Viral News: ಚಿಕನ್‌ ಶವರ್ಮಾ ತಿಂದು 14 ವರ್ಷದ ಬಾಲಕಿ ಸಾವು; 13 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

|

Updated on: Sep 20, 2023 | 2:30 PM

ಚಿಕನ್ ಶವರ್ಮಾ ತಿಂದ ಕೆಲಹೊತ್ತಿನಲ್ಲಿ 14ರ ಹರೆಯದ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪ್ರತೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಫಟನೆ ನಡೆದಿದೆ. ಇದಲ್ಲದೇ ಇದೇ ರೆಸ್ಟೋರೆಂಟ್‌ನಲ್ಲಿ ಸೇವಿಸಿದ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Viral News: ಚಿಕನ್‌ ಶವರ್ಮಾ ತಿಂದು 14 ವರ್ಷದ ಬಾಲಕಿ ಸಾವು; 13 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
Chicken shawarm
Image Credit source: Pinterest
Follow us on

ತಮಿಳುನಾಡು: ಚಿಕನ್​​​ ಅಂದ್ರೇನೇ ಸಾಕು ಮಾಂಸಹಾರಿಗಳಿಗೆ ಬಾಯಲ್ಲಿ ನೀರೂರುವುದಂತೂ ಖಂಡಿತಾ. ಆದರೆ ಮಾಂಸಹಾರಿಗಳಿಗೆ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಚಿಕನ್ ಶವರ್ಮಾ(Chicken shawarma) ತಿಂದ ಕೆಲಹೊತ್ತಿನಲ್ಲಿ 14ರ ಹರೆಯದ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪ್ರತೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದಲ್ಲದೇ ಇದೇ ರೆಸ್ಟೋರೆಂಟ್‌ನಲ್ಲಿ ಸೇವಿಸಿದ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಶವರ್ಮಾ ತಿಂದಿದ್ದು, ತಿಂದ ಕೆಲ ಹೊತ್ತಿನಲ್ಲೇ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಬಾಲಕಿಯನ್ನು ತಮಿಳುನಾಡಿನ ನಾಮಕ್ಕಲ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿರುವುದು ವರದಿಯಾಗಿದೆ. ಬಾಲಕಿಯ ತಂದೆ  ರೆಸ್ಟೋರೆಂಟ್‌ನಿಂದ ಹಲವಾರು ಮಾಂಸಾಹಾರಿ ಆಹಾರವನ್ನು ಮನೆಗೆ ತಂದಿದ್ದು, ಬಾಲಕಿ ಚಿಕನ್‌ ಶವರ್ಮಾ ತಿಂದಿದ್ದಾಳೆ.

ಇದನ್ನೂ ಓದಿ: ಆಗ್ರಾ; ಸರ್ಕಾರಿ ಮಕ್ಕಳ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ; ತನಿಖೆಗೆ ಆದೇಶ

ಇದೇ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ತಕ್ಷಣ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಗ್ರಿಲ್ಡ್ ಚಿಕನ್, ತಂದೂರಿ ಚಿಕನ್ ಅಥವಾ ಷಾವರ್ಮಾ ತಿಂದ ನಂತರ ಅಸ್ವಸ್ಥಗೊಂಡಿರುವುದರಿಂದ ಅಲ್ಲಿ ಬಳಸಲಾಗಿದ್ದ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ  ಆಹಾರ ಸುರಕ್ಷತಾ ತಂಡ ತಿಳಿಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:23 pm, Wed, 20 September 23