Viral Video: ಕಾರಿನ ಬಾನೆಟ್ ಮೇಲೆ ಕುಳಿತು ಸ್ಪೈಡರ್ ಮ್ಯಾನ್ ಸವಾರಿ; ಬಂಧಿಸಿ ಜೈಲಿಗಟ್ಟಿದ ಪೊಲೀಸರು

|

Updated on: Jul 24, 2024 | 6:27 PM

ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಲು ಸ್ಪೈಡರ್ ಮ್ಯಾನ್ ವೇಷಧರಿಸಿ ಯುವಕನೊಬ್ಬ ಚಲಿಸುತ್ತಿರುವ ಕಾರಿನ ಬಾನೆಟ್‌ ಮೇಲೆ ಕುಳಿತುಕೊಂಡು ಸವಾರಿ ಮಾಡಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ದೆಹಲಿ ಪೊಲೀಸರು ತ್ವರಿತ ಕ್ರಮಕೈಗೊಂಡು ಭಾರೀ ದಂಡ ವಿಧಿಸಿದ್ದಾರೆ.

Viral Video: ಕಾರಿನ ಬಾನೆಟ್ ಮೇಲೆ ಕುಳಿತು ಸ್ಪೈಡರ್ ಮ್ಯಾನ್  ಸವಾರಿ; ಬಂಧಿಸಿ ಜೈಲಿಗಟ್ಟಿದ ಪೊಲೀಸರು
Follow us on

ದೆಹಲಿ: ಸ್ಪೈಡರ್ ಮ್ಯಾನ್ ವೇಷಭೂಷಣವನ್ನು ಧರಿಸಿದ ವ್ಯಕ್ತಿಯೊಬ್ಬ ಕಾರಿನ ಬಾನೆಟ್ ಮೇಲೆ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಚಾಲಕ ಮತ್ತುಸ್ಪೈಡರ್ ಮ್ಯಾನ್ ವೇಷಭೂಷಣವನ್ನು ಧರಿಸಿದ ವ್ಯಕ್ತಿಯ ಮೇಲೆ ಭಾರೀ ದಂಡ ವಿಧಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ಪೋಸ್ಟ್​​​ ಒಂದು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ದ್ವಾರಕಾ ರಸ್ತೆಗಳಲ್ಲಿ ಸ್ಪೈಡರ್ ಮ್ಯಾನ್ ವೇಷಧಾರಿ ವ್ಯಕ್ತಿಯೊಬ್ಬರು ಚಲಿಸುತ್ತಿರುವ ಕಾರಿನ ಬಾನೆಟ್‌ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೂರನ್ನು ಸ್ವೀಕರಿಸಿದ ದೆಹಲಿ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ಪೈಡರ್ ಮ್ಯಾನ್ ವೇಷಭೂಷಣದಲ್ಲಿರುವ ವ್ಯಕ್ತಿಯನ್ನು ಆದಿತ್ಯ (20) ಎಂದು ಗುರುತಿಸಲಾಗಿದ್ದು, ಆತ ನಜಾಫ್‌ಗಢದ ನಿವಾಸಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಸಿಎ ಪಾಸ್​​​; ವಿಡಿಯೋ ವೈರಲ್​​

ಕಾರಿನ ಚಾಲಕನನ್ನು ಮಹಾವೀರ್ ಎನ್‌ಕ್ಲೇವ್‌ನಲ್ಲಿ ನೆಲೆಸಿರುವ ಗೌರವ್ ಸಿಂಗ್ (19) ಎಂದು ಗುರುತಿಸಲಾಗಿದೆ. ವಾಹನದ ಮಾಲೀಕರು ಮತ್ತು ಚಾಲಕರು ಅಪಾಯಕಾರಿ ಚಾಲನೆ, ಮಾಲಿನ್ಯ ಪ್ರಮಾಣ ಪತ್ರವಿಲ್ಲದೆ ಚಾಲನೆ, ಮತ್ತು ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ ಕಾನೂನು ಕ್ರಮ ಜರುಗಿಸಲಾಗಿದ್ದು, ಗರಿಷ್ಠ 26,000 ರೂ. ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ANI ಪೋಸ್ಟ್​​​ ಒಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ