ಚಲನಚಿತ್ರ ನೋಡಿ 10ನೇ ತರಗತಿ ಪರೀಕ್ಷೆ ಬರೆದು ಪಾಸಾದ ಕೈದಿಗಳು

ದಾಸ್ವಿ ಚಲನಚಿತ್ರ ನೋಡಿ ಪ್ರಭಾವಿತಗೊಂಡು 10ನೇ ತರಗತಿ ಪರೀಕ್ಷೆ ಬರೆದು ಪಾಸಾದ ಕೈದಿಗಳು . ಈ ವಿಷಯವನ್ನು ತಿಳಿದ ನಾಯಕ ಅಭಿಷೇಕ್​ ಬಚ್ಚನ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ತುಷಾರ್ ಜಲೋಟ ಕೂಡ ಕೈದಿಗಳನ್ನು ಅಭಿನಂದಿಸಿದ್ದಾರೆ.

ಚಲನಚಿತ್ರ ನೋಡಿ 10ನೇ ತರಗತಿ ಪರೀಕ್ಷೆ ಬರೆದು ಪಾಸಾದ ಕೈದಿಗಳು
ದಸ್ವಿ ಚಲನಚಿತ್ರ
Updated By: ವಿವೇಕ ಬಿರಾದಾರ

Updated on: Jun 21, 2022 | 9:23 AM

ಬಂಗಾರದ ಮನುಷ್ಯ ಚಲನಚಿತ್ರ ನೋಡಿ ಜನರು ಪ್ರಭಾವಿತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದೇ ರೀತಿಯಾಗಿ ಈ ಪ್ರಸಂಗದಲ್ಲೂ ಕೂಡ ಚಲನಚಿತ್ರವನ್ನು (Cinema) ನೋಡಿ ಪ್ರಭಾವಿತರಾಗಿ 10ನೇ ತರಗತಿ (10th Standard) ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಅದು ಹೇಗೆ ಇಲ್ಲಿದೆ ಓದಿ. ಮಾರ್ಚ್ 2021ರಲ್ಲಿ ಆಗ್ರಾದ (Agra) ಸೆಂಟ್ರಲ್ ಜೈಲಿನಲ್ಲಿ (Jail) ಕೈದಿಗಳಿಗೆ  ದಸ್ವಿ (Dasvi) ಚಲನಚಿತ್ರವನ್ನು ತೋರಿಸಿದ್ದಾರೆ. ಚಿತ್ರದಲ್ಲಿ ರಾಜಕಾರಣಿಯೊಬ್ಬರು  ಜೈಲಿನಲ್ಲೇ ಇದ್ದುಕೊಂಡು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಶಿಷ್ಟ ಕಥಾ ಹಂದರ ಹೊಂದಿರುವ ಚಿತ್ರವನ್ನು ನೋಡಿ ಕೈದಿಗಳು ಪ್ರಭಾವಿತರಾಗಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್  ನಾಯಕರಾಗಿ ನಟಿಸಿದ್ದಾರೆ.

ಈ ಚಿತ್ರ ಎಷ್ಟರ ಮಟ್ಟಿಗೆ ಕೈದಿಗಳನ್ನು ಪ್ರಭಾವಿತಗೊಳಿಸಿತು ಎಂದರೆ ಅವರು 2022 ರ 10 ನೇ ತರಗತಿ ಪರೀಕ್ಷೆಯಲ್ಲಿ ಹಾಜರಾಗಲು ನಿರ್ಧರಿಸಿದರು. ಪರೀಕ್ಷೆಯಲ್ಲಿ ಹಾಜರಾದ ಒಟ್ಟು 12 ಕೈದಿಗಳ ಪೈಕಿ 9 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಈ ವಿಷಯವನ್ನು ತಿಳಿದ ನಾಯಕ ಅಭಿಷೇಕ್​ ಬಚ್ಚನ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ನಿಯಂತ್ರಣ ತಪ್ಪಿ ಬಿದ್ದ ದ್ವಿಚಕ್ರ ವಾಹನ, ಹಿಂಬದಿ ವಾಹನ ಸವಾರನ ಮೇಲೆ ಎಗರಾಡಿದ ಮಹಿಳೆ!

ಜೈಲಿನಲ್ಲಿ ಚಲನಚಿತ್ರ ಪ್ರದರ್ಶನದ ನಂತರ ಕೈದಿಗಳು 10 ನೇ ತರಗತಿ ಪರೀಕ್ಷೆಗೆ ಅಧ್ಯಯನ ಮಾಡಲು ನಿರ್ಧರಿಸಿದರು ಎಂದು ಆಗ್ರಾ ಕೇಂದ್ರ ಕಾರಾಗೃಹದ ಅಧೀಕ್ಷಕ ವಿ ಕೆ ಸಿಂಗ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ 9 ಕೈದಿಗಳಲ್ಲಿ 3 ಮಂದಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದರೆ. ಅವರಲ್ಲಿ 6 ಮಂದಿ  ಜೆಸ್ಟ್ ಪಾಸ್​ ಆಗಿದ್ದಾರೆ.

 ಇದನ್ನು ಓದಿ: ಬಾವಿಗೆ ಬಿದ್ದ ಮಹಿಳೆಯನ್ನು ಪೊಲೀಸ್​​ ಒಬ್ಬರು ರಕ್ಷಸಿದ ಸಾಹಸ ವಿಡಿಯೋ ವೈರಲ್​​; ಇಲ್ಲಿದೆ ವಿಡಿಯೋ

ಇವರಂತೆ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ 3 ಕೈದಿಗಳು ಜೆಸ್ಟ್ ಪಾಸ್​​ ಆಗಿದ್ದಾರೆ. ಈ ಎಲ್ಲ ಖೈದಿಗಳ ಪರೀಕ್ಷೆಯನ್ನು ಜೈಲಿನ ಆವರಣದಲ್ಲಿ ನಡೆಸಲಾಯಿತು. ಈ ಕುರಿತು ಅಭಿಷೇಕ್ ಬಚ್ಚನ್ ಟ್ವಿಟರ್‌ನಲ್ಲಿ ಈ ಬದಲಾವಣೆ ಕೈದಿಗಳ ಜೀವನದಲ್ಲಿ “ಸಕಾರಾತ್ಮಕ ಬದಲಾವಣೆ” ಎಂದು ಬರೆದುಕೊಂಡಿದ್ದಾರೆ . ಚಿತ್ರದ ನಿರ್ದೇಶಕ ತುಷಾರ್ ಜಲೋಟ ಕೂಡ ಕೈದಿಗಳನ್ನು ಅಭಿನಂದಿಸಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ