Viral News: ಯಮುನಾ ನದಿಯಿಂದ ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು

ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್​​ನ್ನು ಹಿಡಿದು ತರುತ್ತಿದ್ದ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಪೋಲಿಸರು ಮೀನುಗಾರನನ್ನು ಬಂಧಿಸಿದ್ದಾರೆ.

Viral News: ಯಮುನಾ ನದಿಯಿಂದ ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು
ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು

Updated on: Jul 25, 2023 | 1:20 PM

ಉತ್ತರಪ್ರದೇಶ: ಯಮುನಾ ನದಿಯಲ್ಲಿ ಮೀನುಗಾರರ ಬಲೆಯಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದ ಡಾಲ್ಫಿನ್ (Dolphin) ಹಿಡಿದು ತಂದು ಅಡುಗೆ ಮಾಡಿ ತಿಂದ ನಾಲ್ವರು ಮೀನುಗಾರರ ವಿರುದ್ಧ ಕೇಸು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್​​ನ್ನು ಹಿಡಿದು ತರುತ್ತಿದ್ದ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಪೋಲಿಸರು ಮೀನುಗಾರನನ್ನು ಬಂಧಿಸಿದ್ದಾರೆ. ಸೋಮವಾರ ಚೈಲ್ ಅರಣ್ಯ ರಕ್ಷಕ ರವೀಂದ್ರ ಕುಮಾರ್ ನೀಡಿದ ದೂರಿನ ಪ್ರಕಾರ, ನಸೀರ್‌ಪುರ ಗ್ರಾಮದ ಮೀನುಗಾರರು ಜುಲೈ 22 ರಂದು ಬೆಳಿಗ್ಗೆ ಯಮುನಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಯಲ್ಲಿ ಡಾಲ್ಫಿನ್ ಸಿಕ್ಕಿಬಿದ್ದಿದೆ. ನಂತರ ತಮ್ಮ ಭುಜದ ಮೇಲೆ ಇಟ್ಟುಕೊಂಡು ಮನೆಗೆ ಸಾಗಿಸಿ, ಬೇಯಿಸಿ ತಿಂದಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪಿಪ್ರಿ ಠಾಣಾಧಿಕಾರಿ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!

ಡಾಲ್ಫಿನ್ ಅನ್ನು ಹೆಗಲ ಮೇಲೆ ಇಟ್ಟು ಮನೆಗೆ ಕೊಂಡೊಯ್ಯುತ್ತಿರುವುದನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ದೂರಿನ ಮೇರೆಗೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗಾಗಲೇ ರಂಜಿತ್​​​ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳು ನಾಪತ್ತೆಯಾಗಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us