ಕ್ಲಿನಿಕ್​​ ಬಗ್ಗೆ ತಪ್ಪು ವಿಮರ್ಶೆ ನೀಡಿದ ಗೂಗಲ್ ಮ್ಯಾಪ್ ವಿರುದ್ಧ ಕೇಸು ದಾಖಲಿಸಿದ 60 ವೈದ್ಯರು

|

Updated on: Apr 20, 2024 | 11:51 AM

ತಪ್ಪು ಮಾಹಿತಿನಿಂದಾಗಿ ನಮ್ಮ ಕ್ಲಿನಿಕ್​​ಗೆ ಸಾಕಷ್ಟು ನಷ್ಟವಾಗಿದೆ. ಆದ್ದರಿಂದ 1.4 ಮಿಲಿಯನ್ ಯೇನ್ ಅಂದರೆ ಸುಮಾರು 7ಲಕ್ಷದ 50ಸಾವಿರ ರೂ ಮೊತ್ತ ಪರಿಹಾರ ನೀಡಬೇಕೆಂದು 60 ವೈದ್ಯರು ಗೂಗಲ್​​​ ವಿರುದ್ದ ನ್ಯಾಯಲಯದ ಮೊರೆ ಹೋಗಿದ್ದಾರೆ.

ಕ್ಲಿನಿಕ್​​ ಬಗ್ಗೆ ತಪ್ಪು ವಿಮರ್ಶೆ ನೀಡಿದ ಗೂಗಲ್ ಮ್ಯಾಪ್ ವಿರುದ್ಧ ಕೇಸು ದಾಖಲಿಸಿದ 60 ವೈದ್ಯರು
Follow us on

ಟೋಕಿಯೋ: ತಮ್ಮ ಕ್ಲಿನಿಕ್​​ ವಿರುದ್ಧ ಕೆಟ್ಟದಾಗಿ ರಿವೀವ್​​ ನೀಡಿದ ಗೂಗಲ್​​ ಮ್ಯಾಪ್​​ ವಿರುದ್ಧ 60 ವೈದ್ಯರು ಕೇಸು ದಾಖಲಿಸಿ ಕೋರ್ಟ್​​​ ಮೆಟ್ಟಿಲೇರಿದ್ದಾರೆ. ಈ ಘಟನೆ ಜಪಾನ್​​ನ ಟೋಕಿಯೋದಲ್ಲಿ ನಡೆದಿದೆ. ಈ ರೀತಿಯ ತಪ್ಪು ಮಾಹಿತಿನಿಂದಾಗಿ ನಮ್ಮ ಕ್ಲಿನಿಕ್​​ಗೆ ಸಾಕಷ್ಟು ನಷ್ಟವಾಗಿದೆ. ಆದ್ದರಿಂದ 1.4 ಮಿಲಿಯನ್ ಯೇನ್ ಅಂದರೆ ಸುಮಾರು 7ಲಕ್ಷದ 50ಸಾವಿರ ರೂ ಮೊತ್ತ ಪರಿಹಾರ ನೀಡಬೇಕೆಂದು 60 ವೈದ್ಯರು ಗೂಗಲ್​​​ ವಿರುದ್ದ ನ್ಯಾಯಲಯದ ಮೊರೆ ಹೋಗಿದ್ದಾರೆ.

ಗೂಗಲ್ ಸಂಸ್ಥೆ ವಿರುದ್ಧ ಜಪಾನ್‌ನ ವೈದ್ಯರು ಗುರುವಾರ ಕೇಸುದಾಖಲಿಸಿದ್ದು, ತಮ್ಮಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಗೌಪ್ಯತೆ ಬಹಿರಂಗಪಡಿಸಲು ಸಾಧ್ಯವಿಲ್ಲದ ಕಾರಣ ಈ ಹಾನಿಕಾರಕ ವಿಮರ್ಶೆಗಳಿಗೆ ಪ್ರತಿಕ್ರಿಯಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. “ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಜನರು ಅವಮಾನ ಅಥವಾ ಮೌಖಿಕ ನಿಂದನೆಯಾಗಿದ್ದರೂ ಅನಾಮಧೇಯವಾಗಿ ಏನು ಬೇಕಾದರೂ ಹೇಳಬಹುದು” ಎಂದು ವೈದ್ಯರಲ್ಲಿ ಒಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಎಂಥಾ ಕಾಲ ಬಂತು ನೋಡಿ, ಸಾಲ ಪಡೆಯಲು ಸತ್ತ ಹೆಣವನ್ನೇ ಬ್ಯಾಂಕಿಗೆ ತಂದ ಮಹಿಳೆ

ಜಪಾನ್‌ನ ಈ ಮಹತ್ವದ ಪ್ರಕರಣದಲ್ಲಿ, 60 ವೈದ್ಯರು ಟೋಕಿಯೊ ಜಿಲ್ಲಾ ನ್ಯಾಯಾಲಯದಲ್ಲಿ ಗೂಗಲ್ ವಿರುದ್ಧ ಮೊಕದ್ದಮೆ ಹೂಡುತ್ತಿದ್ದಾರೆ. ಇಂತಹ ಸುಳ್ಳು ವಿಮರ್ಶೆಗಳು ಇದು ವೈದ್ಯರಿಗೆ ಒತ್ತಡದ ಕೆಲಸದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ವೈದ್ಯರು ಕೋರ್ಟ್​​ನನಲ್ಲಿ ವಾದಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ