Viral News: ಒಂದಲ್ಲಾ ಎರಡಲ್ಲಾ 27 ಪುರುಷರನ್ನು ಮದುವೆಯಾದ ಖರ್ತಾನಾಕ್ ಯುವತಿ; ಕಡೆಗೂ ಸಿಕ್ಕಿ ಬಿದ್ದದ್ದು ಹೇಗೆ?

|

Updated on: Jul 18, 2023 | 2:25 PM

ಒಂದಲ್ಲಾ ಎರಡಲ್ಲಾ 27 ಪುರುಷರನ್ನು ಮದುವೆಯಾಗಿ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿರುವ ಪ್ರಕರಣ ಕಾಶ್ಮೀರದ ಶ್ರೀನಗರದಿಂದ ಬೆಳಕಿಗೆ ಬಂದಿದೆ.

Viral News: ಒಂದಲ್ಲಾ ಎರಡಲ್ಲಾ 27 ಪುರುಷರನ್ನು ಮದುವೆಯಾದ ಖರ್ತಾನಾಕ್ ಯುವತಿ; ಕಡೆಗೂ ಸಿಕ್ಕಿ ಬಿದ್ದದ್ದು ಹೇಗೆ?
27 ಪುರುಷರನ್ನು ಮದುವೆಯಾದ ಯುವತಿ
Image Credit source: Housing
Follow us on

ಒಂದಲ್ಲಾ ಎರಡಲ್ಲಾ 27 ಪುರುಷರನ್ನು ಮದುವೆಯಾಗಿ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿರುವ ಪ್ರಕರಣ ಕಾಶ್ಮೀರದ ಶ್ರೀನಗರದಿಂದ ಬೆಳಕಿಗೆ ಬಂದಿದೆ. ಬುದ್ಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶ್ರೀನಗರ ಲಾಲ್ ಚೌಕ್‌ನ ಪ್ರೆಸ್ ಕಾಲೋನಿಯ ಮಹಿಳೆ ಪ್ರತೀ ಬಾರೀ ಒಂದೊಂದು ಪುರುಷರನ್ನು ಮದುವೆಯಾಗಿ ಕೆಲವು ದಿನಗಳ ವರೆಗೆ ಅವರೊಂದಿಗೆ ಸಂಸಾರ ನಡೆಸಿ, ತವರು ಮನೆಗೆ ಹೋಗಿ ಬರುವುದಾಗಿ ಹೇಳಿ, ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದ ಚಲಾಕಿ ಮಹಿಳೆ ಕಡೆಗೂ ಸಿಕ್ಕಿ ಬಿದ್ದಿದ್ದಾಳೆ.

ಮಹಿಳೆ ಜಮ್ಮುವಿನ ರಾಜೌರಿ ನಿವಾಸಿಯಾಗಿರುವ ಈಕೆ ಇಂತಹ ಪ್ಯಾನ್​​ ಮಾಡಲು ಗ್ಯಾಂಗ್ ಒಂದನ್ನು ನೇಮಿಸಿಕೊಂಡಿದ್ದು, ಈಗಾಗಲೇ ಲಕ್ಷಾಂತರ ದುಡ್ಡು ವಂಚಿಸಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಗನನ್ನು ಮಹಿಳೆಯೊಂದಿಗೆ ಮದುವೆ ಮಾಡುವ ನೆಪದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಮ್ಯಾಚ್ ಮೇಕರ್ ತನ್ನಿಂದ ಸಂಗ್ರಹಿಸಿದ್ದಾನೆ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಮೈಲ್ಯಾಂಗ್​ ಆಡಿಯೋ ಸ್ಟೋರಿ ಚಾಲೇಂಜ್​ನಲ್ಲಿ ಪಾಲ್ಗೊಳ್ಳಿ ರೂ.10000 ಬಹುಮಾನ ಗೆಲ್ಲಿ

ಮಹಿಳೆ ಮತ್ತು ಆಕೆಯ ಪರಿಚಿತ ಸಹಚರರೆಲ್ಲರೂ ಸುಳ್ಳು ವಿಳಾಸಗಳ ದಾಖಲೆ ಮತ್ತು ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಸಂತ್ರಸ್ತ ಮೊಹಮ್ಮದ್ ಅಲ್ತಾಫ್ ಹೇಳಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಕೀಲ ಜಹೂರ್ ಅಹ್ಮದ್ ಅಂದ್ರಾಬಿ ಅವರು ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಮತ್ತು 120 ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: