Viral: ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಮ್ ಪಟ್ಟಿಗೆ ಸೇರಿದ ಬೆಂಗಳೂರಿನ ʼಡೆತ್ ಬೈ ಚಾಕೋಲೇಟ್ʼ, ಮಂಗಳೂರಿನ ʼಗಡ್‌ಬಡ್ʼ
ಆನ್‌ಲೈನ್ ಟ್ರಾವೆಲ್ ಮತ್ತು ಫುಡ್ ಗೈಡ್ ʼಟೇಸ್ಟ್ ಅಟ್ಲಾಸ್ʼ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಆ ನಮ್ಮ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಫೇಮಸ್ ಗಡ್‌ಬಡ್ ಫ್ಲೇವರ್ ಐಸ್‌ಕ್ರೀಮ್ ಮತ್ತು ಬೆಂಗಳೂರಿನ ಕಾರ್ನರ್ ಹೌಸ್‌ನ ಡೆತ್ ಬೈ ಚಾಕೋಲೇಟ್ ಐಕಾನಿಕ್ ಐಸ್‌ಕ್ರೀಮ್‌ಗಳೆಂಬ ಸ್ಥಾನವನ್ನು ಪಡೆದುಕೊಂಡಿದೆ.
ಐಸ್‌ಕ್ರೀಮ್ ಎಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರು ಬಾಯಿ ಚಪ್ಪರಿಸಿಕೊಂಡು ಐಸ್‌ಕ್ರೀಮ್ ಸವಿಯುತ್ತಾರೆ. ನಮ್ಮಲ್ಲಿ ಅನೇಕಾರು ಬ್ರ್ಯಾಂಡ್‌ಗಳ ಐಸ್‌ಕ್ರೀಮ್‌ಗಳು ಲಭ್ಯವಿದೆ. ಆದ್ರೆ ಈ ಐಸ್‌ಕ್ರೀಮ್‌ಗಳು ರುಚಿಕರವಾಗಿರುವುದಿಲ್ಲ, ಅವುಗಳಲ್ಲಿ ಕೆಲವೇ ಕೆಲವು ಬ್ರ್ಯಾಂಡ್‌ಗಳು ಅತ್ಯುತ್ತಮ ರುಚಿಯ ಜೊತೆಗೆ ಹೆಚ್ಚಿನ ಖ್ಯಾತಿಯನ್ನು ಪಡೆದಿರುತ್ತವೆ. ನಮ್ಮ ಕರ್ನಾಟಕದಲ್ಲಿ ಬೆಸ್ಟ್ ಐಸ್‌ಕ್ರೀಮ್ ಎಂದಾಗ ಹೆಚ್ಚಿನವರಿಗೆ ನೆನಪಾಗುವುದು ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ʼಗಡ್‌ಬಡ್ʼ ಐಸ್‌ಕ್ರೀಮ್. ಈ ಐಸ್‌ಕ್ರೀಮ್ ಇದೀಗ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ ಬೆಂಗಳೂರಿನ ಕಾರ್ನರ್ ಹೌಸ್‌ನ ಜನಪ್ರಿಯ ಫ್ಲೇವರ್‌ಗಳಲ್ಲಿ ಒಂದಾದ ಡೈತ್ ಬೈ ಚಾಕೊಲೇಟ್ ಕೂಡಾ ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಆನ್‌ಲೈನ್ ಟ್ರಾವೆಲ್ ಮತ್ತು ಫುಡ್ ಗೈಡ್ ʼಟೇಸ್ಟ್ ಅಟ್ಲಾಸ್ʼ ವಿಶ್ವದ ಟಾಪ್ 100 ಐಕಾನಿಕ ಐಸ್‌ಕ್ರೀಮ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ನಮ್ಮ ಕರ್ನಾಟಕದ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಫೇಮಸ್ ಐಸ್‌ಕ್ರೀಮ್‌ಗಳಲ್ಲಿ ಒಂದಾದ ಗಡ್‌ಬಡ್ ಮತ್ತು ಬೆಂಗಳೂರಿನ ಕಾರ್ನರ್ ಹೌಸ್‌ನ ಡೆತ್ ಬೈ ಚಾಕೊಲೇಟ್ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಅಷ್ಟೇ ಅಲ್ಲದೇ ಮುಂಬೈನ ಕೆ ರುಸ್ತುಮ್ & ಕಂ. ನ ʼಮ್ಯಾಂಗೋ ಸ್ಯಾಂಡ್‌ವಿಚ್ʼ, ಮುಂಬೈನ ನ್ಯಾಚುರಲ್ ಐಸ್‌ಕ್ರೀಮ್ ಕಂಪೆನಿಯ ʼಟೆಂಡರ್ ಕೋಕನಟ್ʼ ಫ್ಲೇವರ್ ಮತ್ತು ಮುಂಬೈನ ಅಪ್ಸರಾ ಐಸ್‌ಕ್ರೀಮ್‌ನ ʼಗ್ವಾವʼ ಫ್ಲೇವರ್ ಐಸ್‌ಕ್ರೀಮ್ ಕೂಡಾ ವಿಶ್ವದ ಟಾಪ್ 100 ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಟಾಪ್ ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಭಾರತದ ಒಟ್ಟು ಐದು ಐಸ್‌ಕ್ರೀಮ್‌ಗಳು ಸ್ಥಾನವನ್ನು ಪಡೆದಿವೆ.
ಇದನ್ನೂ ಓದಿ: ತಾಯಿ ಮುಂದೆಯೇ ಕುರಿ ಮರಿಯನ್ನು ದರದರನೇ ಎಳೆದೊಯ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ:
View this post on Instagram
Tastealas ಈ ಕುರಿತ ಪೋಸ್ಟ್ ಒಂದನ್ನು ಅಧೀಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಶ್ವದ ಟಾಪ್ 100 ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ನಮ್ಮ ಭಾರತದ 5 ಐಸ್‌ಕ್ರೀಮ್‌ಗಳು ಸ್ಥಾನವನ್ನು ಪಡೆದುಕೊಂಡಿರುವುದು, ಇದು ಭಾರತೀಯರಾದ ನಮಗೆಲ್ಲರಿಗೂ ಹೆಮ್ಮೆ ತರುವ ಸಂಗತಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ