ಬಹಳ ಬೇಗ ತಯಾರಿಸಬಹುದಾದ ಆಮ್ಲೆಟ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬ್ಯಾಚುಲರ್ ಸೇರಿದಂತೆ ಬಹುತೇಕ ಗೃಹಿಣಿಯರು ಸರಳವಾಗಿ ಥಟ್ ಅಂತ ಮಾಡುವ ರೆಸಿಪಿ ಅಂದ್ರೆ ಅದು ಆಮ್ಲೆಟ್. ಸಾಮಾನ್ಯವಾಗಿ ನೀವು ಸಾಕಷ್ಟು ಬಗೆಯ ಆಮ್ಲೆಟ್‌ಗಳನ್ನು ತಿಂದಿರುತ್ತೀರಿ, ಆದರೆ ಎಂದಾದರೂ 24 ಕ್ಯಾರೆಟ್ ಚಿನ್ನದ ಲೇಪಿತ ಆಮ್ಲೆಟ್ ತಿಂದಿದ್ದೀರಾ ? ಹೌದು ಇದೀಗ 24 ಕ್ಯಾರೆಟ್ ಚಿನ್ನ ಲೇಪಿತ ಆಮ್ಲೆಟ್ನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕಂಡರೆ ಒಂದು ಕ್ಷಣ ಶಾಕ್ ಆಗುವುದಂತೂ ಖಂಡಿತಾ. ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರು ಆಮ್ಲೆಟ್ ಮಾಡುವುದನ್ನು ಕಾಣಬಹುದು. ಆಮ್ಲೆಟ್ ತಯಾರಾದ ಬಳಿಕ ಅದರ ಮೇಲೆ ಚಿನ್ನ ಲೇಪನವನ್ನು ಹಾಕಿ ಸರ್ವ್ ಮಾಡಿರುವುದನ್ನು ಕಾಣಬಹುದು ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. Loading... ...
Published On - 12:37 pm, Sat, 26 October 24