Viral Video: ಇದಂತೂ ಮಸ್ತ್ ಐಡಿಯಾ, ಮಗುವಿಗೆ ಔಷಧಿ ಕುಡಿಸಲು ಮನೆಯವರ ಹೊಸ ಟ್ರಿಕ್ ನೋಡಿ…
ಈ ಪುಟ್ಟ ಪುಟ್ಟ ಮಕ್ಕಳಿಗೆ ಪ್ರತಿನಿತ್ಯ ಊಟ ಮತ್ತು ಹುಷಾರು ತಪ್ಪಿದಾಗ ಔಷಧಿ ನೀಡುವುದೇ ಒಂದು ಸವಾಲಿನ ಕೆಲಸ. ಹಾಗಾಗಿ ಏನೇನೋ ಕಸರತ್ತು ಮಾಡಿ ಮಕ್ಕಳಿಗೆ ಔಷಧಿ ಕುಡಿಸುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಮನೆಯವರು ಮಗುವಿಗೆ ಜ್ಯೂಸ್ ಕೊಡಿಸುತ್ತೇವೆ ಎಂದು ಹೇಳಿ ಔಷಧಿ ಕುಡಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟಟ್ಟೆ ವೈರಲ್ ಆಗುತ್ತಿದೆ.
ಮಕ್ಕಳಿಗೆ ಊಟ ಮತ್ತು ಔಷಧಿ ನೀಡುವುದು ಎರಡೂ ಕಠಿಣ ಕೆಲಸ. ಹೀಗಾಗಿ ಪೋಷಕರು ಪುಟ್ಟ ಮಕ್ಕಳಿಗೆ ಔಷಧಿ ನೀಡುವ ವೇಳೆ ಕೆಲವು ಸರ್ಕಸ್ ಮಾಡಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ತಮ್ಮ ಮಗುವಿಗೆ ಔಷಧಿ ಕುಡಿಸಲು ಹೊಸ ಟ್ರಿಕ್ಸ್ ಒಂದನ್ನು ಕಂಡುಹಿಡಿದಿದ್ದು, ಜ್ಯೂಸ್ ಕುಡಿಸುವ ನೆಪದಲ್ಲಿ ಮಗುವಿಗೆ ಔಷಧಿ ಕುಡಿಸಿದ್ದಾರೆ. ಬಾಲ್ಯದ ಈ ಸ್ಕ್ಯಾಮ್ ಕುರಿತ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವೈರಲ್ ವಿಡಿಯೋವನ್ನು ಮಂಡ್ಯ ಹೈದನ್ ಟ್ರೋಲ್ (@Mandyahaidan_trolls) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಎಲ್ಲಾ ಮೋಸ, ಚೈಲ್ಡ್ ವುಡ್ ಸ್ಕ್ಯಾಮ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಮನೆಯವರು ಮಗುವಿಗೆ ಬಾ ನಿನಗೆ ಜ್ಯೂಸ್ ಕುಡಿಸುತ್ತೇವೆ ಅಂತ ಹೇಳಿ, ಮಗುವಿನ ಬಾಯಿ ಓಪನ್ ಮಾಡಿಸಿ ಜ್ಯೂಸ್ ಬದಲಿಗೆ ಔಷಧಿ ಕುಡಿಸಿದ್ದಾರೆ. ಮಕ್ಕಳಿಗೆ ಔಷಧಿ ಕುಡಿಸುವ ಈ ಹೊಸ ಟ್ರಿಕ್ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇದನ್ನೂ ಓದಿ: ಕೋಳಿಯೊಂದಿಗೆ ಯುವತಿಯ ಘನಘೋರ ಯುದ್ಧ , ವಿಡಿಯೋ ಸಖತ್ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಇದಂತೂ ತುಂಬಾನೇ ಒಳ್ಳೆಯ ಐಡಿಯಾ ಕಣ್ರೀ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ