AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೋಳಿಯೊಂದಿಗೆ ಯುವತಿಯ ಘನಘೋರ ಯುದ್ಧ , ವಿಡಿಯೋ ಸಖತ್​ ವೈರಲ್​ 

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಕೋಪದಲ್ಲಿ ಯುವತಿಯೊಬ್ಬಳು ಕೋಳಿಯೊಂದಿಗೆಯೇ ಜಗಳಕ್ಕಿಳಿದಿದ್ದಾಳೆ.  ಕೋಳಿ ಜಗಳದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಈ ಘನಘೋರ ಯುದ್ಧದಲ್ಲಿ ವಿಜಯಶಾಲಿ ಅದವರ್ಯಾರು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. 

Viral Video: ಕೋಳಿಯೊಂದಿಗೆ ಯುವತಿಯ ಘನಘೋರ ಯುದ್ಧ , ವಿಡಿಯೋ ಸಖತ್​ ವೈರಲ್​ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: May 06, 2024 | 11:41 AM

Share

ಮನುಷ್ಯನಿಗೆ ಕೋಪ ಹೇಗೆ, ಯಾವಾಗ  ಬರುತ್ತೆ ಅಂತಾನೇ ಹೇಳೋಕಾಗಲ್ಲ. ಕೆಲವರಂತೂ ಸಣ್ಣ ಸಣ್ಣ ವಿಚಾರಗಳಿಗೂ ಕೋಪಗೊಂಡು ಜಗಳವಾಡಿಬಿಡುತ್ತಾದೆ. ಅದರಲ್ಲೂ ವಿಪರೀತ ಕೋಪ ಬಂದಾಗ ನಾವು ಏನು ಮಾಡ್ತೀವಿ ಅನ್ನೋ ಅರಿವೇ ನಮಗಿರೊಲ್ಲ. ಹೀಗೆ ಕೋಪದಲ್ಲಾದ ಜಗಳಗಳು, ಹತ್ಯೆಗಳ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ.  ಇದೀಗ ಅದೇ ರೀತಿಯ ವಿಚಿತ್ರ ಘಟನೆಯೊಂದು ನಡೆದಿದ್ದು, ತನಗೆ ಕೋಳಿ ಕುಕ್ಕಿತೆಂದು ವಿಪರೀತ ಕೋಪಗೊಂಡ ಯುವತಿಯೊಬ್ಬಳು,  ಆ ಕೋಳಿಯೊಂದಿಗೆಯೇ  ಜಗಳಕ್ಕಿಳಿದಿದ್ದಾಳೆ. ಈ ಕೋಳಿ ಜಗಳದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಕುರಿತ ವಿಡಿಯೋವೊಂದನ್ನು @gharkekalesh ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ತನಗೆ ಕೋಳಿ ಕುಕ್ಕಿತೆಂದು ಕೋಪಗೊಂಡ ಯುವತಿಯೊಬ್ಬಳು ಆ ಕೋಳಿಯೊಂದಿಗೆಯೇ ಜಗಳಕ್ಕಿಳಿದ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ವೈರಲ್​​​​​​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿರುತ್ತಾಳೆ. ಅಲ್ಲೇ ಇದ್ದ ಕೋಳಿಯೊಂದು ಸುಖಾಸುಮ್ಮನೆ ಆಕೆಯ ಕಾಲಿಗೆ ಬಂದು ಕುಕ್ಕುತ್ತದೆ. ಇದರಿಂದ ಕೋಪಗೊಂಡ ಆಕೆ, ನನ್ನ ಕಾಲಿಗೆಯೇ ಕುಕ್ಕುತ್ತೀಯಾ, ಇರು  ನಿನ್ನ ಅಹಂ ಎಲ್ಲಾ ನಾನ್‌ ಇಳಿಸ್ತೀನಿ ಎಂದು ಕೋಳಿಗೆ ಒಂದು ಏಟು ಹೊಡೆದು, ಅದನ್ನು ಕೈಯಲ್ಲಿ ಹಿಡಿದು ಎತ್ತಿ ಬಿಸಾಡಿ, ಆ ಕೋಳಿಯೊಂದಿಗೆ ಘನಘೋರ ಯುದ್ಧವನ್ನೇ ಮಾಡುತ್ತಾಳೆ.

ಇದನ್ನೂ ಓದಿ: ಹಿಟ್ಲರ್​ನ ಸಹಚರ ವಾಸವಿದ್ದ ಈ ವಿಲ್ಲಾವನ್ನು ಫ್ರೀ ಆಗಿ ಕೊಡ್ತಿದ್ದಾರಂತೆ ತಗೋತೀರಾ?

ಮೇ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಯುದ್ಧದಲ್ಲಿ ಕೊನೆಗೆ ಗೆದ್ದವರ್ಯಾರು ʼಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಕೋಳಿ ಮತ್ತು ಯುವತಿಯ ನಡುವಿನ ಘನಘೋರ ಯುದ್ಧವನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ