ಹಾವು, ಮೊಸಳೆ ಇತ್ಯಾದಿ ಸರೀಸೃಪಗಳನ್ನು ಕಂಡರೆ ಹೆಚ್ಚಿನ ಜನರು ಭಯಪಡುತ್ತಾರೆ. ಅವುಗಳು ವಿಷಪೂರಿತವಾಗಿರುತ್ತವೆ, ಅಲ್ಲದೆ ಅವುಗಳು ಮನುಷ್ಯರನ್ನೇ ಕೊಲ್ಲುವಂತಹ ಅಪಾಯಕಾರಿ ಪರಭಕ್ಷಕ ಜೀವಿಗಳು ಹೌದು. ಆದ್ದರಿಂದ ಜನರು ಇಂತಹ ಅಪಾಯಕಾರಿ ಸರೀಸೃಪಗಳಿಂದ ಆದಷ್ಟು ದೂರವಿರುತ್ತಾರೆ. ಇನ್ನೂ ನದಿಯ ಬಳಿಗೆ ಹೋಗಿ ಮೊಸಳೆಯಂತಹ ಸರೀಸೃಪದ ದಾಳಿಗೆ ಮನುಷ್ಯರು ಹಾಗೂ ಇತರ ಪ್ರಾಣಿಗಳು ಬಲಿಯಾಗಿರುವ ಸುದ್ದಿಗಳನ್ನು ನಾವೆಲ್ಲರೂ ನೋಡಿರುತ್ತೇವೆ ಹಾಗೂ ಕೇಳಿರುತ್ತೇವೆ. ಹಾಗಾಗಿ ನೀರಿನ ಪ್ರದೇಶಕ್ಕೆ ಹೋಗುವಾಗ ಹೆಚ್ಚಿನ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಮೊಸಳೆಗಳ ವಾಸ್ತವ್ಯವಿರುವ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಿಕೊಳ್ಳುತ್ತಾರೆ. ಅದರೆ ಇಲ್ಲೊಂದು ಇದಕ್ಕೆ ವಿರುದ್ಧವಾದ ಘಟನೆ ನಡೆದಿದೆ. ಮೊಸಳೆಗಳ ರಾಶಿಯಲ್ಲಿಯೇ ತುಂಬಿರುವ ನದಿಯೊಂದರಲ್ಲಿ ವ್ಯಕ್ತಿಯೊಬ್ಬ ಮೋಟಾರು ದೋಣಿಯ ಮೂಲಕ ಪ್ರಯಾಣಿಸಿದ್ದಾನೆ. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಡ್ಲೀ ಟೆರ್ರಿಫೈಯಿಂಗ್ (@Oddly Trrefying) ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ ‘ನದಿಯ ಮೂಲಕ ಸಾಗುವ ಭಯಾನಕ ದೋಣಿ ಮಾರ್ಗವನ್ನು ವೀಕ್ಷಿಸಿ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ವೈರಲ್ ವೀಡಿಯೋದಲ್ಲಿ ಮೊಸಳೆಗಳ ಸಾಮ್ರಾಜ್ಯವೇ ಇರುವ ಭಯಾನಕ ನದಿಯಲ್ಲಿ ಮೋಟಾರು ದೋಣಿಯೊಂದು ಸಾಗುವುದನ್ನು ಕಾಣಬಹುದು.
Watch a terrifying boat passage through a river ? pic.twitter.com/21Iakmmxvt
— OddIy Terrifying (@OTerrifying) June 1, 2023
ಇದನ್ನೂ ಓದಿ:Viral Video: ಇದನ್ನು ಆಸ್ಕರ್ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ
ದೋಣಿಯು ನದಿಗೆ ಪ್ರವೇಶಿಸುತ್ತಿದ್ದಂತೆ ಒಂದಿಷ್ಟು ಮೊಸಳೆಗಳ ದಂಡು ಅಲ್ಲಿದ್ದವು, ಅವುಗಳು ದೋಣಿಯ ಮೋಟಾರಿನ ಶಬ್ಧಕ್ಕೆ ಭಯಪಟ್ಟು ವೇಗವಾಗಿ ಹೋಗಿ ನದಿಯ ದಡಕ್ಕೆ ಸೇರಿಕೊಳ್ಳುತ್ತವೆ. ಹೀಗೆ ಮುಂದೆ ಮುಂದೆ ದೋಣಿ ಸಾಗಿದಂತೆ ನದಿಯಲ್ಲಿ ಬರಿ ಮೊಸಳೆಗಳೇ ತುಂಬಿದ್ದವು. ಅಬ್ಬಬ್ಬಾ ನದಿಯಲ್ಲಿ ನೀರಿಗಿಂತ ಹೆಚ್ಚಾಗಿ ಮೊಸಳೆಗಳೇ ಇರುವ ಭಯಾನಕ ದೃಶ್ಯಾವಳಿ ನೋಡುಗರಲ್ಲಿ ನಡುಕ ಹುಟ್ಟಿಸಿದೆ.
ಈ ವೈರಲ್ ವೀಡಿಯೋ ಇಲ್ಲಿಯವರೆಗೆ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 11.7 ಸಾವಿರ ಲೈಕ್ಸ್ ಗಳನ್ನು ಪಡೆದಿದೆ. ಮಾತ್ರವಲ್ಲದೆ ಅನೇಕರು ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಮೊಸಳೆಗಳು ದೋಣಿಗೆ ಹೆದರುತ್ತಿರುವಂತೆ ತೋರುತ್ತದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ಯಾವ ಸ್ಥಳ, ಇಷ್ಟೊಂದು ಭಯಾನಕವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇದು ತುಂಬಾ ಭಯಾನಕವಾಗಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:18 pm, Fri, 2 June 23