ಸಮುದ್ರ ಸದಾ ವಿಸ್ಮಯಗಳನ್ನು ಹುಟ್ಟುಹಾಕುವ ಜಾಗ. ತನ್ನದಲ್ಲದ ವಸ್ತುಗಳನ್ನು ದಡಕ್ಕೆ ತಂದೆಸೆಯುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಉತ್ತರ ಕೆರೊಲಿನ್ ದೇಶದ ಸಮುದ್ರ ತೀರದಲ್ಲಿ ವರ್ಷಗಳ ಹಿಂದೆ ಮುಳುಗಿದ್ದ 1800ರ ಸಮಯದ ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ಜಗತ್ತಿನೆಲ್ಲಡೆ ವೈರಲ್ ಆಗಿದೆ. ಬಾಲ್ಡ್ ಹೆಡ್ ಐಲ್ಯಾಂಡ್ನಲ್ಲಿರುವ ಶೋಲ್ಸ್ ಕ್ಲಬ್ ರೆಸಾರ್ಟ್ ಬೀಚ್ಫ್ರಂಟ್ನಲ್ಲಿ ಅವಶೇಷಗಳು ಕಾಣಿಸಿಕೊಂಡಿವೆ. ರೆಸಾರ್ಟ್ನ ಫೇಸ್ಬುಕ್ ಪುಟದಲ್ಲಿ ಪೋಟೊಗಳನ್ನು ಹಂಚಿಕೊಂಡಿದೆ.
ಸಮುದ್ರದ ದಡದಲ್ಲಿ ಕಂಡುಬಂದ ಹಡಗಿನ ಅವಶೇಷಗಳ ಬಗ್ಗೆ ಅಧ್ಯಯನ ನಡೆಸಲು ಪುರಾತತ್ವ ಇಲಾಖೆಯ ಸಂಶೋಧಕರು ಮುಂದಾಗಿದ್ದು, ಯಾವಾಗ ನಡೆದ ಅಪಘಾತದಿಂದ 1800 ವರ್ಷಗಳ ಕಾಲ ಹಡಗು ಮುಳುಗಿದೆ ಎಂದು ಪತ್ತೆ ಮಾಡಲು ಉತ್ಸುಕರಾಗಿದ್ದಾರೆ. ಅಲ್ಲದೆ ಈ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸಲು ಹೆಚ್ಚಿನ ಸಮಯದ ಅಗತ್ಯವಿದೆ. ಇನ್ನೂ ಕೆಲವು ಅವಶೇಷಗಳನ್ನು ಹುಡುಕಿ ಸಂಶೋಧನೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ರೆಸಾರ್ಟ್ ಬಳಿ ಇರುವ ಸಮುದ್ರದ ದಡದಲ್ಲಿ ಕಂಡುಬಂದ ಅವೇಶೇಷಗಳನ್ನು ಕಂಡು ಪ್ರವಾಸಿಗರೂ ಕೂಡ ಅಚ್ಚರಿಗೊಂಡಿದ್ದಾರೆ. ಸದ್ಯ ಸಂಶೂಧಕರು ಚೀನಾ ಅಕ್ಷರದಲ್ಲಿ ಚಿನ್ ಶೂ ಯುವಾನ 2 ಎಂದು ಬರೆದಿರುವುದನ್ನು ಗುರುತಿಸಿದ್ದು, ಪ್ರಾಥಮಿಕ ಸಂಶೋಧನೆಯಲ್ಲಿ ಹಡಗು 19ನೇ ಶತಮಾನದ್ದು ಎಂದು ಹೇಳಲಾಗಿದ್ದು, ಯಾವುದೇ ಸರಕುಗಳನ್ನು ಸಾಗಿಸುತ್ತಿದ್ದುದರ ಕುರಿತು ಪುರಾವೆಗಳು ದೊರೆತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:
10 ವರ್ಷಗಳ ಹಿಂದೆ ಕಳೆದು ಹೋಗಿದ್ದ ಐ-ಫೋನ್ ಶೌಚಾಲಯದಲ್ಲಿ ಪತ್ತೆ: ಇದ್ಹೇಗೆ ಸಾಧ್ಯ ಎಂದ ನೆಟ್ಟಿಗರು
Published On - 11:48 am, Tue, 1 March 22