Viral: ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಕೆಲಸದ ಸ್ಥಳಗಳಲ್ಲಿ ಕೆಲವು ಉದ್ಯೋಗಿಗಳು ಅನುಭವಿಸುವ ಮಾನಸಿಕ ಕಿರಿಕಿರಿ ಹೇಳಲಾಗದು. ಎಷ್ಟೇ ಪರ್ಫೆಕ್ಟ್ ಆಗಿ ಕೆಲಸ ಮಾಡಿದ್ರೂ ಬಾಸ್‌ಗಳಿಗೆ ಸಮಾಧಾನ ಆಗುವುದೇ ಇಲ್ಲ. ಇದೀಗ ಭಾರತೀಯ ಉದ್ಯೋಗಿಯೊಬ್ಬರು ದೀರ್ಘ ಕೆಲಸದ ಸಮಯ ಹಾಗೂ ಕಡಿಮೆ ವೇತನದ ಬಗ್ಗೆ ಅಸಮಾಧಾನ ಹೊರಹಾಕಿದ್ದು ತಾವು ಅನುಭವಿಸುವ ಕಷ್ಟವನ್ನು ಹೇಳಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ದಿನಕ್ಕೆ 12 ಗಂಟೆ ಕೆಲಸ, ಸರಿಯಾಗಿ ಕೆಲ್ಸ ಮಾಡುತ್ತಿಲ್ಲ ಅನ್ನೋ ಆರೋಪ; ಉದ್ಯೋಗ ಸ್ಥಳದ ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ
ಸಾಂದರ್ಭಿಕ ಚಿತ್ರ
Image Credit source: Reddit

Updated on: Oct 22, 2025 | 4:25 PM

ಕೈಯಲ್ಲೊಂದು ಕೆಲಸವಿದ್ದರೇನೇ (job) ಮರ್ಯಾದೆ. ಆದರೆ ಕತ್ತೆ ತರಹ ದುಡಿದ್ರೂ ಬೆಲೆಯೇ ಇಲ್ಲ. ಹೌದು, ಕೆಲಸದ ಸ್ಥಳಗಳಲ್ಲಿ ಅತಿಯಾದ ಒತ್ತಡ, ಮಾನಸಿಕ ಕಿರಿಕಿರಿ ಕೆಲಸ ಬಿಟ್ಟರೆ ಸಾಕಪ್ಪ ಸಾಕು ಎಂದೆನಿಸುತ್ತದೆ. ಆದರೆ ದುಡಿಯುವುದು ಅನಿವಾರ್ಯ ಎನ್ನುವ ಕಾರಣಕ್ಕಾಗಿ ಎಲ್ಲವನ್ನು ಸಹಿಸಿಕೊಂಡು ಹೋಗ್ತಾರೆ. ಇದೀಗ ಭಾರತೀಯ ಉದ್ಯೋಗಿಯೊಬ್ಬರು (Indian employee) ದಿನಕ್ಕೆ 12 ಗಂಟೆಗಳ ಕೆಲಸ ಮಾಡಿದ್ರೂ, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳ್ತಾರೆ. ಕಂಪನಿ ತನ್ನನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.

ವಿಚ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಉದ್ಯೋಗಿಯೊಬ್ಬರು ತಮ್ಮ @lunarstarfish ಹೆಸರಿನ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಕೆಲಸ ಸ್ಥಳಗಳಲ್ಲಿ ದಿನಕ್ಕೆ 12 ಗಂಟೆಗಳ ಕೆಲಸ ಮಾಡಿದ್ರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕಂಪನಿಯ 90 ದಿನಗಳ ನೋಟಿಸ್ ಅವಧಿಯಲ್ಲಿ ನೇಮಕಾತಿದಾರರಿಂದ ಕರೆಗಳನ್ನು ಸ್ವೀಕರಿಸಲು ಕಷ್ಟಕರವಾಗುತ್ತದೆ. ನಾಲ್ಕು ವರ್ಷಗಳಿಗೂ ಹೆಚ್ಚಿನ ಅನುಭವದೊಂದಿಗೆ, ಉದ್ಯೋಗಿಗೆ ಇನ್ನೂ ಬಹಳ ಕಡಿಮೆ ವೇತನ ನೀಡಲಾಗುತ್ತಿದೆ. ಈ ಬಗ್ಗೆ ಕೇಳಿದ್ರೂ ಬಜೆಟ್ ಇಲ್ಲ ಎಂಬ ಕಾರಣದಿಂದಾಗಿ ಪದೇ ಪದೇ ವೇತನ ಹೆಚ್ಚಳವನ್ನು ನಿರಾಕರಿಸಲಾಗಿದೆ. ನನ್ನ ಹತಾಶೆಗಳು ಈಗ ಉತ್ತುಂಗಕ್ಕೇರಿವೆ. ನಿಜವಾಗಿಯೂ ಹತಾಶ ಭಾವನೆ ಮೂಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ
ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ವಾರದ ಸಂಪಾದನೆ 21 ಸಾವಿರ ರೂ ಅಂತೆ
ಟಾರ್ಗೆಟ್ ಹೆಚ್ಚಾಗ್ತವೆ, ಸಂಬಳವಲ್ಲ; ಉದ್ಯೋಗಿಯ ರಿಸೈನ್‌ ಲೆಟರ್‌ ವೈರಲ್‌
ಇಂಟರ್ವ್ಯೂನಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ನೋಡಿ

ಇದನ್ನೂ ಓದಿ:ಸರ್​ ಕೆಲಸ ಮುಗಿಯಿತು, ರೀಲ್ಸ್ ನೋಡಬಹುದಾ? ಹೊಸ ಉದ್ಯೋಗಿಯ ವರ್ತನೆಗೆ ಮ್ಯಾನೇಜರ್ ಶಾಕ್!

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಇಂತಹ ಕೆಲಸದ ವಾತಾವರಣವಿದ್ದರೆ ಬೇರೆ ಉದ್ಯೋಗ ಹುಡುಕುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು ನಿಮ್ಮ ಕೆಲಸದ ಸ್ಥಳಗಳಲ್ಲಿ ಯಾವುದೇ ಬೆಳವಣಿಗೆ ಇಲ್ಲ, ಕಲಿಕೆ ಇಲ್ಲ ಅತಿಯಾದ ಬೆಂಬಲವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅದೇ ನರಕದಲ್ಲಿ ನಾನು ಸಿಲುಕಿಕೊಂಡೆ. ಈ ಪರಿಸರ ಭಯಾನಕವಾಗಿದೆ. ನಾನು ಈಗಾಗಲೇ ಬಿಟ್ಟು ಬೇರೆಡೆ ನೋಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ