ಹಿಟ್ಲರ್ನ ಸಹಚರ ವಾಸವಿದ್ದ ಈ ವಿಲ್ಲಾವನ್ನು ಫ್ರೀ ಆಗಿ ಕೊಡ್ತಿದ್ದಾರಂತೆ ತಗೋತೀರಾ?
ಹಿಟ್ಲರ್ನ ಸಹಚರ ವಾಸವಿದ್ದ ಐಷಾರಾಮಿ ವಿಲ್ಲಾವನ್ನು ಜರ್ಮನಿ ಸರ್ಕಾರ ಉಚಿತವಾಗಿ ನೀಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಜರ್ಮನಿಯಲ್ಲಿ 42 ಎಕರೆಯಲ್ಲಿ ನಿರ್ಮಿಸಿರುವ ಐಷಾರಾಮಿ ಮನೆಯನ್ನು ಸರ್ಕಾರ ಉಚಿತವಾಗಿ ಕೊಡ್ತೀನಿ ಅಂದರೂ ಜನರು ತೆಗೆದುಕೊಳ್ಳಲು ಮುಂದೆ ಬರ್ತಿಲ್ಲ.
ಪ್ರತಿಯೊಬ್ಬರಿಗೂ ಸ್ವಂತ ಮನೆಯೊಂದನ್ನು ಕಟ್ಟಿಸಬೇಕೆಂಬ ಕನಸಿರುತ್ತೆ, ಆದರೆ ಅದು ಸುಲಭದ ಮಾತಲ್ಲ, ಸೈಟ್ಗಳ ಬೆಲೆ ಗಗನಕ್ಕೇರಿದೆ. ಆದರೆ ಜರ್ಮನಿಯಲ್ಲಿ 42 ಎಕರೆಯಲ್ಲಿ ನಿರ್ಮಿಸಿರುವ ವಿಲ್ಲಾವನ್ನು ಸರ್ಕಾರ ಉಚಿತವಾಗಿ ಕೊಡ್ತೀನಿ ಅಂದರೂ ಜನರು ತೆಗೆದುಕೊಳ್ಳಲು ಮುಂದೆ ಬರ್ತಿಲ್ಲ. ಯಾರೂ ಇಲ್ಲಿ ಇರಲು ಮನಸ್ಸು ಮಾಡುತ್ತಿಲ್ಲ ಇದಕ್ಕೆ ಕಾರಣನೂ ಇದೆ. ಈ ಮೊದಲು ಅಡಾಲ್ಫ್ ಹಿಟ್ಲರ್(Adolf Hitler) ನ ಸಹಚರ ಇಲ್ಲಿ ವಾಸಿಸುತ್ತಿದ್ದಂತೆ ಇಲ್ಲಿ ಅನಾಚಾರ ನಡೆಸುತ್ತಿದ್ದ, ಎಷ್ಟೋ ಜನರನ್ನು ಹತ್ಯೆ ಕೂಡ ಮಾಡಿದ್ದ, ಹಾಗಾಗಿ ಈ ಮನೆಯೊಳಗೆ ಯಾರೂ ಕೂಡ ಇರಲು ಬಯಸುವುದಿಲ್ಲ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಬೊಗೆನ್ಸೆ ಸರೋವರದ ಬಳಿ ಕಾಡಿನಲ್ಲಿ ನಿರ್ಮಿಸಲಾದ ಈ ವಿಲ್ಲಾ ಖಾಲಿ ಇದೆ. ಮೊದಲು ಸರ್ಕಾರ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿತು, ಆದರೆ ಯಾರೂ ಮುಂದೆ ಬಂದಿಲ್ಲ.ಹಾಗಾಗಿ ರಾಜ್ಯ ಸರ್ಕಾರ ಇದನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಇದರಲ್ಲಿ ಯಾರೂ ವಾಸಿಸಲು ಬಯಸುವುದಿಲ್ಲ, ಇದನ್ನು ಕೆಡವಬೇಕಾಗುತ್ತದೆ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡಬೇಕಾಗುತ್ತದೆ ಅದಕ್ಕೆ 375 ಮಿಲಿಯನ್ ಡಾಲರ್ ವೆಚ್ಚವಾಗಲಿದೆ. ಸರ್ವಾಧಿಕಾರಿ ಹಿಟ್ಲರ್ನ ಸಹಚರ ಜೋಸೆಫ್ ಗೋಬೆಲ್ಸ್ ಇಲ್ಲಿ ವಾಸವಾಗಿದ್ದ, ಇದನ್ನು ಅಧರ್ಮದ ಗುಹೆ ಎಂದೇ ಕರೆಯಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ ಇದನ್ನು ಮಿಲಿಟರಿ ಆಸ್ಪತ್ರೆಯಾಗಿ ಬಳಸಲಾಯಿತು. ಅನೇಕ ವರ್ಷಗಳಿಂದ ಇದು ಸೋವಿಯತ್ ಒಕ್ಕೂಟದ ಒಡೆತನದಲ್ಲಿದೆ ಮತ್ತು ಈಗ ಬರ್ಲಿನ್ ಸರ್ಕಾರ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಮತ್ತಷ್ಟು ಓದಿ: ನಿದ್ದೆಗೆ ಜಾರಿದ ಸ್ಟೇಷನ್ ಮಾಸ್ಟರ್, ಗ್ರೀನ್ ಸಿಗ್ನಲ್ ಸಿಗದೆ ಅರ್ಧ ಗಂಟೆ ನಿಂತಿತ್ತು ರೈಲು
ಈ ವಿಲ್ಲಾವನ್ನು ಖರೀದಿಮಾಡಬಯದುವವರು ಯಾರಾದರೂ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ಸರ್ಕಾರದಿಂದ ಉಚಿತವಾಗಿ ನೀಡಲಿದ್ದೇವೆ, ಈ ಮಹಲ್ನ್ನು 1936 ರಲ್ಲಿ ಗೋಬೆಲ್ಸ್ ನಿರ್ಮಿಸಿದರು.
ನಂತರ, ಹಿಟ್ಲರನ ಮರಣದ ನಂತರ, ಅವನು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಮಹಲ್ ನಿರ್ವಹಣೆ ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಿದೆ. ಯಾರೂ ಅದನ್ನು ತೆಗೆದುಕೊಳ್ಳದಿದ್ದರೆ, ಅದನ್ನು ಕೆಡವುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಇದರಿಂದ ಸರ್ಕಾರಕ್ಕೆ ಸುಮಾರು 55 ಮಿಲಿಯನ್ ಡಾಲರ್ ನಷ್ಟವಾಗಲಿದೆ ಎನ್ನುವ ವಿಚಾರ ತಿಳಿದುಬಂದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ