Viral News: ಹೆಂಗಸರ ಒಳಉಡುಪು ಕದಿಯುತ್ತಿದ್ದ ಪತಿ; 30 ವರ್ಷಗಳ ಬಳಿಕ ಅಸಹ್ಯಕರ ಅಭ್ಯಾಸ ತಿಳಿದು ವಿಚ್ಛೇದನ ನೀಡಿದ ಪತ್ನಿ
30 ವರ್ಷಗಳ ದಾಂಪತ್ಯಕ್ಕೆ ಮಹಿಳೆಯೊಬ್ಬಳು ಅಂತ್ಯ ಹಾಡಿದ್ದಾಳೆ. ತನ್ನ ಗಂಡ ಹೆಂಗಸರ ಒಳಉಡುಪು ಕದಿಯುವ ಅಸಹ್ಯಕರ ಅಭ್ಯಾಸವನ್ನು ಹೊಂದಿದ್ದ ಎಂದು ತಿಳಿದ ಬಳಿಕ ಕಾಮುಕ ಪತಿಯನ್ನು ತೊರೆದಿದ್ದಾಳೆ. ತನ್ನ ಸ್ನೇಹಿತೆಯರು ಮತ್ತು ನೆರೆಹೊರೆಯವರ ಒಳಉಡುಪುಗಳನ್ನು ಕದಿಯುತ್ತಿದ್ದ ಈ ಸತ್ಯ ತಿಳಿದ ನಂತರ, ಆಘಾತಕ್ಕೊಳಗಾದ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹಲವು ಕಾರಣಗಳಿವೆ. ಮದುವೆಯಾದ ಪ್ರಾರಂಭದ 2ರಿಂದ 5ವರ್ಷಗಳ ನಡುವೆ ಹೆಚ್ಚಾಗಿ ವಿಚ್ಛೇದನಗಳು ನಡೆಯುತ್ತವೆ. ಆದರೆ ಇಲ್ಲೊಬ್ಬಳು ಬರೋಬ್ಬರೀ 30 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದಾಳೆ. ಹೌದು 30 ವರ್ಷಗಳ ಸುಖಿ ದಾಂಪತ್ಯ ನಡೆಸಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ತನ್ನ ಪತಿಯ ಅಸಹ್ಯಕರ ಅಭ್ಯಾಸ ತಿಳಿದ ನಂತರ, ಆ ಸಂಬಂಧಕ್ಕೆ ಅಂತ್ಯ ಹಾಡಿದ್ದಾಳೆ.
ದಿ ಮಿರರ್ ವರದಿಯ ಪ್ರಕಾರ, ಮಹಿಳೆಗೆ ತನ್ನ ಪತಿ ಹಲವು ವರ್ಷಗಳಿಂದ ತನ್ನ ಸ್ನೇಹಿತರು, ನೆರೆಹೊರೆಯವರು ಮತ್ತು ಸಂಬಂಧಿಕ ಮಹಿಳೆಯರು ಬಳಸಿದ ಒಳಉಡುಪುಗಳನ್ನು ಗುಪ್ತವಾಗಿ ಕದಿಯುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಅಚ್ಚರಿಯ ಸಂಗತಿ ಏನೆಂದರೆ, ಈ ಸಂಗತಿ 30 ವರ್ಷಗಳ ದಾಂಪತ್ಯ ಜೀವನದ ನಂತರ ಬಹಿರಂಗವಾಗಿದೆ. ಈ ಸತ್ಯ ತಿಳಿದ ಕ್ಷಣವೇ ಮಹಿಳೆ ಮಾನಸಿಕವಾಗಿ ಸಂಪೂರ್ಣ ಕುಸಿದಿದ್ದಾಳೆ.
ಸತ್ಯ ಹೊರಬಂದದ್ದು ಹೇಗೆ?
ಈ ಪ್ರಕರಣದ ಅತ್ಯಂತ ಆಘಾತಕಾರಿ ವಿಷಯವೆಂದರೆ ಪತಿ ಯಾವುದೇ ಅಪರಿಚಿತ ಮಹಿಳೆಯರನ್ನು ಗುರಿಯಾಗಿಸಿಕೊಂಡಿರಲಿಲ್ಲ, ಬದಲಾಗಿ ತನ್ನದೇ ಆದ ಸಾಮಾಜಿಕ ವಲಯದಲ್ಲಿರುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದ. ಅಪರಿಚಿತ ವ್ಯಕ್ತಿಯೊಬ್ಬರು ಈ ಘಟನೆಯನ್ನು ಬಹಿರಂಗಪಡಿಸಿದ ನಂತರ, ಪತ್ನಿ ನೇರವಾಗಿ ತನ್ನ ಗಂಡನನ್ನೇ ಪ್ರಶ್ನಿಸಿದ್ದಾಳೆ. ಆರಂಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಈ ಹೋಟೆಲ್ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು
ಮಹಿಳೆ ಹೇಳುವಂತೆ, “ನನ್ನ ಗಂಡನಿಗೆ ಮಹಿಳೆಯರ ಒಳಉಡುಪುಗಳ ಬಗ್ಗೆ ವಿಚಿತ್ರ ಆಸಕ್ತಿ ಇದೆ ಎಂಬುದು ಸ್ವಲ್ಪ ಮಟ್ಟಿಗೆ ನನಗೆ ಗೊತ್ತಿತ್ತು. ಆದರೆ ಅದು ಇಷ್ಟೊಂದು ಗಂಭೀರವಾಗಿದ್ದು, ಇತರರ ಗೌಪ್ಯತೆಯನ್ನು ಉಲ್ಲಂಘಿಸುವ ಮಟ್ಟಕ್ಕೆ ಹೋಗಿದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ.” ಈ ಬಗ್ಗೆ ಮಹಿಳೆ ಒಂದು ಕೌನ್ಸೆಲಿಂಗ್ ವೆಬ್‌ಸೈಟ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. “ಈಗ ನನಗೆ ನನ್ನ ಗಂಡನ ಬಗ್ಗೆ ನಾಚಿಕೆ ಮತ್ತು ಅಸಹ್ಯ ಎರಡೂ ಆಗುತ್ತಿದೆ. ಇದು ಕೇವಲ ವಿಚಿತ್ರ ಅಭ್ಯಾಸವಲ್ಲ, ನನ್ನ ನಂಬಿಕೆ, ಗೌರವ ಮತ್ತು ಭಾವನೆಗಳ ಮೇಲೆ ಮಾಡಿದ ಗಂಭೀರ ದ್ರೋಹ,” ಎಂದು ಆಕೆ ಬರೆದುಕೊಂಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Sun, 25 January 26
