ವ್ಯಕ್ತಿಯ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿ; ಹೊರತೆಗೆಯಲು ವೈದ್ಯರ ಹರಸಾಹಸ

ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯನ್ನು ವೈದ್ಯರು ಪರೀಕ್ಷಿಸಿದ ವೇಳೆ ಆತನ ಗುದನಾಳದ ಒಳಗೆ 16 ಇಂಚು ಉದ್ದದ ಸೋರೆಕಾಯಿ ಇರುವುದು ಪತ್ತೆಯಾಗಿದೆ. ಎರಡು ಗಂಟೆಗಳ ಹರಸಾಹಸದ ಬಳಿಕ ಡಾ ನಂದಕಿಶೋರ್ ಜಾಧವ್ ನೇತೃತ್ವದ ಶಸ್ತ್ರಚಿಕಿತ್ಸಾ ತಂಡವು ರೋಗಿಯ ಗುದನಾಳದಿಂದ ಸೋರೆಕಾಯಿಯನ್ನು ಹೊರತೆಗೆದಿದ್ದಾರೆ.

ವ್ಯಕ್ತಿಯ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿ; ಹೊರತೆಗೆಯಲು ವೈದ್ಯರ ಹರಸಾಹಸ
ವ್ಯಕ್ತಿಯ ಗುದನಾಳ ಸೇರಿದ್ದ 16 ಇಂಚು ಉದ್ದದ ಸೋರೆಕಾಯಿ
Follow us
ಅಕ್ಷತಾ ವರ್ಕಾಡಿ
|

Updated on: Jul 25, 2024 | 5:35 PM

ಮಧ್ಯಪ್ರದೇಶ: ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಆತನ ಗುದನಾಳದ ಒಳಗೆ 16 ಇಂಚು ಉದ್ದದ ಸೋರೆಕಾಯಿ ಇರುವುದು ಪತ್ತೆಯಾಗಿದೆ. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರ ತಂಡ ಸೋರೆಕಾಯಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.

ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಜುಲೈ 21 ರಂದು ಶಸ್ತ್ರಚಿಕಿತ್ಸೆ ನಡೆದಿದ್ದು, ರೋಗಿ ಈಗ ಅಪಾಯದಿಂದ ಪಾರಾಗಿ, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ. ಡಾ ನಂದಕಿಶೋರ್ ಜಾತವ್ ನೇತೃತ್ವದ ಶಸ್ತ್ರಚಿಕಿತ್ಸಾ ತಂಡವು ರೋಗಿಯ ಗುದನಾಳದಿಂದ ಸೋರೆಕಾಯಿಯನ್ನು ಹೊರತೆಗೆದಿದ್ದಾರೆ. ಸೋರೆಕಾಯಿಯ ಈ ವ್ಯಕ್ತಿಯ ದೇಹವನ್ನು ಹೇಗೆ ಪ್ರವೇಶಿಸಿತು ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ; ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು

ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಸೋರೆಕಾಯಿಯು ರೋಗಿಯ ಆಂತರಿಕ ಪೊರೆಗಳಲ್ಲಿ ಛಿದ್ರವನ್ನು ಉಂಟುಮಾಡಿರುವುದಾಗಿ ಎಂದು ವೈದ್ಯರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈತ ಈ ರೀತಿ ಕೃತ್ಯಗೈದಿರಬಹುದು ಎಂದು ಅನುಮಾನ ಉಂಟಾಗಿದೆ. ಆದರೆ ರೋಗಿ ಸ್ವತಃ ಈ ಕೃತ್ಯಗೈದಿರುವುದೇ? ಅಥವಾ ಬಲವಂತವಾಗಿ ಬೇರೆ ಯಾರಾದರೂ ಈ ಕೃತ್ಯಗೈದಿರಬಹುದೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ