ಕಾಂಬೋಡಿಯಾದ ಮೀನುಗಾರರ ಬಲೆಗೆ ಬಿದ್ದ ವಿಶ್ವದ ಅತ್ಯಂತ ದೊಡ್ಡ ಮೀನು, ಫೋಟೋ ವೈರಲ್
ಕಾಂಬೋಡಿಯಾದ ಮೆಕಾಂಗ್ ನದಿ ತೀರದಲ್ಲಿ ವಾಸಿಸುವ ಮೀನುಗಾಗಾರರು ವಿಶ್ವದ ಅತಿದೊಡ್ಡ ಮೀನು ಹಿಡಿದಿದ್ದಾರೆ.
ಕಾಂಬೋಡಿಯಾದ (Cambodia) ಮೆಕಾಂಗ್ ನದಿ (Mekong River) ತೀರದಲ್ಲಿ ವಾಸಿಸುವ ಮೀನುಗಾರರು (Fishermen) ವಿಶ್ವದ ಅತಿದೊಡ್ಡ ಮೀನೊಂದನ್ನು (Fish) ಹಿಡಿದಿದ್ದಾರೆ. ಈ ಮೀನಿನ ತೂಕ ಬರೋಬ್ಬರಿ 300 ಕೆಜಿ ಇದೆ. ಈ ಮೀನನ್ನು ದಡಕ್ಕೆ ಎಳೆದು ತರಲು ಹೆನ್ನೆರಡು ಮಂದಿ ಹರಸಾಹಸ ಪಟ್ಟಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಂಶೋಧಕರೊಬ್ಬರು ಸಿಹಿನೀರಿನ ಅತ್ಯಂತ ದೊಡ್ಡ ಮೀನು ಇದು ಎಂದು ಹೇಳಿದ್ದಾರೆ. ಗೋಳಾಕರದ ಈ ಮೀನು ನಾಲ್ಕು ಮೀಟರ್ (13-ಅಡಿ) ಉದ್ದ ಇದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಇದರ ಚಲನವಲನ ಮತ್ತು ನಡವಳಿಕೆಯನ್ನು ಅಧ್ಯಯನ ಮಾಡಿದ ನಂತರ ನದಿಗೆ ಬಿಟ್ಟಿದ್ದಾರೆ.
ಇದನ್ನು ಓದಿ: ಚಲನಚಿತ್ರ ನೋಡಿ 10ನೇ ತರಗತಿ ಪರೀಕ್ಷೆ ಬರೆದು ಪಾಸಾದ ಕೈದಿಗಳು
ಈ ಕುರಿತು ಮಾತನಾಡಿದ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲಿನ “ಮಾನ್ಸ್ಟರ್ ಫಿಶ್” ಕಾರ್ಯಕ್ರಮದ ಮಾಜಿ ನಿರೂಪಕ ಮತ್ತು ಜೀವಶಾಸ್ತ್ರಜ್ಞ ಝೆಬ್ ಹೊಗನ್ ಇದು ತುಂಬಾ ರೋಮಾಂಚಕ ಸುದ್ದಿಯಾಗಿದೆ. ಏಕೆಂದರೆ ಇದು ವಿಶ್ವದ ಅತಿದೊಡ್ಡ ಮೀನು. ಈ ಮೀನು ಇಷ್ಟು ದೊಡ್ಡದಾಗಿದ್ದರೂ ಇನ್ನೂ ಆರೋಗ್ಯಕರವಾಗಿದೆ. ಈ ನದಿಯಲ್ಲಿ ಇಂತಹ ಬೃಹತ್ ಮೀನುಗಳು ವಾಸಿಸುತ್ತಿರಬಹುದು ಎಂದು ಹೇಳಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ