.58 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದರು. ಅವರ ಬಳಿಕ ಈಗ 102 ನೇ ವಯಸ್ಸಿನಲ್ಲಿ ಇದೇ ಮೊದಲ ಬಾರಿಗೆ ಸವಾಂಗ್ 27. 08 ಸೆಕೆಂಡ್ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ.
ಸಾವಾಂಗ್ ಪ್ರತಿದಿನ ತಮ್ಮ 70 ವರ್ಷದ ಮಗಳೊಂದಿಗೆ ರನ್ನಿಂಗ್ ಅಭ್ಯಾಸ ಮಾಡುತ್ತಾರಂತೆ. ಇದೇ ಇವರ ಸಾಧನೆಯ ಗುಟ್ಟು ಎನ್ನುತ್ತಾರೆ ಅವರ ಮಗಳು. ಸದ್ಯ ಇವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿದೆ. ಈ ಕುರಿತು ರಾಯಿಟರ್ಸ್ ವಿಡಿಯೋ ಹಂಚಿಕೊಂಡಿದೆ.
ಇದನ್ನೂ ಓದಿ: