AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಫ್ರಾನ್ಸ್‌ನ ಕ್ಯಾಪ್ ಡಿ'ಅಗ್ಡೆ ವಿಶ್ವದ ಏಕೈಕ ನಗ್ನ ನಗರ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರಿಗೆ ಬಟ್ಟೆ ಇಲ್ಲದೆ ತಿರುಗಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್ ಆಗಿ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಬಟ್ಟೆ ಧರಿಸಿದರೆ ದಂಡ ಬೀಳುವ ವಿಚಿತ್ರ ನಿಯಮವೂ ಇಲ್ಲಿದೆ. ಪ್ರವಾಸಿಗರು ಇಲ್ಲಿ ಯಾವುದೇ ಬಟ್ಟೆ ಧರಿಸದೇ ಕಡಲತೀರ, ರೆಸ್ಟೋರೆಂಟ್‌ಗಳು, ಸೂಪರ್‌ಮಾರ್ಕೆಟ್‌ಗಳಲ್ಲಿ ಓಡಾಡುವುದನ್ನು ಕಾಣಬಹುದು.

Cap d'Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ
Cap D'agde
ಅಕ್ಷತಾ ವರ್ಕಾಡಿ
|

Updated on:Jan 07, 2026 | 5:57 PM

Share

ಈ ಒಂದು ನಗರಕ್ಕೆ ನೀವು ಟ್ರಿಪ್​​ ಹೋಗಲು ಯೋಚಿಸುತ್ತಿದ್ದರೆ, ನೀವು ಬಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಉಟ್ಟ ಬಟ್ಟೆಯಲ್ಲಿ ನೀವಿಲ್ಲಿಗೆ ಹೋಗಿ ದಿನಗಟ್ಟಲೆ ತಂಗಿ ಬರಬಹುದು. ಯಾಕೆಂದ್ರೆ ಈ ನಗರದಲ್ಲಿ ಎಲ್ಲೆಂದರಲ್ಲಿ ನಿಮಗೆ ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯವಿದೆ. ಇಂತಹ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಸ್ಥಳವೇ ಫ್ರಾನ್ಸ್‌ನ ಕ್ಯಾಪ್ ಡಿ’ಅಗ್ಡೆ (Cap d’Agde) ನಗರ. ಇದು ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇದು ಒಂದು ಸುಂದರ ನಗರ. ಈ ನಗರ ವಿಶ್ವದ  ಏಕೈಕ ನಗ್ನ ನಗರವಾಗಿದ್ದು, ಬೆತ್ತಲೆಯಾಗಿ ತಮ್ಮ ಪ್ರವಾಸವನ್ನು ಆನಂದಿಸಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್​ ಎಂದೇ ಪ್ರಸಿದ್ಧವಾಗಿದೆ.

ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಈ ನಗರದಲ್ಲಿ ಜನರಿಗೆ ಬಟ್ಟೆ ಇಲ್ಲದೆ ಸುತ್ತಾಡುವ ಸ್ವಾತಂತ್ರ್ಯವಿದೆ. ಪ್ರವಾಸಿಗರು ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಬಟ್ಟೆ ಇಲ್ಲದೆಯೇ ತಿರುಗಾಡಬಹುದು. ಒಂದು ಅಂದಾಜಿನ ಪ್ರಕಾರ, ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಿಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ, ಅಮೆರಿಕ, ಡೆನ್ಮಾರ್ಕ್ ಮತ್ತು ಕೆನಡಾದವರು ಎಂದು ವರದಿಯಾಗಿದೆ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ: ಈ ತಾಣದಲ್ಲಿ ಬಟ್ಟೆ ಧರಿಸಲು ಅವಕಾಶವಿದೆ.ಆದರೆ ಇಲ್ಲಿ ಬಟ್ಟೆ ಧರಿಸುವುದಕ್ಕೂ ನೇಕೆಡ್‌ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ದುಡ್ಡು ಕಟ್ಟಿ ನೀವು ಇಲ್ಲಿ ಬಟ್ಟೆ ಧರಿಸಿ ಸುತ್ತಾಡಬಹುದು. ಆದರೆ ಬಟ್ಟೆ ಧರಿಸುವವರ ಸಂಖ್ಯೆ ಇಲ್ಲಿ ತೀರಾ ಕಡಿಮೆ. ಇದಲ್ಲದೇ ಇಲ್ಲಿ ಮತ್ತೊಂದು ನಿಯಮವಿದೆ. ಇಲ್ಲಿಗೆ ಬಂದ ಜೋಡಿ ಸಾವರ್ಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸಿದರೆ ಅಂದರೆ ಸುಮಾರು 12,860 ಪೌಂಡ್‌ ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 12 ಲಕ್ಷ ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ. ಇದಲ್ಲದೆ, ಈ ನಗರದಲ್ಲಿ ಫೋಟೋಗ್ರಫಿಗೂ ಕೂಡ ಅವಕಾಶವಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Wed, 7 January 26