Video: ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು
ಹಿರಿಜೀವಗಳು ಮನೆಯಲ್ಲಿ ತಮ್ಮ ಬದುಕಿನ ಅನುಭವಗಳನ್ನು ಮೊಮ್ಮಕ್ಕಳಿಗೆ ಹೇಳುತ್ತಾರೆ. ಇತ್ತ ಮೊಮ್ಮಗಳು ಕೂಡ ಹಿರಿಜೀವಗಳಿಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳನ್ನು ಕಲಿಸಿ ಕೊಡುವುದಿದೆ. ಈ ವಿಡಿಯೋ ಅಜ್ಜಿ ಮೊಮ್ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಗೆಂದು ಮೊಮ್ಮಗಳು ಕಲಿಸಿ ಕೊಡುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದೆ.

ಮನೆಯಲ್ಲಿ ಅಜ್ಜ ಅಜ್ಜಿಯಂದಿರಿಂದರೆ (grandparents) ಅವರಿಗೆ ಮೊಬೈಲ್ ಬಳಕೆ ಅಷ್ಟಾಗಿ ತಿಳಿದಿರುವುದಿಲ್ಲ. ಯಾರದರೂ ಕಾಲ್ ಮಾಡಿದರೆ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತು ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಮೊಮ್ಮಗಳು (granddaughter) ತನ್ನ ಅಜ್ಜಿಗೆ ಸ್ಮಾರ್ಟ್ ಪೋನ್‌ನಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆಂದು ಕಲಿಸಿ ಕೊಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.
ಚಟೋರಿ ಅಮ್ಮ (chatori _ amma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇದಾಗಿದೆ. ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅವಳು ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ” ಎಂಬ ಕ್ಲಿಪಿಂಗ್‌ನಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮೊಮ್ಮಗಳು ಓಜಸ್ವಿ ಚತುರ್ವೇದಿ ಸಹಾಯದಿಂದ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿರುವುದನ್ನು ತೋರಿಸಲಾಗಿದೆ. ಅಜ್ಜಿಯೂ ಮೊಮ್ಮಗಳು ನೀಡುವ ಪ್ರತಿ ಸೂಚನೆಯನ್ನು ಎಚ್ಚರಿಕೆಯಿಂದ ಅನುಸರಿಸಿ ಸ್ಕ್ರೀನ್ ಮೇಲೆ ಟ್ಯಾಪ್ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಅಜ್ಜಿಯ ಕೈಗಳು ನಡುಗುತ್ತಿದೆ. ಆದರೆ ಮೊಮ್ಮಗಳು ತನ್ನ ಪ್ರೀತಿಯ ಅಜ್ಜಿಗೆ ಮಾರ್ಗದರ್ಶನ ನೀಡುತ್ತಾ, ಏನು ಮತ್ತು ಯಾವಾಗ ಒತ್ತಬೇಕೆಂದು ಎಂದು ವಿವರಿಸುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಅಜ್ಜಿಯ ಮುಂದೆ ಪ್ರತ್ಯಕ್ಷನಾಗಿ ಸರ್ಪ್ರೈಸ್ ನೀಡಿದ ಮೊಮ್ಮಗ
ಈ ವಿಡಿಯೋ ಇದುವರೆಗೆ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ತಾಳ್ಮೆ ಎಲ್ಲರಲ್ಲೂ ಇರಲ್ಲ. ಇಂತಹ ಮೊಮ್ಮಗಳನ್ನು ಪಡೆದ ನೀವೇ ಧನ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಶುದ್ಧ ಪ್ರೀತಿ ಇದು ಎಂದಿದ್ದಾರೆ. ಇನ್ನೊಬ್ಬರು, ಅಜ್ಜಿ ಮೊಮ್ಮಗಳ ಬಾಂಧವ್ಯ ಸೊಗಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
