AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಾಸ್​​ಗಳ ಜತೆ ಬಟ್ಟೆಯಿಲ್ಲದೇ ನಡೆಯುತ್ತೆ ಮೀಟಿಂಗ್​​!

ಫಿನ್​ಲ್ಯಾಂಡ್ ಜಗತ್ತಿನ ಅತಿ ಸಂತೋಷದ ದೇಶವಾಗಿ ಎಂಟು ವರ್ಷಗಳಿಂದ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇಲ್ಲಿನ ವಿಶಿಷ್ಟ ಸಂಸ್ಕೃತಿ, ಸೌನ ಸ್ನಾನ, ಮತ್ತು ಬೆತ್ತಲೆ ವ್ಯಾಪಾರ ಸಭೆಗಳು ಹೊರಗಿನವರಿಗೆ ವಿಚಿತ್ರ ಎನಿಸಬಹುದು. ಆದರೆ, ಇವುಗಳೇ ಅಲ್ಲಿನ ಜನರ ಆರೋಗ್ಯ, ಸಂತೋಷ ಮತ್ತು ಮುಕ್ತ ಜೀವನಶೈಲಿಗೆ ಕಾರಣ. ಇಲ್ಲಿನ ಉತ್ತಮ ಕೆಲಸ-ಜೀವನ ಸಮತೋಲನವು ಅವರನ್ನು ಅತ್ಯಂತ ಸುಖಿಗಳನ್ನಾಗಿ ಮಾಡಿದೆ.

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಾಸ್​​ಗಳ ಜತೆ ಬಟ್ಟೆಯಿಲ್ಲದೇ ನಡೆಯುತ್ತೆ ಮೀಟಿಂಗ್​​!
ವೈರಲ್​​ ಪೋಸ್ಟ್​
ಅಕ್ಷಯ್​ ಪಲ್ಲಮಜಲು​​
|

Updated on: Oct 23, 2025 | 9:59 AM

Share

ಒಂದೊಂದು ದೇಶಕ್ಕೆ ಅವರದ್ದೇ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುತ್ತಾರೆ. ಅದು ಬೇರೆ ದೇಶಗಳಿಗೆ ವಿಚಿತ್ರ ಎಂದು ಅನ್ನಿಸಬಹುದು. ಆದರೆ ಅದಕ್ಕೊಂದು ಕಾರಣ ಇರುತ್ತದೆ. ಇದೀಗ ನಾವು ಹೇಳುತ್ತಿರುವುದು ಫಿನ್​ಲ್ಯಾಂಡಿನ (Finland) ವಿಚಿತ್ರ ಸಂಸ್ಕೃತಿಯನ್ನು, ಹೌದು ಇಲ್ಲಿ ಕೆಲವೊಂದು ವಿಚಿತ್ರ ಸಂಸ್ಕೃತಿಯನ್ನು ಹೊಂದಿದೆ. ಮತ್ತು ಜಗತ್ತಿನ ಅತ್ಯಂತ ಸುಂದರ ಹಾಗೂ ತುಂಬಾ ಸಂತೋಷವಾಗಿರುವ ದೇಶ ಇದು. ಇಲ್ಲಿನ ಜೀವನಶೈಲಿಯೇ ಬೇರೆ, ಆಚಾರ-ವಿಚಾರಗಳು ಕೂಡ ವಿಭಿನ್ನವಾಗಿದೆ. ಒಂದು ವರದಿಯ ಪ್ರಕಾರ ಇಲ್ಲಿ 7.741ರಷ್ಟು ಸಂತೋಷದಾಯಕ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ಫಿನ್​ಲ್ಯಾಂಡ್​​​​​ ಸತತ ಎಂಟು ವರ್ಷಗಳ ಕಾಲ ಜಗತ್ತಿನ ಅತ್ಯಂತ ಸುಖಿ ದೇಶ ಎಂಬ ಪಟ್ಟವನ್ನು ಪಡೆದಿದೆ. ಇಲ್ಲಿ ಕೆಲವೊಂದು ಕುತೂಹಲಕಾರಿ ವಿಚಾರಗಳು ಇದೆ. ಅದೇನು ಎಂಬುದು ಇಲ್ಲಿದೆ ನೋಡಿ.

ಫಿನ್​ಲ್ಯಾಂಡಿನಲ್ಲಿ ಸೌನ ಸ್ನಾನ ಅಥವಾ ಉಗಿ ಸ್ನಾನ ಎಂಬ ಪದ್ಧತಿ ಇದೆ. ಇದೊಂದು ಪ್ರಾಚೀನ ಸಂಸ್ಕೃತಿಯಾಗಿದೆ. ಇದು ದೇಹದ ಆರೋಗ್ಯದ ಮೇಲೆ ಉಪಯುಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ಒಂದು ಮರದ ಪಟ್ಟಿಯಿಂದ ತಯಾರಿಸಿದ ಚಿಕ್ಕ ಕೊಣೆ, ಅದರಲ್ಲಿ ಉಷ್ಣತೆಯನ್ನು ಉತ್ಪಾದಿಸಲು ರೊಕ್​​​ಗಳ ಮೇಲೆ ನೀರನ್ನು ಹಾಕಿ, ಅದರ ಮೂಲಕ ನೀರಿನ ಆವಿಯೊಂದಿಗೆ ಬಿಸಿ ತಾಪಮಾನವನ್ನು ಸೃಷ್ಟಿಸಿ ಸ್ನಾನ ಮಾಡುವುದನ್ನು ಸೌನ ಸ್ನಾನ ಎಂದು ಹೇಳುತ್ತಾರೆ. ಇದರಿಂದ ರಕ್ತದ ಒತ್ತಡ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಸ್ನಾಯುಗಳು ಬಲಗೊಳ್ಳುತ್ತದೆ.

ಇಲ್ಲಿದೆ ವೈರಲ್​ ಪೋಸ್ಟ್​​:

ಇನ್ನು ಇಲ್ಲಿ ನಗ್ನತೆಯನ್ನು ಕೂಡ ತುಂಬಾ ಸಾಮಾನ್ಯವಾಗಿ ತೆಗೆದುಕೊಳ್ಳತ್ತಾರೆ. ಯಾವುದೇ ಮುಜುಗರ ಇಲ್ಲ. ಏಕೆಂದರೆ ಇದು ಇಲ್ಲಿನ ಆಚಾರವಾಗಿದೆ. ಇದರ ಜತೆಗೆ ವ್ಯಾಪಾರ – ವಹಿವಾಟುಗಳು ಹಾಗೂ ಬಿಸಿನೆಸ್ ಮೀಟಿಂಗ್​​ ಎಲ್ಲವೂ ಸೌನ ಸ್ನಾನದಲ್ಲೇ ನಡೆಯುತ್ತದೆ. ಸೌನದಲ್ಲಿ ನಡೆಯುವ ಯಾವುದೇ ಚರ್ಚೆಗಳು ಅದು ಹೊರಗೆ ಬರುವುದಿಲ್ಲ ಎಂಬುದನ್ನು ಇಲ್ಲಿ ಜನರ ನಂಬಿಕೆ. ಇನ್ನು ವಿಚಿತ್ರವೆಂದರೆ ಮೀಟಿಂಗ್​​​ಗಳನ್ನು ಇಲ್ಲಿ ಬೆತ್ತಲೆಯಾಗಿ ಮಾಡುತ್ತಾರೆ. ಈ ಬಗ್ಗೆ ವಿಡಿಯೋವೊಂದನ್ನು tanyakhanijow ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ

ಈ ದೇಶ ಯಾಕೆ ಇಷ್ಟು ಸಂತೋಷವಾಗಿದೆ ಎಂದರೆ, ಇಲ್ಲಿ ಯಾವುದಕ್ಕೂ ಮುಜುಗರ ಇಲ್ಲ, ಎಲ್ಲವನ್ನು ಸ್ವತಂತ್ರ್ಯವಾಗಿ ಮಾಡುತ್ತಾರೆ. ಇನ್ನು ಬಾಸ್​​ಗಳ ಜತೆಗೆ ಬೆತ್ತಲೆಯಾಗಿ ಸಭೆಗಳನ್ನು ಮಾಡುತ್ತಾರೆ. ಹಾಗೂ ಇಲ್ಲಿ 5 ದಿನ ಮಾತ್ರ ಕೆಲಸ, ಉಳಿದ ದಿನ ರಜೆ, ಅದು ಕೂಡ ಸಂಬಳದೊಂದಿಗೆ ರಜೆಯನ್ನು ನೀಡುತ್ತಾರೆ. ಇಲ್ಲಿ ಕೆಲಸ ಕೂಡ ಬೇಕಾದ ರೀತಿಯಲ್ಲಿ ಮಾಡಬಹುದು ಅಂದರೆ 4 ಗಂಟೆಯಲ್ಲೂ ಕೂಡ ನಿಮ್ಮ ಕೆಲಸ ಮುಗಿಸಿ ಹೋಗಬಹುದು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ