ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅಂಗಡಿ ಮಾಲೀಕರು ಬೃಹತ್ ರಿಯಾಯಿತಿ ಅಥವಾ ಒಂದನ್ನು ಖರೀದಿಸಿದರೆ ಇನ್ನೊಂದು ಉತ್ಪನ್ನ ಉಚಿತ ಎಂಬೆಲ್ಲಾ ಮಾರುಕಟ್ಟೆ ತಂತ್ರಗಳನ್ನು ಉಪಯೋಗಿಸುತ್ತಾರೆ. ಈ ರೀತಿಯ ಮಾರುಕಟ್ಟೆ ತಂತ್ರಗಳಿಗೆ ಜನರು ಬೇಗ ಮರುಳಾಗುತ್ತಾರೆ ಹಾಗೂ ಆ ಉತ್ಪನ್ನವನ್ನು ಖರೀದಿಸಲು ಜನರು ಮುಗಿಬೀಳುತ್ತಾರೆ. ಇತ್ತೀಚಿಗೆ ತೆಲಂಗಾಣದ ಕರೀಂನಗರದಲ್ಲಿ ರೆಸ್ಟೋರೆಂಟ್ ಮಾಲೀಕರೊಬ್ಬರು ಇದೇ ರೀತಿ ಗ್ರಾಹಕರನ್ನು ಆಕರ್ಷಿಸಲು ವಿನೂತನ ಮಾರುಕಟ್ಟೆ ತಂತ್ರವನ್ನು ಬಳಸಿದ್ದಾರೆ. ಹೊಸ ರೆಸ್ಟೋರೆಂಟ್ ತೆರೆದಿರುವ ವ್ಯಕ್ತಿಯೊಬ್ಬರು ಆರಂಭಿಕ ಆಫರ್ ಅಡಿಯಲ್ಲಿ 1 ರೂಪಾಯಿಯ ನೋಟು ತಂದವರಿಗೆ ತಲಾ ಒಂದು ಬಿರಿಯಾನಿ ನೀಡಲಾಗುವುದು ಎಂದು ಎಲ್ಲೆಡೆ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಿದ್ದಾರೆ.
ರುಚಿಕರವಾದ ಬಿರಿಯಾನಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಬಿರಿಯಾನಿ ಸವಿಯಲೆಂದೇ ದಿನನಿತ್ಯ ಹೋಟೆಲ್ ಗೆ ಹೋಗುವ ಸಾವಿರಾರು ಸಂಖ್ಯೆಯ ಜನರಿದ್ದಾರೆ. ಸಾಮಾನ್ಯವಾಗಿ ಒಂದು ಪ್ಲೇಟ್ ಚಿಕನ್ ಬಿರಿಯಾನಿಗೆ 100 ರಿಂದ 200 ರೂ. ಗಳವೆರೆಗೂ ಬೆಲೆ ಇರುವಾಗ 1. ರೂಪಾಯಿಗೆ ಬಿರಿಯಾನಿ ಸಿಗುವುದೆಂದರೆ ಯಾರಾದರು ಈ ಸುವರ್ಣವಕಾಶವನ್ನು ಸುಮ್ಮನೆ ಬಿಡುವುದುಂಟೆ. ಹೀಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಹೋಟೇಲ್ ಶುಭಾರಂಭದ ದಿನ ಅಂದರೆ ಜೂನ್ 17 ರ ಶನಿವಾರದಂದು 1 ರೂಪಾಯಿ ಬಿರಿಯಾನಿ ಖರೀದಿಸಲು ತಮಿಳುನಾಡಿನ ಕರೀಂ ನಗರದಲ್ಲಿ ಜನಸಾಗರವೇ ಹರಿದು ಬಂದಿದೆ. ಬಿರಿಯಾನಿ ಪ್ರಿಯರು ಮುಂಜಾನೆಯೆ ಹೋಟೆಲ್ ಮುಂದೆ ಜಮಾಸಿದ್ದು, ಗಂಟೆಗಳು ಕಳೆದಂತೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು.
ನೂರಾರು ಪ್ಲೇಟ್ ಬಿರಿಯಾನಿಯನ್ನು ಪಾರ್ಸೆಲ್ ಸೇರಿದಂತೆ, ಹೋಟೆಲ್ ನಲ್ಲಿಯೂ ಗ್ರಾಹಕರಿಗೆ ಬಿರಿಯಾನಿ ಉಣಬಡಿಸಲಾಯಿತು. ಆದರೆ ರಿಯಾಯಿತಿಯ ಬಿರಿಯಾನಿ ಸವಿಯಲು ಸಿಕ್ಕ ಅತ್ಯಾಕರ್ಷಕ ಅವಕಾಶ ಮಾತ್ರ ಅಸ್ತವ್ಯಸ್ತವಾಯಿತು. ಹೋಟೆಲ್ ಮುಂದೆ ಭಾರಿ ಜನದಟ್ಟಣೆಯ ಕಾರಣ ಹೋಟೆಲ್ ಆಡಳಿತ ಮಂಡಳಿ ಜನರನ್ನು ನಿಯಂತ್ರಿಸಲು ವಿಫಲವಾಗಿ, ಹೋಟೆಲ್ ಶೆಟರ್ ಮುಚ್ಚಬೇಕಾಯಿತು. ಈ ನಡುವೆ ಶೆಟರ್ ಬಾಗಿಲು ಮುಚ್ಚುತ್ತಿದ್ದಂತೆ ಜನರು ರೊಚ್ಚಿಗೇಳುವಂತಹ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೋಡಬಹದು.
ಇದನ್ನೂ ಓದಿ: Viral Video: ಕ್ಷಣಾರ್ಧದಲ್ಲಿ ಚಿರತೆಯ ವಶದಿಂದ ಪಾರಾಗಿ ಬುದ್ಧಿವಂತಿಕೆ ಮೆರೆದ ಮರಿ ಹಕ್ಕಿ
ಅವ್ಯವಸ್ಥೆಯ ಕಾರಣ ಆ ಸ್ಥಳದಲ್ಲಿ ಅಗಾಧ ಸಂಚಾರ ದಟ್ಟಣೆಯೂ ಉಂಟಾಯಿತು. ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಆಗಮಿಸಿ ಜನರನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಹಾಗೂ ಬಿರಿಯಾನಿ ಕೊಳ್ಳುವ ಆತುರದಲ್ಲಿ ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರ ಹಾಗೂ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದವರ ಮೇಲೆ 200 ರಿಂದ 250 ರೂಪಾಯಿ ದಂಡವನ್ನು ಕೂಡಾ ವಿಧಿಸಿದರು. ನಂತರ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ಹೋಟೆಲ್ ಆಡಳಿತ ಮಂಡಳಿ ಗ್ರಾಹಕರಿಗೆ ಕ್ಷಮೆಯಾಚಿಸಿದೆ.
ಎ.ಬಿ.ಎಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಹೋಟೆಲ್ ನ ಹೊರಬದಿಯಲ್ಲಿ ಬಿರಿಯಾನಿ ಖರೀದಿಸಲು ಗ್ರಾಹಕ ಜಟಾಪಟಿ ನಡೆಸುವುದನ್ನು ಹಾಗೂ ಬಿರಿಯಾನಿ ಖರೀದಿಸಲು ನೆರೆದಿರುವ ಜನಸಾಗರವನ್ನು ಕಾಣಬಹುದು. ಕಾಣಬಹುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:11 am, Tue, 20 June 23