ಕ್ಯಾಲಿಫೋರ್ನಿಯಾದಲ್ಲಿದೆ ಮರ್ಡರ್ ಮ್ಯಾನ್ಷನ್, 60 ವರ್ಷಗಳಿಂದ ಖಾಲಿ ಇರುವ ಭವ್ಯ ಬಂಗಲೆ

|

Updated on: May 07, 2024 | 8:48 AM

ಹಿಟ್ಲರ್​ನ ಸಹಚರನ ವಿಲ್ಲಾದಂತೆಯೇ ಈ ಬಂಗಲೆ ಕೂಡ ಖಾಲಿ ಇದೆ. ಕ್ಯಾಲಿಫೋರ್ನಿಯಾದಲ್ಲಿರುವ 20 ಕೋಟಿ ರೂ. ಬೆಲೆ ಬಾಳುವ ಬಂಗಲೆಯಲ್ಲಿ ಉಳಿಯಲು ಯಾರೂ ಕೂಡ ಮನಸ್ಸು ಮಾಡದೆ 60 ವರ್ಷಗಳಿಂದ ಇದು ಖಾಲಿ ಇದೆ ಎನ್ನಲಾಗಿದೆ.

ಕ್ಯಾಲಿಫೋರ್ನಿಯಾದಲ್ಲಿದೆ ಮರ್ಡರ್ ಮ್ಯಾನ್ಷನ್, 60 ವರ್ಷಗಳಿಂದ ಖಾಲಿ ಇರುವ ಭವ್ಯ ಬಂಗಲೆ
ಬಂಗಲೆ
Follow us on

ಮತ್ತೆ ಮತ್ತೆ ನೋಡಬೇಕೆನಿಸುವ ಈ ಭವ್ಯ ಬಂಗಲೆ 60 ವರ್ಷಗಳಿಂದ ಖಾಲಿ ಇದೆಯಂತೆ. ಕ್ಯಾಲಿಫೋರ್ನಿಯಾದಲ್ಲಿರುವ ಈ ಬಂಗಲೆ ಮೌಲ್ಯ 20 ಕೋಟಿ ರೂ. ಈ ಬಂಗಲೆ ಹಲವು ಬಾರಿ ನವೀಕರಣಗಳನ್ನು ಕಂಡಿದೆ. ಕಡಿಮೆ ಬೆಲೆಗೆ ಈ ಬಂಗಲೆಯನ್ನು ಕೊಡುತ್ತೇವೆ ಎಂದರೂ ಯಾರೂ ತೆಗೆದುಕೊಳ್ಳಲು ಸಿದ್ಧರಿಲ್ಲ. ಹಲವು ಬಾರಿ ಈ ಬಂಗಲೆ ಮಾರಾಟವಾಗಿದೆ. ಡೈಲಿ ಮೇಲ್ ವರದಿ ಪ್ರಕಾರ, ಈ ಐಷಾರಾಮಿ ಬಂಗಲೆ ಲಾಸ್​ ಏಂಜಲೀಸ್​ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಶ್ರೀಮಂತರು ಮಾತ್ರ ಕೊಂಡುಕೊಳ್ಳಬಹುದಾದಂತಹ ಬಂಗಲೆ ಇದು.

9 ಬೆಡ್​ರೂಂಗಳಿರುವ ಈ ಬಂಗಲೆಗೆ ಮಾರುಕಟ್ಟೆಯಲ್ಲಿ 50 ಕೋಟಿ ರೂ. ಮೌಲ್ಯವಿದೆ. ಏಕೆಂದರೆ ಇದು 5 ಸಾವಿರ ಚದರಡಿ ವಿಸ್ತಾರವಾಗಿದೆ. ಆದರೆ 20 ಕೋಟಿ ರೂ.ಗೆ ಕೊಡುತ್ತೇನೆ ಎಂದರೂ ಯಾರೂ ತೆಗೆದುಕೊಳ್ಳಲು ತಯಾರಿಲ್ಲ.
ಈಗಿನ ಮಾಲೀಕ ಕೂಡ ಆ ಮನೆಯಲ್ಲಿ ಕೇವಲ ಒಂದು ದಿನ ಮಾತ್ರ ವಾಸವಿದ್ದ, ಈಗ ಅದನ್ನು ಮಾರಾಟ ಮಾಡಲು ಬಯಸಿದ್ದಾರೆ. ಕಾರಣವೂ ತುಂಬಾ ಭಯಾನಕವಾಗಿದೆ.

ಈ ಬಂಗಲೆಯ ಇತಿಹಾಸ1925ರಲ್ಲಿ ನಿರ್ಮಾಣವಾದ ಈ ಬಂಗಲೆಗೆ ಕೆಟ್ಟ ಇತಿಹಾಸವಿದೆ, ಇದರ ಮೊದಲ ಮಾಲೀಕ ಹೆರಾಲ್ಡ್​ ಹಾಗೂ ಫ್ಲಾರೆನ್ಸ್​ ಶುಮಾಕರ್​. ಆದರೆ ನಿರ್ಮಾಣವಾದ ಎರಡು ವರ್ಷಗಳ ನಂತರ ಇಬ್ಬರೂ ಸಾವನ್ನಪ್ಪಿದ್ದರು. ವರ್ಷಗಳ ಬಳಿಕ ಮ್ಯಾಗಜಿನ್ ಸಂಪಾದಕರಾದ ವೆಲ್ಬೋರ್ಡ್​ ಬೀಟರ್​ ಮತ್ತು ಅವರ ಮಗ ಡೊನಾಲ್ಡ್​ ಇಲ್ಲಿ ವಾಸವಾಗಿದ್ದರು.

ಮತ್ತಷ್ಟು ಓದಿ: ಹಿಟ್ಲರ್​ನ ಸಹಚರ ವಾಸವಿದ್ದ ಈ ವಿಲ್ಲಾವನ್ನು ಫ್ರೀ ಆಗಿ ಕೊಡ್ತಿದ್ದಾರಂತೆ ತಗೋತೀರಾ?

ಆದರೆ ಕೆಲವೇ ತಿಂಗಳುಗಳಲ್ಲಿ 21 ವರ್ಷದ ಡೊನಾಲ್ಡ್​ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಭಯಗೊಂಡು ವಲ್ಪೋರ್ಡ್​ ಮನೆ ಬಿಟ್ಟು ಹೋಗಿದ್ದರು. 1956 ರಲ್ಲಿ ಹೆರಾಲ್ಡ್ ಪೆರೆಲ್ಸನ್ ಎಂಬ ಡಾಕ್ಟರ್​ ತನ್ನ ಹೆಂಡತಿ ಹಾಗೂ ಮೂವರು ಮಕ್ಕಳೊಂದಿಗೆ ಇಲ್ಲಿ ಬಂದಿದ್ದರು.

ಬಂದ ಕೂಡಲೇ ಸಾಲದ ಸುಳಿಯಲ್ಲಿ ಮುಳುಗಿದರು, ಭಿನ್ನಾಭಿಪ್ರಾಯ ಉಂಟಾಗಿತ್ತು, ಡಿಸೆಂಬರ್ 1959 ರಲ್ಲಿ ವಿವಾದದ ನಂತರ, ಹೆರಾಲ್ಡ್ ತನ್ನ ಹೆಂಡತಿ ಲಿಲಿಯನ್ ಮಲಗಿದ್ದಾಗ ಸುತ್ತಿಗೆಯಿಂದ ದಾಳಿ ಮಾಡಿದ್ದ. ಪುತ್ರರ ಮೇಲೂ ಹಲ್ಲೆಗೆ ಯತ್ನಿಸಿದ್ದ.

ಪೊಲೀಸರು ಬರುವಷ್ಟರಲ್ಲಿ ಹೆರಾಲ್ಡ್ 31 ವಿಷಕಾರಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಒಂದು ವರ್ಷದ ನಂತರ, ಎಮಿಲಿ ಮತ್ತು ಜೂಲಿಯನ್ ಈ ಮನೆಯನ್ನು ಖರೀದಿಸಿದರು. ಆದರೆ ಜೂಲಿಯನ್ 1973 ರಲ್ಲಿ ನಿಧನರಾದರು ಮತ್ತು ಎಮಿಲಿ 1994 ರಲ್ಲಿ ನಿಧನರಾದರು. ಆಸ್ತಿಯನ್ನು ಮಗ ರೂಡಿಗೆ ವರ್ಗಾಯಿಸಲಾಯಿತು.
ಜನರು ಇದನ್ನು ಮರ್ಡರ್ ಮ್ಯಾನ್ಷನ್ ಎಂದೇ ಕರೆಯುತ್ತಾರೆ, ಆದರೆ ಇಲ್ಲಿ ವಾಸಿಸಲು ಯಾರೂ ಮನಸ್ಸು ಮಾಡುವುದಿಲ್ಲ.

 

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ