Viral Video: ಕೋಳಿಮೊಟ್ಟೆಗಳಿಗೆ ಕಾವು ಕೊಟ್ಟದ್ದಲ್ಲದೇ ಮರಿಗಳನ್ನೂ ಪೋಷಿಸುತ್ತಿರುವ ಬೆಕ್ಕಮ್ಮ

|

Updated on: Aug 22, 2023 | 1:51 PM

Cat Lover : ಮೊಟ್ಟೆಗಳನ್ನು ದತ್ತು ಪಡೆದು ಕಾವು ಕೊಟ್ಟು ಮರಿಗಳನ್ನು ಮಾಡಿ ಪೋಷಿಸುತ್ತಿರುವ ಈ ಬೆಕ್ಕಮ್ಮನನ್ನು ನೆಟ್​ಮಂದಿ ಬೆರಗಿನಿಂದ ನೋಡುತ್ತಿದೆ. ಗಬಕ್ಕೆಂದು ಮೊಟ್ಟೆಯನ್ನೋ, ಮರಿಗಳನ್ನೋ ನುಂಗಿದರೆ ಒಂದೇ ಸೆಕೆಂಡ್​! ಆರಾಮಾಗಿ ಹೊಟ್ಟೆ ತುಂಬುತ್ತದೆ ಬೆಕ್ಕಮ್ಮನದು. ಆದರೆ ಹಾಗೆ ಮಾಡಿಲ್ಲ ಈ ಬೆಕ್ಕಮ್ಮ, ನೋಡಿ ತಾಯ್ತನದ ಗಂಭೀರತೆಯನ್ನು ಕಳೆಯನ್ನೂ ಅದರ ಮುಖದ ಮೇಲೆ!

Viral Video: ಕೋಳಿಮೊಟ್ಟೆಗಳಿಗೆ ಕಾವು ಕೊಟ್ಟದ್ದಲ್ಲದೇ ಮರಿಗಳನ್ನೂ ಪೋಷಿಸುತ್ತಿರುವ ಬೆಕ್ಕಮ್ಮ
ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನು ಮಾಡಿದ ಬೆಕ್ಕಮ್ಮ
Follow us on

Cats : ಇತ್ತೀಚೆಗೆ ಬೆಕ್ಕೊಂದು ಕೋಳಿಮರಿಗಳನ್ನು ದತ್ತು ತೆಗೆದುಕೊಂಡ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಇನ್ನೊಂದು ಬೆಕ್ಕು ಕೋಳಿಮೊಟ್ಟೆಗಳನ್ನೇ ದತ್ತು (Adoption) ತೆಗೆದುಕೊಂಡಿದೆ! ಒಂದು ಮೊಟ್ಟೆಯನ್ನೂ ಎತ್ತಿಕೊಳ್ಳಲು ಈ ಬೆಕ್ಕು ಬಿಟ್ಟಿಲ್ಲ. ಆದರೂ ಬೆಕ್ಕಿನ ಹೊಟ್ಟೆ ಕೆಳಗೆ ಕಾವಿಗಿರುವ ಮೊಟ್ಟೆಯನ್ನು ತೆಗೆದುಕೊಳ್ಳಲು ಪೋಷಕರು ಪ್ರಯತ್ನಿಸಿದ್ದಾರೆ. ಆಗ ಅವರನ್ನು ಸರೀ ದುರಗುಟ್ಟಿಕೊಂಡು ಮತ್ತೆ ಆ ಮೊಟ್ಟೆಯನ್ನು ತನ್ನ ಹೊಟ್ಟೆಯ ಕೆಳಗೆ ಕಾವು ಕೊಡಲು ಇಟ್ಟುಕೊಂಡಿದೆ. ಸುಮಾರು ಆರೇಳು ಮೊಟ್ಟೆಗಳಿಗೆ ಕಾವು ಕೊಟ್ಟು ಒಂದೊಂದೇ ಮರಿಯು ಮೊಟ್ಟೆಯೊಡೆದು ಹೊರಬರುವುದನ್ನು ಗಮನಕೊಟ್ಟು ನೋಡಿದೆ. ತನ್ನವೇ ಮರಿ ಎಂಬಂತೆ ಅವುಗಳನ್ನು ನೆಕ್ಕಿ ಮುದ್ದಿಸಿದೆ.

ಇದನ್ನೂ ಓದಿ : Viral: ಮ್ಯಾಟ್ರಿಮೋನಿಯಲ್​ ಸೈಟ್​ನಿಂದ ರೂ 45 ಲಕ್ಷ ವಂಚಿಸಲು ಪ್ರಯತ್ನಿಸಿದ ವ್ಯಕ್ತಿ; ಮಹಿಳೆ ಆರೋಪ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೊಟ್ಟೆಯ ಕವಚದಿಂದ ಮರಿಗಳೆಲ್ಲ ಹೊರಬಂದಮೇಲೆ ಬೆಚ್ಚಗೆ ಬೆಕ್ಕಮ್ಮನ ಮಡಿಲಿನಲ್ಲಿ ಮಲಗಿಕೊಂಡಿವೆ. ಅವುಗಳ ಲಾಲನೆ ಪೋಷಣೆಯನ್ನು ಅತ್ಯಂತ ಪ್ರೀತಿಯಿಂದ, ಜವಾಬ್ದಾರಿಯಿಂದ ನಿರ್ವಹಿಸಿದೆ ಈ ಮುದ್ದಿನ ಸೊಕ್ಕು! ಆದರೆ ಈ ವಿಡಿಯೋ ನೋಡಿದ ಮೇಲೆ ಮುದ್ದಿನ ಸೊಕ್ಕು ಅಂತೆಲ್ಲ ಹೇಳಲು ಮನಸ್ಸು ಬರುವುದೆ?

ಬೆಕ್ಕಮ್ಮನ ಕೋಳಿಮರಿಗಳನ್ನು ನೀವೇ ನೋಡಿ

ಈ ವಿಡಿಯೋ ಅನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 15,000 ಜನರು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದಾರೆ. ಮೊಟ್ಟೆ, ಕೋಳಿ ಎಂದರೆ ಬೆಕ್ಕಿಗೆ ಒಂದೇ ಗುಕ್ಕು, ಆದರೆ ಈ ವಿಡಿಯೋದಲ್ಲಿ ಎದೆಂಥಾ ವಿಚಿತ್ರ ನಡೆಯುತ್ತಿದೆ ಎಂದು ನೆಟ್ಟಿಗರು ಬೆರಗಾಗಿದ್ದಾರೆ. ಬೆಕ್ಕಿನಷ್ಟೇ ತೂಗುವಷ್ಟು ದೊಡ್ಡವಾಗಿವೆ ಈ ಕೋಳಿಗಳು. ಅದೇ ಘನಗಂಭೀರದಿಂದ ತಾಯ್ತನವನ್ನು ಹೇಗೆ ನಿಭಾಯಿಸುತ್ತಿದೆ ನೋಡಿ! ಎಂದು ಈ ವಿಡಿಯೋ ಅನ್ನು ನೆಟ್ಟಿಗರು ಬಿಟ್ಟಕಣ್ಣುಗಳಿಂದ ನೋಡುತ್ತಿದ್ದಾರೆ.

ಇದನ್ನೂ ಓದಿ : Viral: ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ನೋಟುಗಳು; ಇದು ಹಳೆಯ ವರಸೆ ಎಂದ ನೆಟ್ಟಿಗರು

ಪ್ರಕೃತಿಯಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ಇರುವಂತೆ ಸೌಹಾರ್ದ ಸಂಬಂಧಗಳು ಮನುಷ್ಯರಲ್ಲಿ ಯಾಕಿಲ್ಲ? ಎಂದು ಕೇಳಿದ್ದಾರೆ ಕೆಲವರು. ತನ್ನ ಆಹಾರವೆಂದು ಬೆಕ್ಕಿಗೆ ಗೊತ್ತಿದ್ದರೂ ಎಷ್ಟು ಪ್ರೀತಿಯಿಂದ ಇವುಗಳನ್ನು ಪೋಷಿಸಿದೆ ಮತ್ತು ಜೀವಿಸುತ್ತಿದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ವಿಡಿಯೋ ನನ್ನ ಈ ದಿನವನ್ನು ಅರಳಿಸಿತು ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ