Viral Video: ಅಂಡರ್‌ವೇರ್ ಸುಟ್ಟು ಪುರುಷರ ವಿಶಿಷ್ಟ ಪ್ರತಿಭಟನೆ; ವೈರಲ್ ಆಯ್ತು ವಿಡಿಯೋ

ಮಹಿಳೆಯರ ರಕ್ಷಣೆಗಾಗಿ, ಅವರ ಮೇಲಾಗುವಂತಹ ಶೋಷಣೆಗಳನ್ನು ತಡೆಗಟ್ಟಲು ಆಯೋಗ ಹಾಗೂ ಹಲವಾರು ಕಾನೂನುಗಳಿವೆ. ಆದರೆ ಪುರುಷರ ಮೇಲಾಗುವಂತಹ ದೌರ್ಜನ್ಯವನ್ನು, ಶೋಷಣೆಗಳನ್ನು ತಡೆಗಟ್ಟಲು ಯಾವುದೇ ಆಯೋಗವಿಲ್ಲ ಹಾಗೂ ಪುರುಷರ ಪರವಾಗಿ ಧ್ವನಿ ಎತ್ತಲು ಯಾವುದೇ ಕಾನೂನುಗಳಿಲ್ಲ ಎಂದು ಈ ಪುರುಷ ವಿರೋಧಿ ನೀತಿಗಳ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿರುವ NCMA ಇಂಡಿಯನ್ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಒಳ ಉಡುಪುಗಳನ್ನು ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದೆ. ಈ ಕುರಿತಾದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

Viral Video: ಅಂಡರ್‌ವೇರ್  ಸುಟ್ಟು ಪುರುಷರ ವಿಶಿಷ್ಟ  ಪ್ರತಿಭಟನೆ; ವೈರಲ್ ಆಯ್ತು ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: May 05, 2024 | 6:28 PM

ಸಮಾಜದಲ್ಲಿ ಮಹಿಳೆಯರ ಮೇಲಾಗುವಂತಹ ದೌರ್ಜನ್ಯ, ಶೋಷಣೆಯ ವಿರುದ್ಧ ಧ್ವನಿ ಎತ್ತಲು, ಮಹಿಳೆಯರ ರಕ್ಷಣೆಗಾಗಿ ಮಹಿಳಾ ಆಯೋಗ ಸೇರಿದಂತೆ ಅನೇಕ ಸಂಘ ಸಂಘ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ ಮಹಿಳೆಯರ ಪರವಾಗಿ ಹಲವಾರು ಕಾನೂನುಗಳಿವೆ. ಆದರೆ ಪುರುಷರ ಮೇಲಾಗುವಂತಹ ದೌರ್ಜನ್ಯಗಳನ್ನು, ಶೋಷಣೆಗಳನ್ನು ತಡೆಗಟ್ಟಲು ಯಾವುದೇ ಆಯೋಗವಾಗಲಿ ಅಥವಾ ಕಾನೂನು ಆಗಲಿ ಇಲ್ಲ. ಹೀಗಾಗಿ ಪುರುಷರಿಗೂ ಸಮಾನ ಕಾನೂನನ್ನು ಜಾರಿಗೊಳಿಸಬೇಕು, ಅವರಿಗಾಗಿಯೂ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಾ ಈ ಪುರುಷ ವಿರೋಧಿ ಕಾನೂನುಗಳ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿರುವ NCMA ಇಂಡಿಯನ್ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಒಳ ಉಡುಪುಗಳನ್ನು ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದೆ. ಈ ಕುರಿತಾದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಕುರಿತ ವಿಡಿಯೋವನ್ನು @NCMIndiaa ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸರ್ಕಾರದ ಪುರುಷ ವಿರೋಧಿ ನೀತಿಗಳಿಂದ ಹತಾಶೆಗೊಂಡ ತಮ್ಮ ಒಳಉಡುಪುಗಳನ್ನು ಅರ್ಧ ಸುಟ್ಟು ಅದನ್ನು ರಾಜಕಾರಣಿಗಳಿಗೆ ಕಳುಹಿಸಿಕೊಡುವ ಮೂಲಕ ಲಿಂಗ ಪಕ್ಷಪಾತ ಕಾನೂನುಗಳ ವಿರುದ್ಧ ಪುರುಷರ ಪ್ರತಿಭಟನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ; ವಿಡಿಯೋ ವೈರಲ್​​

ವೈರಲ್‌ ವಿಡಿಯೋದಲ್ಲಿ ಪುರುಷರು ತಮ್ಮ ಅಂಡರ್‌ವೇರ್‌ಗಳನ್ನು ಸುಟ್ಟು ಹಾಕುವ ಮೂಲಕ ಪುರುಷ ವಿರೋಧಿ ಕಾನೂನುಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಏಪ್ರಿಲ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅನೇಕರು ಇದು ಅಸಂಬದ್ಧ, ಪುರುಷರ ಆಯೋಗವನ್ನು ರಚಿಸುವ ಅಗತ್ಯವಿಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ