ಸ್ಮಾರ್ಟ್​ಫೋನ್​ ಖರೀದಿಸಲು ತನ್ನ ರಕ್ತ ಮಾರಲು ಪ್ರಯತ್ನಿಸಿದ 16ರ ಹುಡುಗಿ

| Updated By: ಶ್ರೀದೇವಿ ಕಳಸದ

Updated on: Oct 20, 2022 | 10:23 AM

Girl tries to sell her blood : ‘ಇನ್ನೇನು 9,000 ಮೌಲ್ಯದ ಸ್ಮಾರ್ಟ್​ಫೋನ್​ ಡೆಲಿವರಿ ಆಗುತ್ತದೆ. ನನ್ನ ರಕ್ತ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಹಣ ಕೊಡಿ’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಕೇಳಿಕೊಂಡಿದ್ದಾಳೆ ಪಶ್ಚಿಮಬಂಗಾಳದ ಈ ಹುಡುಗಿ.

ಸ್ಮಾರ್ಟ್​ಫೋನ್​ ಖರೀದಿಸಲು ತನ್ನ ರಕ್ತ ಮಾರಲು ಪ್ರಯತ್ನಿಸಿದ 16ರ ಹುಡುಗಿ
ಪ್ರಾತಿನಿಧಿಕ ಚಿತ್ರ
Follow us on

Trending : ಎಲ್ಲರ ಬಳಿ ಸ್ಮಾರ್ಟ್​ಫೋನ್​ ಇದೆ, ನನಗೂ ನನ್ನದೇ ಆದ ಸ್ಮಾರ್ಟ್​ಫೋನ್​ ಬೇಕು ಅನ್ನಿಸುವುದಿಲ್ಲವಾ? ನನಗೂ ಕೊಡಿಸು ಎಂದು ಮುಲಾಜಿಲ್ಲದೇ ಇಂದು ಪುಟ್ಟಮಕ್ಕಳೂ ನಿರ್ಭಿಡೆಯಿಂದ ಕೇಳುವಂಥ ಕಾಲವಿದು. ಇನ್ನು ಹದಿಹರೆಯದ ಮಕ್ಕಳ ಮನಸ್ಸಿನಲ್ಲಿ ಸ್ಮಾರ್ಟ್​ಫೋನ್​ ಹೊಂದಲು ಏನೆಲ್ಲ ಆಲೋಚನೆಗಳು ದಾಂಗುಡಿ ಇಡುತ್ತಿರಬಹುದು? ಇದಕ್ಕೆ ಉದಾಹರಣೆ ಎಂಬಂತೆ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ ದಿನಾಜ್​ಪುರದ ತಪನ್​ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಆತಂಕ ಪಡುವಂಥ ಒಂದು ಘಟನೆ ನಡೆದಿದೆ. ಕರಾಡಾದ 16 ವರ್ಷದ ಹುಡುಗಿಯೊಬ್ಬಳು ಸ್ಮಾರ್ಟ್​ ಫೋನ್​ ಖರೀದಿಸಲೆಂದು ತನ್ನ ರಕ್ತವನ್ನು ಮಾರಲು ಪ್ರಯತ್ನಿಸಿದ್ದು ವರದಿಯಾಗಿದೆ.  12ನೇ ತರಗತಿ ಓದುತ್ತಿರುವ ಈ ಹುಡುಗಿ ರೂ. 9000 ಮೌಲ್ಯದ ಸ್ಮಾರ್ಟ್​ ಫೋನ್​ ಅನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದಾಳೆ.

ಆರ್ಡರ್​ ಮಾಡುವುದೇನೋ ಮಾಡಿಬಿಟ್ಟಿದ್ದಾಳೆ. ಆದರೆ ಅಷ್ಟೊಂದು ಹಣವನ್ನು ಹೇಗೆ ಹೊಂದಿಸಬೇಕು? ಮನೆಯಲ್ಲಿ ಯಾರಾದರೂ ಬಳಿ ಕೇಳಹೊರಟರೆ ಗುಟ್ಟು ರಟ್ಟಾಗುತ್ತದೆ. ಇನ್ನು ಸ್ನೇಹಿತರ ಬಳಿ ಅಷ್ಟೊಂದು ಹಣ ಎಲ್ಲಿಂದ ಬರಬೇಕು? ಆಗ ಆಕೆಗೆ ಹೊಳೆದದ್ದು ರಕ್ತದಾನ ಮಾಡಿ ಹಣವನ್ನು ಪಡೆಯುವುದು. ಸಮೀಪದ ಬಾಲೂರ್​ಘಾಟ್​ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನಿಸಿದ್ದಾಳೆ.

ಆ ಪ್ರಕಾರ ಆಸ್ಪತ್ರೆಗೆ ತಲುಪಿ ಸಿಬ್ಬಂದಿಯೊಂದಿಗೆ ಮಾತನಾಡಿ, ರಕ್ತದಾನಕ್ಕೆ ಪ್ರತಿಯಾಗಿ ಹಣವನ್ನು ಕೊಡಬೇಕೆಂದು ಕೇಳಿಕೊಂಡಿದ್ದಾಳೆ. ಅವಳ ಈ ನಡೆ ಆಸ್ಪತ್ರೆಯ ಸಿಬ್ಬಂದಿಗೆ ಅಸಹಜವೆನ್ನಿಸಿದೆ. ‘ಆ ಹುಡುಗಿ ಆಸ್ಪತ್ರೆಗೆ ಬಂದು, ತಾನು ರಕ್ತದಾನ ಮಾಡುತ್ತೇನೆ. ಆದರೆ ಅದರ ಬದಲಾಗಿ ಹಣ ಕೊಡಬೇಕು ಎಂದು ಕೇಳಿದಳು. ನಿಜಕ್ಕೂ ಇದನ್ನು ಕೇಳಿ ಆಘಾತ ಮತ್ತು ಅನುಮಾನ ಉಂಟಾಯಿತು’ ಎಂದು ಬ್ಲಡ್​ ಬ್ಯಾಂಕ್​ನ ಕನಕ್​ ದಾಸ್​ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆಸ್ಪತ್ರೆಯ ಸಿಬ್ಬಂದಿಯು ತಕ್ಷಣವೇ ಮಕ್ಕಳ ಚೈಲ್ಡ್​ ಕೇರ್ ಡಿಪಾರ್ಟ್​ಮೆಂಟ್​ಗೆ ಈ ವಿಷಯವನ್ನು ತಿಳಿಸಲಾಗಿ, ಚೈಲ್ಡ್​ ಕೇರ್ ಡಿಪಾರ್ಟ್​ಮೆಂಟ್​ನ ಸದಸ್ಯೆ ರೀಟಾ ಮಹ್ತೋ ಈ ಹುಡುಗಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ‘ಇನ್ನೇನು ಸದ್ಯದಲ್ಲೇ ನನ್ನ ಸ್ಮಾರ್ಟ್​ಫೋನ್​ ಡೆಲಿವರಿ ಆಗಲಿದೆ. ಆದ್ದರಿಂದ ಅದಕ್ಕಾಗಿ ಹಣವನ್ನು ಹೊಂದಿಸಲು ಹೀಗೆಲ್ಲ ಯೋಚಿಸಿದೆ’ ಎಂದು ರೀಟಾ ಅವರಿಗೆ ತಿಳಿಸಿದ್ದಾಳೆ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:22 am, Thu, 20 October 22