Video: ತಾಯಿ ಮುಂದೆಯೇ ಕುರಿ ಮರಿಯನ್ನು ದರದರನೇ ಎಳೆದೊಯ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ಅಂಗಳದಲ್ಲಿ ಆಟವಾಡುವ ಮಕ್ಕಳ ಮೇಲೆ, ಬೀದಿಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವವರ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ಸುದ್ದಿಗಳು ಅಗಾಗ್ಗೆ ಕೇಳಿ ಬರುತ್ತಲೇ ಇವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸುಮಾರು ನಾಲ್ಕರಿಂದ ಐದು ಬೀದಿನಾಯಿಗಳು ಜೊತೆಯಾಗಿ ಬಂದು ತಾಯಿಯ ಮುಂದೆಯೇ ಕುರಿ ಮರಿಯನ್ನು ದರದರನೇ ಎಳೆದೊಯ್ದಿದೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಂತೂ ಬೀದಿ ನಾಯಿಗಳ ಕಾಟ ತುಂಬಾನೇ ಹೆಚ್ಚಾಗಿದೆ. ಬೈಕ್‌ನಲ್ಲಿ ಹೋಗುವವರ ಮೇಲೆ, ಅಂಗಳದಲ್ಲಿ ಆಟವಾಡುತ್ತಿರುವ ಪುಟ್ಟ ಮಕ್ಕಳ ಮೇಲೆ, ಬೀದಿಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುವವರ ಮೇಲೆ ಈ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ರಾತ್ರಿ ಹೊತ್ತಿನಲ್ಲಿ ಬಂದತಹ ಸುಮಾರು 4 ರಿಂದ 5 ಬೀದಿನಾಯಿಗಳು ತಾಯಿಯ ಮುಂದೆಯೇ ಗೂಡಿನಲ್ಲಿದ್ದ ಕುರಿ ಮರಿಯನ್ನು ದರದರನೇ ಎಳೆದೊಯ್ದಿದೆ. ಬೀದಿ ನಾಯಿಗಳ ಈ ಡೆಡ್ಲಿ ಅಟ್ಯಾಕ್ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತ ವಿಡಿಯೋವನ್ನು Çobanlık hayatım ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸುಮಾರು ನಾಲ್ಕರಿಂದ ಐದು ಬೀದಿ ನಾಯಿಗಳು ಕುರಿ ಮರಿಯ ಮೇಲೆ ಅಟ್ಯಾಕ್ ಮಾಡುವ ದೃಶ್ಯವನ್ನು ಕಾಣಬಹುದು. ರಾತ್ರಿ ಹೊತ್ತಿನಲ್ಲಿ ಬೀದಿ ನಾಯಿಗಳು ಕುರಿಮರಿಯನ್ನು ಅಟ್ಟಾಡಿಸಿಕೊಂಡು ಬರುತ್ತೆ. ಭಯದಿಂದ ಕುರಿಮರಿ ತನ್ನ ತಾಯಿಯಿದ್ದ ಗೂಡಿನಲ್ಲಿ ಸೇರಿಕೊಳ್ಳುತ್ತದೆ. ಆದ್ರೂ ಬೊಗಳುತ್ತಾ ಬೊಗಳುತ್ತಾ ಗೂಡಿನೊಳಗೆ ಬಂದ ನಾಯಿಗಳು ಕುರಿಮರಿಯನ್ನು ದರದರನೇ ಎಳೆದೊಯ್ದಿದೆ. ತನ್ನ ಕಂದನನ್ನು ಕಾಪಾಡಲಾಗದೆ, ತಾಯಿ ಕುರಿಯು ಅಸಹಾಯಕವಾಗಿ ನಿಂತಿತ್ತು.
ಇದನ್ನೂ ಓದಿ: ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್ ಪೇಮೆಂಟ್ ಓಕೆ, ರೈಲಿನಲ್ಲಿ ಮಂಗಳಮುಖಿಯ ಡಿಜಿಟಲ್ ಭಿಕ್ಷಾಟನೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ (ಫೇಸ್ಬುಕ್ ಖಾತೆ)
ಜುಲೈ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ʼಅಬ್ಬಬ್ಬಾ ಕೆಲವೊಂದು ಬಾರಿ ಈ ಬೀದಿ ನಾಯಿಗಳು ತುಂಬಾನೇ ಅಪಾಯಕಾರಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೇ ಭಯಾನಕವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 am, Thu, 25 July 24