AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ; ವಿಡಿಯೋ ವೈರಲ್​​

ಇಲ್ಲೊಬ್ಬ ರೈತ ತಾನು ಸಾಕಿದ ಎಮ್ಮೆಗಳ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಸಾಕಿದ ಎಮ್ಮೆಗಳನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸದೇ ಅವುಗಳ ಬಗ್ಗೆಯೂ ಕಾಳಜಿ ತೋರಿಸಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Video Viral: ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ; ವಿಡಿಯೋ ವೈರಲ್​​
ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ
Follow us
ಅಕ್ಷತಾ ವರ್ಕಾಡಿ
|

Updated on: May 05, 2024 | 3:36 PM

ತಾಪಮಾನ ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. ಸುಡು ಬಿಸಿಲಿನಲ್ಲಿ ಜನ ಮನೆಯಿಂದ ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನವರು ಫ್ಯಾನ್, ಕೂಲರ್ ಅಥವಾ ಎಸಿಯಂತಹ ವಸ್ತುಗಳ ಸಹಾಯದಿಂದ ತಮ್ಮ ಮನೆಗಳಲ್ಲಿನ ಶಾಖದಿಂದ ಪರಿಹಾರವನ್ನು ಪಡೆಯುತ್ತಾರೆ. ಈ ಋತುವಿನಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಬಿಸಿಲಿನ ಬೇಗೆ ಎದುರಾಗಿದೆ. ಆದ್ದರಿಂದ ಇಲ್ಲೊಬ್ಬ ರೈತ ತಾನು ಸಾಕಿದ ಎಮ್ಮೆಗಳ ಕೊಟ್ಟಿಗೆಗೆ ಎಸಿ ಹಾಕಿಸಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಸಾಕಿದ ಎಮ್ಮೆಗಳನ್ನು ಕೇವಲ ಕೆಲಸಕ್ಕೆ ಮಾತ್ರ ಬಳಸದೇ ಅವುಗಳ ಬಗ್ಗೆಯೂ ಕಾಳಜಿ ತೋರಿಸಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಸಾಕಷ್ಟು ನೆಟ್ಟಿಗರು ಲೈಕ್ಸ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಒಂದು ಕೋಣೆಯಲ್ಲಿ ಮೂರು ಎಮ್ಮೆಗಳು ಮತ್ತು ಎರಡು ಕರುಗಳು ಇರುವುದನ್ನು ನೋಡಬಹುದು. ಅಚ್ಚರಿಯ ಸಂಗತಿಯೆಂದರೆ ಎಸಿಯ ಜೊತೆಗೆ ಲೈಟ್, ಫ್ಯಾನ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರೂ ಅಚ್ಚರಿಗೊಂಡಿದ್ದು, ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ; ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: Bullet 350cc Price: 1986ರಲ್ಲಿ ಬುಲೆಟ್ 350cc ಬೆಲೆ ಎಷ್ಟಿತ್ತು ಗೊತ್ತಾ?

manjeetmalik567 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 6 ದಿನಗಳಲ್ಲಿ 10ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್​​ ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು