Viral: ಇದೆಲ್ಲ ಬೇಕಿತ್ತಾ; ಬೋನಿನಲ್ಲಿದ್ದ ಸಿಂಹದ ಜೊತೆ ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ

ಜನರು ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದಂತಹ ಘಟನೆಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಬೆಚ್ಚಿ ಬೀಳಿಸುವಂತಹ ದೃಶ್ಯ ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ಬೋನಿನಲ್ಲಿದ್ದ ಸಿಂಹದೊಂದಿಗೆ ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದ್ದಾನೆ. ಹೌದು ಆತ ಬೋನಿನ ಪಕ್ಕ ಕೈಯನ್ನಿಟ್ಟು ಹುಚ್ಚಾಟ ಮೆರೆದಿದ್ದು, ಆ ವೇಳೆ ಕೋಪಗೊಂಡ ಸಿಂಹ ಆತನ ಕೈಗೆಯೇ ಪರಚಿದೆ. ಈ ದೃಶ್ಯವನ್ನು ಕಂಡು ಅಧಿಕಪ್ರಸಂಗತನ ಮಾಡುವವರಿಗೆ ಹೀಗೆಯೇ ಆಗ್ಬೇಕು ಎಂದು ಮಾತನಾಡಿಕೊಂಡಿದ್ದಾರೆ.

Viral: ಇದೆಲ್ಲ ಬೇಕಿತ್ತಾ; ಬೋನಿನಲ್ಲಿದ್ದ ಸಿಂಹದ ಜೊತೆ ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ
ವೈರಲ್‌ ವಿಡಿಯೋ
Image Credit source: Social Media

Updated on: May 24, 2025 | 2:01 PM

ಕಾಡಿನ ರಾಜ ಸಿಂಹ (lion) ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಈ ವನ ರಾಜ ಕಣ್ಣಿಗೆ ಕಾಣಿಸಿದ್ರೆ ಮಾತ್ರವಲ್ಲ ಇದರ ಘರ್ಜನೆ ಕೇಳಿದ್ರೂ ಒಂದು ಬಾರಿ ಮೈಯೆಲ್ಲಾ ನಡುಗಿ ಹೋಗುತ್ತದೆ. ಹಾಗಾಗಿ ಬೋನಿನ ಒಳಗಿದ್ರೂ ಕೂಡ ಸಿಂಹದೊಂದಿಗೆ ಹುಚ್ಚಾಟ ಆಡುವ ಸಾಹಸಕ್ಕೆ ಯಾರೂ ಕೈ ಹಾಕೋಲ್ಲ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಭಂಡ ಧೈರ್ಯದಿಂದ ಬೋನಿನೊಳಗಿದ್ದ ಸಿಂಹದೊಂದಿಗೆ ಹುಚ್ಚಾಟ ಆಡಲು ಹೋಗಿದ್ದು, ಹೀಗೆ ಅಧಿಕಪ್ರಸಂಗತನ ಮಾಡಿ ಕೊನೆಯಲ್ಲಿ ಫಜೀತಿಗೆ ಸಿಳುಕಿದ್ದಾನೆ. ಈ ಕುರಿತ ವಿಡಿಯೋವೊಂದು (Viral Video) ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ದೃಶ್ಯವನ್ನು ಕಂಡು ಈತನ ಹುಚ್ಚಾಟಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ಬೋನಿನಲ್ಲಿದ್ದ ಸಿಂಹದ ಜೊತೆ ಹುಚ್ಚಾಟ ಆಡಲು ಹೋಗಿ ಫಜೀತಿಗೆ ಸಿಲುಕಿದ ವ್ಯಕ್ತಿ:

ಸಿಂಹ ಬೋನಿನಲ್ಲಿದ್ದರೂ ಕೂಡಾ ಅದರ ಹತ್ತಿರ ಹೋಗಲು ಹೆದಿಕೊಳ್ಳುವರು ಹೆಚ್ಚು. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಬೋನಿನೊಳಗಿದ್ದ ಸಿಂಹದೊಂದಿಗೆ ಹುಚ್ಚಾಟ ಆಡಲು ಮುಂದಾಗಿದ್ದಾನೆ. ಹೌದು ಆತ ಬೋನಿನ ಹತ್ತಿರ ತನ್ನ ಕೈಯನ್ನು ಹಿಡಿದು ಮಂಗಾಟವಾಗಿದ್ದು, ಕೋಪಗೊಂಡ ಸಿಂಹ ಒಮ್ಮೆಲೆ ಆತನ ಕೈ ಮೇಲೆ ಪರಚಿದೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಪಾಕಿಸ್ತಾನದ ಜೊತೆಗಿನ ಗಲಾಟೆಯಿಂದ ಮೈಸೂರು ಪಾಕ್ ಹೆಸರೂ ಬದಲು!
ಮಗಳಿಗೆ ನೋವಾದ್ರೆ ತಂದೆಯ ಕಣ್ಣಲ್ಲಿ ನೀರು ಬರುತ್ತೆ, ಈ ವಿಡಿಯೋ ನೋಡಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ

ಈ ದೃಶ್ಯವನ್ನು aladdenn ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬೋನಿನೊಳಗಿದ್ದ ಸಿಂಹದೊಂದಿಗೆ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆಯುವಂತಹ ದೃಶ್ಯವನ್ನು ಕಾಣಬಹುದು. ಈತನ ಹುಚ್ಚಾಟವನ್ನು ಕಂಡು ಕೋಪಗೊಂಡ ಸಿಂಹ ಒಮ್ಮೆಲೆ ಆತನ ಕೈ ಮೇಲೆ ಪರಚಿದೆ. ಸಿಂಹ ಪರಚಿತ ಏಟಿಗೆ ನೋವು ತಾಳಲಾರದೆ ಆತ ಅಲ್ಲಿಂದ ಓಡಿ ಹೋಗಿದ್ದಾನೆ.

ಇದನ್ನೂ ಓದಿ: ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ

 ಮೇ 22 ರಂದು ಶೇರ್‌ ಮಾಡಲಾದ ಈ ವಿಡಿಯೋ 5.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತನಿಗೆ ತಕ್ಕ ಶಾಸ್ತಿಯಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮತ್ತೆ ಕಾಡಿನ ರಾಜನ ಜೊತೆ ಹುಚ್ಚಾಟ ಆಡೋಕೆ ಹೋದ್ರೆ ಅದು ಸುಮ್ನೆ ಬಿಡುತ್ತಾʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಕ್ಕಿಂತ ಹೆಚ್ಚು ಗಾಯ ಆಗಿಲ್ಲಲ್ವಾ ಅದೇ ಪುಣ್ಯʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ