Viral Post: ‘ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ’; ವೈರಲ್ ಆಯ್ತು ಸ್ವಿಗ್ಗಿ ಮೇಲೆ ಬರೆದಿರುವ ಅರ್ಥಗರ್ಭಿತ ಸಾಲು
ಸ್ವಿಗ್ಗಿ ಭಾರತದ ದೈತ್ಯ ಆಹಾರ ವಿತರಣಾ ಕಂಪೆನಿಗಳಲ್ಲಿ ಒಂದಾಗಿದ್ದು, ಈ ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಅಲ್ಲಿ ದಿನಕ್ಕೆ ಲಕ್ಷಾಂತರ ಜನರು ಫುಡ್ ಆರ್ಡರ್ ಮಾಡುತ್ತಿರುತ್ತಾರೆ. ಹೀಗೆ ತಮ್ಮ ಗ್ರಾಹಕರು ಯಾವುದೇ ಆಹಾರವನ್ನು ವೇಸ್ಟ್ ಮಾಡಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಸ್ವಿಗ್ಗಿ ವಿನೂತನ ಪ್ರಯತ್ನವೊಂದನ್ನು ಮಾಡಿದೆ. ಈ ಕುರಿತ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ವಿಗ್ಗಿಯ ಈ ನಡೆಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇಂದಿಗೂ ಒಂದು ಹೊತ್ತು ಊಟ ದೊರೆಯದೆ ಹಸಿವಿನಿಂದ ಬಳಲುತ್ತಿರುವ ಲಕ್ಷಾಂತರ ಮಂದಿ ಈ ಪ್ರಪಂಚದಲ್ಲಿದ್ದಾರೆ. ಹೀಗಿದ್ರೂ ಕೂಡಾ ಕೆಲವು ಜನರು ಅನ್ನವನ್ನು ವ್ಯರ್ಥ ಮಾಡ್ತಾರೆ. ಹೌದು ಇಂತಹ ಅದೆಷ್ಟೋ ಜನರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಎಷ್ಟು ಬೇಕೋ ಅಷ್ಟೇ ತಟ್ಟೆಗೆ ಅನ್ನವನ್ನು ಹಾಕಿ, ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ತೆಗೆದುಕೊಂಡು ನಂತರ ಅದನ್ನು ಬಿಸಾಡಬೇಡಿ, ಅನ್ನ ದೇವರಿಗೆ ಸಮಾನ ಎಂದು ಹೇಳಿದ್ರೂ ಕೂಡಾ, ಈ ಮಾತುಗಳಿಗೆ ಕ್ಯಾರೇ ಅನ್ನದೆ ಹಲವರು ಪ್ರತಿನಿತ್ಯ ತಿನ್ನೋ ಅನ್ನವನ್ನೇ ಎಸೆಯುತ್ತಿದ್ದಾರೆ. ಹೀಗೆ ಊಟ ಬಿಸಾಡುವವರಿಗೆ ತಿಳಿ ಹೇಳಲು ಸ್ವಿಗಿ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವಿಗ್ಗಿಯ ಈ ಉತ್ತಮ ನಡೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ.
ಈ ಕುರಿತ ಪೋಸ್ಟ್‌ಪೋಸ್ಟ್ ಒಂದನ್ನು ಇಸ್ಮಾಯಿಲ್ ಪಟೇಲ್(@Ismail Patel) ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸ್ವಿಗ್ಗಿ ಊಟದ ಪೊಟ್ಟಣದ ಮೇಲಿನ ಕನ್ನಡದ ಅರ್ಥ ಪೂರ್ಣ ಸಾಲು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ಪೋಸ್ಟ್ ಅಲ್ಲಿ ಸ್ವಿಗ್ಗಿ ತಾನು ಗ್ರಾಹಕರಿಗೆ ನೀಡುವಂತಹ ಆಹಾರ ಪೊಟ್ಟಣದ ಮೇಲೆ “ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ” ಎಂಬ ಅರ್ಥಗರ್ಭಿತ ವಾಕ್ಯವನ್ನು ಬರೆದಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ; ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು
5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 47 ಸಾವಿರ ಲೈಕ್ಸ್‌ಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಡವರಿಗೆ ಮಾತ್ರವಲ್ಲ ಪ್ರತಿಯೊಂದು ಜೀವರಾಶಿಗೂ ಅನ್ನ ಚಿನ್ನನೇʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮುತ್ತಿನಂತಹ ಮಾತುಗಳು ಎಂದು ಹೇಳುವ ಮೂಲಕ ಸ್ವಿಗ್ಗಿಯ ಈ ನಡೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




