Viral Video: ಹೋಳಿ ಹೆಸರಲ್ಲಿ ರಸ್ತೆಯಲ್ಲಿ ಯುವತಿಯರಿಬ್ಬರ ಅಸಭ್ಯ ವರ್ತನೆ; 33,000 ರೂ ದಂಡ​​

|

Updated on: Mar 26, 2024 | 12:11 PM

ಪವಿತ್ರ ಸಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಹೋಲಿ ಹಬ್ಬವನ್ನು ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸುವ ಮೂಲಕ ಆಚರಿಸಿರುವುದನ್ನು ಕಂಡು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಇದಲ್ಲದೇ ಸ್ಕೂಟರ್​ ಓಡಿಸಿದ ಯುವಕ ಹಾಗೂ ಹಿಂಬದಿಯಲ್ಲಿ ಕುಳಿತು ರೀಲ್ಸ್​​ ಮಾಡುತ್ತಿದ್ದ ಯುವತಿಯರ ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ.

Viral Video: ಹೋಳಿ ಹೆಸರಲ್ಲಿ ರಸ್ತೆಯಲ್ಲಿ ಯುವತಿಯರಿಬ್ಬರ ಅಸಭ್ಯ ವರ್ತನೆ; 33,000 ರೂ ದಂಡ​​
Follow us on

ಯುವತಿಯರಿಬ್ಬರ ಹೋಳಿ ಆಚರಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯರಿಬ್ಬರ ಅಸಭ್ಯ ವರ್ತನೆಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್​​ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ, ಇಬ್ಬರು ಯುವತಿಯರು ಮೋಹೆ ರಂಗ್ ಲಗಾ ದೇ ಹಾಡಿಗೆ ಸ್ಕೂಟರ್‌ನ ಹಿಂಭಾಗದಲ್ಲಿ ಕುಳಿತು ಪರಸ್ಪರ ಬಣ್ಣ ಹಚ್ಚುತ್ತಾ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಮೂವರ ವಿರುದ್ದ 33,000 ರೂ ದಂಡ​​ ವಿಧಿಸಿದ್ದಾರೆ.

ಪವಿತ್ರ ಸಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಹೋಲಿ ಹಬ್ಬವನ್ನು ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸುವ ಮೂಲಕ ಆಚರಿಸಿರುವುದನ್ನು ಕಂಡು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಇದಲ್ಲದೇ ಸ್ಕೂಟರ್​ ಓಡಿಸಿದ ಯುವಕ ಹಾಗೂ ಹಿಂಬದಿಯಲ್ಲಿ ಕುಳಿತು ರೀಲ್ಸ್​​ ಮಾಡುತ್ತಿದ್ದ ಯುವತಿಯರ ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಾಳಾದ ಹಾಲಿನ ಹಣ ವಾಪಸ್ ಪಡೆಯಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ 

ಮಾರ್ಚ್​​​ 25ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಕಂಡು “ಈ ಇಬ್ಬರು ಹುಡುಗಿಯರು ಇಂತಹ ಅಸಭ್ಯ ಕೆಲಸಗಳನ್ನು ಮಾಡಿ ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ ಎಂದು ಕಾಮೆಂಟ್​​ನಲ್ಲಿ ಬರೆದಿದ್ದಾರೆ. ಈ ವೀಡಿಯೋದಿಂದ ಮಕ್ಕಳಿಗೂ ತೊಂದರೆಯಾಗುವ ಅಪಾಯವಿದೆ ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು ಮೂವರ ವಿರುದ್ದ 33,000 ರೂ ದಂಡ​​ ವಿಧಿಸಿದ್ದಾರೆ. “ಮೇಲಿನ ದೂರಿನ ಆಧಾರದ ಮೇಲೆ,ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ” ಎಂದು ನೋಯ್ಡಾ ಪೊಲೀಸರು ಈ ಹಿಂದೆ ತಿಳಿದಿರುವ ಎಕ್ಸ್‌ನಲ್ಲಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ